ಭಾನುವಾರ, ಏಪ್ರಿಲ್ 20, 2025

ಶಾಲಾ - ಕಾಲೇಜು ಜೀವನ...

ಶಾಲಾ-ಕಾಲೇಜು ಜೀವನ

ಶಾಲಾ-ಕಾಲೇಜಿನಲ್ಲಿ ನಾವೆಲ್ಲರೂ ಅಪರಿಚಿತರು
ಮರೆಯಲಾಗದ ಬಾಂಧವರು
ಅಂದು ಅನಿಸಿತು ಯಾರು ನಮ್ಮವರಲ್ಲ
ಇಂದು ಅರಿವಾಯಿತು ನಾ 
ಕಳೆದುಕೊಂಡಿದ್ದು ಸ್ವಾತಿ ಮುತ್ತುಗಳು ಅಂತ

ಎಲ್ಲಿಂದಲೋ ಬಂದು 
ಒಂದೆಡೆ ಸೇರಿದೇವು
ಕೋಪ-ತಾಪ ಪ್ರೀತಿ ಕಾಳಜಿ
ಬಾಯಿ ಮಾತಿನ ಜಗಳ
ಬೆವರಿಳಿಸಿದ ನಿತ್ಯದ ತರಗತಿಗಳು

ಅನ್ನ-ಸಾರು, ಹೊಂ ವರ್ಕ
ನಿದ್ದೆಗೆಡಿಸುವ ಪರೀಕ್ಷೆಗಳು
ಸ್ನೇಹಿತರ ಸವಿ ಸವಿ ನೆನಪುಗಳು
ಮರೆಯಲಾಗದ ಅನುಬಂಧ 

ಸ್ನೇಹ ಒಂದು ಸುಂದರ ಕವನ
ಬರೆದರೂ ಮುಗಿಯದ ಕಥನ
ಮರೆತರೂ ಮರೆಯಲಾಗದ ಸಂದನ
ಬಿಟ್ಟರು ಬಿಡಲಾಗದ ಗೆಳೆತನ

ಶಿಕ್ಷಣ ಬೆಳಗಲಿ 
ನಮ್ಮೆಲ್ಲರ ಬಾಳಿನ ಬೆಳಕು ಅಳಿಯದಿರಲಿ 
ಸಹನೆಯು ಮುನ್ನೆಡೆಯಲಿ 
ಜೀವನ ಸ್ನೇಹಿತೆಯ ಆಶಯ ಇದಾಗಲಿ

ಕಾಶಿಬಾಯಿ ಸಿ ಗುತ್ತೇದಾರ 
ಕಲಬುರಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...