ಭಾನುವಾರ, ಮಾರ್ಚ್ 30, 2025

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು...



ಹೊಸ ವರುಷದ ಬಂದಿದೆ
ಮರ ಗಿಡಗಳಲ್ಲಿ ಚಿಗುರು ಎಲೆ 
ಹಸಿರಾಗಿ ಕಣ್ಣುದುಂಬಿದೆ
ಎಲ್ಲರ ಮನಸುಗಳು ಒಂದಾಗಿ 
ಸಿಹಿಯನ್ನ ಎಲ್ಲರೊಡನೆ ಬೆರಸಿ
ಕಹಿಯನ್ನ ಎಲ್ಲರಿಂದ ಮರೆಸಿ
ಬನ್ನಿ ಬಂದಿದೆ ಹೊಸ ಸಂವತ್ಸರದ
ಋತುವಿನ ಚಿಗುರಿನ ಹಸಿರು 
ತೋರಣದ ಈ ಯುಗಾದಿ ಹಬ್ಬ..


ಬೇವು - ಬೆಲ್ಲವನ್ನ 
ಮಿತಿಯಾಗಿ ಆನಂದವಾಗಿ 
ತಿಂದು ಸವಿಯೋಣ 
ಕುಟುಂಬಗಳ ಜೊತೆಯಲ್ಲಿ 
ಇದ್ದು ಜೇನಿನ 
ಗೂಡಿನಂತೆ ಹಬ್ಬ ಆಚರಿಸೋಣ 
ಮಾವಿನ ಚಿಗುರಿನ ಎಲೆಯಂತೆ
ಹಸಿರಾಗಲಿ ನಿಮ್ಮ ಬದುಕು 
ಈ ಯುಗಾದಿ ಹಬ್ಬದಲ್ಲಿ...


ನಿನ್ನ ಜೀವನದ ಪ್ರತಿ ದಿನವೂ 
ನಿನಗೆ ಹೊಸ ಹಬ್ಬವಿಂದ್ದತೆ
ಯಾಕಂದ್ರೆ ನೀ ಮಾಡುವ ಕಾಯಕ ಸೇವೆಯೇ ವಿಶೇಷವಿದ್ದಂತೆ
ನೀ ನಡೆಯುವ ಹೆಜ್ಜೆಯಲ್ಲಿ
ಹಸಿರು ನಿನಗೆ ಉಸಿರಾಗಲಿ 
ನಿನ್ನ ಮಾಡುವ ಸೇವೆ ಎಲೆ 
ಮರಿ ಕಾಯಿಯಂತೆ ನಿಸ್ವಾರ್ಥವಾಗಿ
ನೊಂದವರಿಗೆ ಆಸರೆಯಾಗಿ
ಬಡ ಮಕ್ಕಳಿಗೆ ಗುರುವಾಗಿ
ಹೆತ್ತವರಿಗೆ ಮುದ್ದಿನ ಮಗಳಾಗಿ
ಒಂದು ದಿನ ಹೆಸರು ಮರವಾಗಿ 
ದೊಡ್ಡದಾಗಿ ಬೆಳೆಯಲಿ...

          ಕಾರ್ತಿಕ್...✍️
     ( ಶ್ರವಣ ಬೆಳಗೊಳ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...