ಸರಸ ವಿರಸಗಳ ಸಂಸಾರ
ಸಮರಸವು ಜೀವನದ ಸಾರ
ಬಾಳು ಬೆಳಗುವ ಸಾಗರ
ಭಿನ್ನಮತದ ಸಂಸಾರ ನಿಸ್ಸಾರ
ದಂಪತಿಗಳಲ್ಲಿ ನಡೆವ ಪ್ರಹಾರ
ಬೆಸೆದ್ಹೊಸೆದ ಬದುಕು ಸುಂದರ
ಹೂವು ಅರಳಲು ಬೇಕು ಭ್ರಮರ
ಸೂಸುವ ಸುಗಂಧ ಬಲು ಮಧುರ
ಪ್ರೀತಿಯ ಮುತ್ತು ಪೋಣಿಸಿದ ಸರ
ಮನದ ಭಾವನೆಗಳ ಹಂದರ
ಶ್ರೀಗಂಧ ತೇದಂತಿರಲಿ ಸಂಸಾರ
ರುಚಿ ಹುಳಿ ಖಾರಿನ ಸಾಂಬರ್
ಸವಿದಂತೆ ಬಾಳಿನಲ್ಲೂ ಏರುವ ಸ್ವರ
ತಾಳ್ಮೆಯ ನಡೆಗೆ ಕೇಳುವ ಇಂಚರ
ನೆಮ್ಮದಿ ಸಂತೃಪ್ತಿಯ ಸುಸ್ವರ
ಜೊತೆಯಾದ ಸತಿಗೆ ಪತಿಯ ಆಧಾರ
ಜೀವ ಸಂಕುಲದಲಿ ಕಂಡ ಚಿತ್ತಾರ
ಪಂಚಭೂತಗಳ ಸಮ್ಮಿಶ್ರದ ಸಂಚಾರ
ಪ್ರೀತಿ ಪ್ರೇಮದಲಿ ಒಲಾಡುವ ಧರ
ಶಿವನಲ್ಲವೇ ಇದಕ್ಕೆಲ್ಲ ಸೂತ್ರಧಾರ
ಬೆಳದಿಂಗಳು ಹರಡುವ ಚಂದಿರ
ಸೃಷ್ಟಿಯ ಸಂಭ್ರಮಕೆ ಹಿತಕರ
ವಿರಸವಿರದ ಸಮರಸದ ಚಿಗುರ
ಸೂರ್ಯನೇ ಧರಣಿಗಿಟ್ಟ ಪುರಸ್ಕಾರ
ಚೈತನ್ಯ ತುಂಬುವ ಶಕ್ತಿಯ ಆಗರ
ಶ್ರೀಮತಿ ಸುಲೋಚನಾ ಮಾಲಿಪಾಟೀಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ