ಮುದುವೊಳಲದ ಬೆಳಗಲಿ ಊರಾಗ ಬಳೆಗಾರ ಕುಲದಾಗ
ಹುಟ್ಟಿದ್ದು ರತ್ನವೊಂದು ಕನ್ನಡ ನಾಡಿನಾಗ
ಸೌಮ್ಯ ಸಂವತ್ಸರದೊಳು ಜನಿಸಿ ಬಂದಂತ
ತಾಯಿ ಅಬ್ಬಲಬ್ಬೆ. ತಂದೆ ಜನವಲ್ಲಭೇಂದ್ರ ರ ಸುಪುತ್ರನೀತ
ಚಾವುಂಡರಾಯನಲಿ ಆಶ್ರಯ ಪಡೆದ ವ
ಅತ್ತಿಮಬ್ಬೆಗಾಗಿ ಅಜಿತಪುರಾಣ ರಚಿಸಿದವ
ಕವಿ ಚಕ್ರವರ್ತಿ ಕವಿ ತಿಲಕ ಬಿರುದು ಪಡೆದ ನೀತ
ವರಕವಿ ಚಿರಕವಿ ಮಹಾಕವಿ ಯಾದವ
ರನ್ನನೆಂಬ ಎರಡಕ್ಷರದಲ್ಲಿದೆ ಗಮ್ಮತ್ತು
ಕವಿ ಚಕ್ರವರ್ತಿಯ ಕಾವ್ಯದ ತಾಕತ್ತು
ದಿಟ್ಟ ಸಾಧನೆಗೆ ಊರಿಂದು ಊರಿಗಲಿದಾಡಿದ ಶ್ರಮಜೀವಿತ
ಶ್ರವಣಬೆಳಗೊಳದ ಮೇಲಿನ ಸಹಿ ಕವಿರತ್ನ
ದಾನ ಚಿಂತಾಮಣಿ ಅತ್ತಿಮಬ್ಬೆಯ ಕವಿ ಶಿಶು ಈತ
ಗದಾಯುದ್ಧ ಅಜಿತಪುರಾಣ ಕೃತಿಗೆ ನವರಸದಾತ
ಕವಿರತ್ನ ಕವಿ ಮುಖ ಕವಿರಾಜ ಬಿರುದು ಹೊತ್ತಂತ
ರತ್ನತ್ರೆಯರಲ್ಲಿ ಒಬ್ಬನಾದ ರನ್ನ
ಮುಧೋಳದ ಧ್ರುವ ನಕ್ಷತ್ರ ರನ್ನ
ನಾಡಿನ ಸಾಹಿತ್ಯ ರತ್ನ ನಮ್ಮ ರನ್ನ
✍🏻 ಸವಿತಾ ಅಂಗಡಿ. ಮುಧೋಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ