ಭಾನುವಾರ, ಮಾರ್ಚ್ 30, 2025

ದಾರಿದೀಪ...

""ದಾರಿದೀಪ ""

ಹಿಡಿಯಬೇಕಿದೆ ಕನಸ ದಾರಿಗೆ ದೀಪವನು
 ತೆರೆಯಬೇಕಿದೆ ಮನಸಿನ ಕದವನು 

ತಮ ಕವಿದಮನವದು ಕಗ್ಗತ್ತಲೆಯ ಕಾಡು
 ಭರವಸೆಯ ದೀಪ ಹಿಡಿದು ಹುಡುಕೋಣ ಜಾಡು

 ಬಾಳಹಾದಿಯಲಿಹುದು ಏರುಪೇರುಗಳು ಹಲವು
 ಆತ್ಮಸ್ಥೈರ್ಯದಿಂದ ನಡೆದರೆ ಖಚಿತ ಗೆಲುವು 

ಒಂಟಿ ಪಯಣಿಗನೆಂದು ಕೊರಗದಿರು ಬಾಳಲಿ
 ಇರುವರು ಸಾವಿರಾರು ನಿನ್ನಂತೆ ಜಗದಲಿ

 ದೃಢಸಂಕಲ್ಪವೆಂಬ ಹಣತೆಯ ಹಚ್ಚು ನೀನು 
ಎರೆಯುತಿರು ಛಲ ನಂಬಿಕೆಗಳೆಂಬ ತೈಲವನು

 ಬಿಡದೆ ಸಾಗುತಿರು ಆತ್ಮಜ್ಯೋತಿ ಬೆಳಗುತಾ
 ಕನಸು ನನಸು ಮಾಡುವೆಡೆಗೆ ಚಿತ್ತ ಹರಿಸುತ
 ಮಧುಮಾಲತಿ ರುದ್ರೇಶ್ ಬೇಲೂರು
💐💐💐🙏🏻🙏🏻

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...