ಹಾರಿಸಿತು ಭಾರತ ತ್ರಿ ವಿಕ್ರಮ ವಿಜಯವನು
ಸಾಧನೆಯ ಗುರಿ ಮುಟ್ಟಿತು ಕೊನೆಗೊಂದು ದಿನವನು
ಹಲವಾರು ವರ್ಷದ ಪರಿಶ್ರಮದ ಈ ದಿನ
ಛಲ ಬಿಡದೆ ವಿಜ್ಞಾನಿಗಳ ಪ್ರಯತ್ನದಿಂದಾದ ಸುದಿನ
ವಿಶ್ವಕ್ಕೆಲ್ಲ ಹರಡಿತು ಧ್ವಜದ ಸಂಭ್ರಮ
ಕನಸೊಂದು ನನಸಾಗಿಸಿತು ವಿಜ್ಞಾನಿಗಳ ಸಂಗಮ
ಸಾಧಿಸಿ ತೋರಿಸಿದರು ಛಲ ಬಿಡದೆ ಗುರಿಯನು
ಜಗಕೆಲ್ಲ ತಂದು ಕೊಟ್ಟರು ಸಂತಸದ ಕ್ಷಣವನು
ಮಾಡಿದ ಪ್ರಯತ್ನಕ್ಕೆ ಫಲ ದೊರಕಿತು
ಗುರಿ ಮುಟ್ಟಿತು ಕೊನೆಗೊಮ್ಮೆ ಪ್ರಯತ್ನ ಫಲಿಸಿತು
ವಿಜ್ಞಾನಿಗಳಿಂದಾಯಿತು ಅದ್ಭುತ ಸಾಹಸ
ದೇಶಕ್ಕೆ ತಂದು ಕೊಟ್ಟರು ಹೆಮ್ಮೆಯ ಧ್ವಜವನು
ಮೆರೆಯುತಿಹುದು ನಮ್ಮ ಬಾವುಟ
ಹರಡುತ್ತಿರುವುದು ವಿಶ್ವಕ್ಕೆಲ್ಲ ಹೆಮ್ಮೆಯ ಬಾವುಟ
ಚಂದ್ರಂಗಳಕ್ಕೆ ಕೈಚಾಚಿದ ಬಾವುಟ
ಜಗಕೆಲ್ಲ ಹರಡಿದ್ದು ಸಂತಸದ ಕೂಗಾಟ
ಇದುವೇ ನಮ್ಮ ಪ್ರಯತ್ನದ ಬಾವುಟ
ಚಂದ್ರಮಾನದ ಎತ್ತರಕ್ಕೆ ಬೆಳೆಯಿತು ಬಾವುಟ
ಎಲ್ಲೆಡೆಯಲ್ಲಿ ಸಂಭ್ರಮಿಸಿತು ವಿಜ್ಞಾನಿಗಳ ಸಾಹಸ
ಧನ್ಯವಾಯಿತು ವಿಜ್ಞಾನಿಗಳ ಪರಿಶ್ರಮದಿಂದ ಭಾರತ
ಇಂಥ ಶ್ರೇಷ್ಠ ವಿಜ್ಞಾನಿಗಳನ್ನು ಪಡೆದಂತ ಪುಣ್ಯ ಭಾರತ
ಜೈ ಹಿಂದ್ ಜೈ ಕರ್ನಾಟಕ
✍️ಸವಿತಾ ಅಂಗಡಿ. ಮುಧೋಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ