ನಲ್ಲ ನಿನ್ನ ನೆನೆ ನೆನೆದು ಹೂವಾಗಿದೆ ತನುವು
ಏಕಾಂತದಲೂ ಸುಖಿಯಾಗಿ ಹಾಡುತಿದೆ ಮನವು
ಮನದ ಬಾನಲಿ ನೀ ಹೊಳೆವ ಚಂದ್ರಮ
ನಿನ್ನ ನೆನಪೆಂದರೆ ಮನದಲೇನೋ ಸಂಭ್ರಮ
ಯುಗವಾಗಿದೆ ನಿನ್ನ ನಿರೀಕ್ಷೆಯ ಕ್ಷಣ ಕ್ಷಣವೂ
ಹೊಸತು ಭಾವದಿ ಮಿಡಿದ ಮಧುರ ರಿಂಗಣವು
ಅನುರಣಿಸುತಿದೆ ಪ್ರೇಮ ಪಲ್ಲವಿಯ ಪದ
ಮನದಂಗಳವ ತುಂಬಿದೆ ನಿನ್ನೊಲವಿನ ನಾದ
ಸುಳಿವು ನೀಡದೆ ಕದ್ದೊಯ್ದೆ ಮನವ ನೀನು
ನಿನ್ನೀ ಅಪರಾಧಕೆ ಎಲ್ಲಿ ಧಾವೆ ಹೂಡಲಿ ನಾನು
ಹೃದಯ ಚೋರನಿಗೆ ನೀಡಿದೆ ಒಲವನೇ ಕಾಣಿಕೆ
ಮಾರು ಹೋದೆನು ನಾ ಶಿಕ್ಷೆಯೇ ಇಲ್ಲದ ಕಳ್ಳತನಕೆ
ಮಧುಮಾಲತಿರುದ್ರೇಶ್ ಬೇಲೂರು
✍️✍️
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ