ಶುಕ್ರವಾರ, ಮಾರ್ಚ್ 7, 2025

ಹೆಣ್ಣು...

ಹೆಣ್ಣು...

ಜೀವವಿತ್ತು ಜನ್ಮ ಕೊಟ್ಟವಳು 
ಭೂಮಿಯಂತೆ ನಿಸ್ವಾರ್ಥದಿ ಹೆತ್ತು ಹೊತ್ತವಳು 
ಹೊತ್ತು ಹೊತ್ತಿಗೆ ಸರಿಯಾಗಿ ತುತ್ತನಿಟ್ಟವಳು 
ತನ್ನದೆಲ್ಲ ದಾರೆಯೆಯೆದ ತ್ಯಾಗಮಾಯಿಯವಳು 

ಹೆತ್ತ ಮನೆ ಮೆಟ್ಟಿದ ಮನೆ ಜ್ಯೋತಿಯಾಗಿ ಬೆಳಗುವಳು 
ಒಳಗು ಹೊರಗೂ ದಣಿದು ದುಡಿಯುವಳು 
ಮಾತೆ ಸೋಹದರಿ ಮಡದಿ ಮಗಳು
ಗೆಳತಿಯಾಗಿ ಹಲವು ಪಾತ್ರಗಳು 

ವೃತ್ತಿಯೊಂದಿಗೆ ಪ್ರವೃತ್ತಿ ನಿರ್ವಹಿಸುವಳು
ದೇಶ ಸೇವೆ ಮಾಡುತ್ತಿಹಳು
 ಹೆಗಲಿಗೆ ಹೆಗಲಾಗಿಹಳು 
ಎಲ್ಲವ ಸಮರ್ಥವಾಗಿ ಸಾಧಿಸುತಿಹಳು 

ಕೊನೆಯಾಗಿಲ್ಲ ಇನ್ನೂ ಹೆಣ್ಣು ಇಂಥದೆಕೆಂಬ ಹಣೆಪಟ್ಟಿಯು 
ಹೆಣ್ಣೇ ಹೆಣ್ಣನ್ನು ಶೋಷಣೆಗೈವ ಯಾತನೆಯು 
ಎಲ್ಲೆಲ್ಲೂ ಕಾಮುಕರ ಅಟ್ಟಹಾಸವು 
ರಾರಾಜಿಸುತ್ತಿದೆ ಲಿಂಗತಾರತಮ್ಯವು 

ಸ್ತ್ರೀ ದೇವತೆಯೆಂದು ಆರಾಧಿಸಬೇಕಿಲ್ಲ 
ಮಹಿಳೆಗೆ ಮಹಾರಾಣಿ ಎಂಬ ಪಟ್ಟವು ಬೇಕಿಲ್ಲ 
ಅವಳನು ಒಂದು ಮನುಜಳಂತೆ ಕಂಡರೆ ಸಾಕು 
ಶೋಷಣೆ ಅತ್ಯಾಚಾರ ಅಂತ್ಯವಾಗಬೇಕು 
✍️ಲೋಕರತ್ನ ಸುತೆ 
 ಭವ್ಯ ಸುಧಾಕರಜಗಮನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

''ಶಿಲ್ಪಿಯೂ, ಗುರುವೂ''

“ಶಿಲ್ಪಿಯೂ, ಗುರುವೂ” ಬಿಸಿಲು-ಮಳೆಗಂಜದ ಕಾಯಕಯೋಗಿ ಇವನು..  ಕಗ್ಗಲ್ಲನ್ನು ಕಡೆದು ಶಿಲ್ಪವಾಗಿ ಸುವವನು...  ಶಿಲೆಯಲ್ಲಿ ಸುಂದರ ಕಲೆಯರಳಿಸುವವನು...  ಕಲೆಯಿಂದ ಶಿಲೆಗೊಂದ...