ಸಂಕ್ರಾಂತಿ ವಿಶೇಷ.
ಸಂಕ್ರಾಂತಿ ಎಂದರೆ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯನಕ್ಕೆ ಸಂಚಲನ ಮಾಡುವುದಕ್ಕೆ ಸಂಕ್ರಾಂತಿ ಎಂದು ಕರೆಯುತ್ತಾರೆ. ಪ್ರಕೃತಿಯಲ್ಲಿ ಲವಲವಿಕೆ ತುಂಬುವ ಸಂಕ್ರಾಂತಿ. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸಂಕ್ರಾಂತಿ ಬಂದ ಕ್ಷಣ ಜನರಲ್ಲಿ ನವೋಲ್ಲಾಸ ಚಿಮ್ಮುವದು. ಬೇಸಿಗೆಯ ಧಗೆ. ಮಳೆಗಾಲದ ಮಳೆ. ಚಳಿಗಾಲದ ಚಳಿ ದೂರವಾಗುತ್ತಿದ್ದಂತೆ ವಾಯುಮಂಡಲದ ವಿಕಾಸ. ಸುಗ್ಗಿ ಹಿಗ್ಗು ದವಸ ಧಾನ್ಯಗಳ ಸಮೃದ್ಧಿಯು ಪ್ರತಿಯೊಬ್ಬರಿಗೂ ನವ ಚೈತನ್ಯ ತುಂಬುವುದು. ಇಂತಹ ವಿಶಿಷ್ಟವಾದ ಸಂದರ್ಭದಲ್ಲಿ ಆಚರಣೆಗೆ ಬಂದ ಹಬ್ಬವೇ ಸಂಕ್ರಾಂತಿ. ನವ ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ. ಹಬ್ಬದಲ್ಲಿ ಕುಸಿರೆಳ್ಳನ್ನು ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಹೊಸ ಬಟ್ಟೆ ತೊಟ್ಟು ಸಿಹಿ ತಿಂಡಿ ತಿನ್ನುತ್ತ ಪರಸ್ಪರ ಶುಭ ಕೋರುತ್ತಾ ಪರಸ್ಪರ ಬಾಂಧವ್ಯ ಸ್ನೇಹದ ಸಂತಸದ ಹಬ್ಬ. ಇದರ ಜೊತೆಗೆ ಎಳ್ಳಿನ ಜೊತೆಗೆ ಸಕ್ಕರೆ ಅಚ್ಚು ಗಳನ್ನು ಹಣ್ಣುಗಳನ್ನು ಕಬ್ಬಿನ ತುಂಡುಗಳನ್ನು ಇಟ್ಟು ಮನೆಯಲ್ಲಿ ಪೂಜೆ ಮಾಡಿ ನಂತರ ಎಲ್ಲರಿಗೂ ಹಂಚಿ ಸಂಭ್ರಮಿಸುವರು. ರೈತನು ಬೆಳೆದಂತ ಜೋಳ ಸಜ್ಜಿ ಅಗಸಿ ಎಳ್ಳು ಶೇಂಗಾ ಎಲ್ಲ ತರಹದ ನವಸಧಾನ್ಯಗಳನ್ನು ಕೂಡಿಸಿ ಅಡಿಗೆ ಮಾಡಿ ನೈವೇದ್ಯ ಮಾಡುವರು. ಎಲ್ಲರಿಗೂ ಹಂಚಿ ಸಂಭ್ರಮಿಸುವರು. ಸಂಕ್ರಾಂತಿ ಎಂದು ಸೂರ್ಯ ಮಕರ ರಾಶಿಯ ಪ್ರವೇಶಿಸುವ ವಿಶಿಷ್ಟ ದಿನ ಮಕರ ಸಂಕ್ರಾಂತಿ. ಸೂರ್ಯನ ಪಥದ ಬದಲಾವಣೆ ಕಾಲ 12 ರಾಶಿಯ ಕಾರಣದಿಂದ ಒಂದು ಸೌರಪಥದಲ್ಲಿ 12 ಸೌರಮಾನಗಳು. ಇದಕ್ಕೆ ಆಯಾ ರೀತಿಯ ಹೆಸರುಗಳು. ಇದೇ ರೀತಿಯಾಗಿ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಉಪಕ್ರಮಿಸುವ ಹಂತವೇ ಸಂಕ್ರಮಣ. ಉತ್ತರಾಯನವನ್ನು ಪುಣ್ಯ ಕಾಲ ಎಂದು ಗುರುತಿಸುವರು. ಸಂಕ್ರಾಂತಿಯ ಇನ್ನೊಂದು ಮಹತ್ವವೇನೆಂದರೆ ಮಹಾಭಾರತದಲ್ಲಿ ಇಚ್ಚಾಮರಣ ಪಡೆದ ಭೀಷ್ಮಾಚಾರಿಯು ಕುರುಕ್ಷೇತ್ರದಲ್ಲಿ ಕೌರವ ಪಾಂಡವರ ಯುದ್ಧದ ನಂತರ ಉತ್ತರಾಯಣದಲ್ಲಿ ಪ್ರಾಣಬಿಟ್ಟರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿಂದ ಶರತ್ ಕೈಯಲ್ಲಿ ಮಲಗಿದ್ದರು. ಉತ್ತರಾಯನದಲ್ಲಿ ಪ್ರಾಣತ್ಯಾಗ ಮಾಡಿದರು. ಉತ್ತರಯಾನದಲ್ಲಿ ಹಗಲು ಹೆಚ್ಚು ಲವಲವಿಕೆಯಿಂದ ಕೂಡಿರುತ್ತದೆ. ವರ್ಷದ ದುಡಿಮೆಯ ಫಲದ ಭಾಗ್ಯವನ್ನು ಮನೆಗೆ ತುಂಬಿಸಿಕೊಂಡು ಸಂತೃಪ್ತಿಯಿಂದ ನಗೆ ಸೂಸುವುದೆ ಕೃಷಿಕ ಸಂಕ್ರಾಂತಿ. ಹೊಸ ವರ್ಷದ ಸಂಭ್ರಮಾಚರಣೆ ವೈರತ್ವ ಮರೆತು ಸ್ನೇಹ ಬಿಸಿಯು ಹಬ್ಬ ಸಂಕ್ರಾಂತಿ ಹಬ್ಬ.
✍🏻 ಸವಿತಾ ಅಂಗಡಿ. ಮುಧೋಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ