ಶುಕ್ರವಾರ, ಏಪ್ರಿಲ್ 25, 2025

ಪುಸ್ತಕದ ಪುಟಗಳು...

ಪುಸ್ತಕದ ಪುಟಗಳು

ಬೆಳೆಸಿತು ಮನುಷ್ಯನಲ್ಲಿ ಹೊಸ ಚೈತನ್ಯ
ಅಂತರಂಗದ ಶುಭ್ರತೆಯ ಹೊಳಪಿಗೆ
ಅಧ್ಯಯನದ ಹವ್ಯಾಸದ ಪ್ರಭಾವಕೆ
ಅರಿವಿನ ಜ್ಞಾನದಂಬರದ ಬೆಳವಣಿಗೆಗೆ 

ಪುಸ್ತಕವೆಂದರೆ ಪ್ರಸನ್ನತೆಯ ದೇಗುಲ 
ಶಾಂತ ಮನಕೆ ದಿವ್ಯತೆಯ ಅಭ್ಯಂಜನ
ಮಸ್ತಕದಿ ಹರಿವ ಸುಂದರ ಭಾವನೆಗಳಿಗೆ
ಅರ್ಥ ಕಲ್ಪಿಸುವ ಕಲಿಕೆಗೆ ಭವ್ಯ ಹಂದರ

ನಶ್ವರದ ಬದುಕಿಗೆ ನುಡಿಸುವ ಸಂತುರ 
ಒಳ್ಳೆಯ ಅಭ್ಯಾಸಕೆ ಧನ್ಯತೆ ಹೃದಯ
ನೆಮ್ಮದಿ ಸಂತೃಪ್ತಿಯ ಮನದಂಗಳ
ಹೊಸ ಆಲೋಚನೆಯ ಹೆಜ್ಜೆ ಗಂಭೀರ 

ಪುಸ್ತಕದ ಪುಟದಿ ಅರಳಿದ ಮೊಗ್ಗುಗಳೆಲ್ಲ
ಸುವಾಸನೆ ಬೀರುತ ಸಂತಸ ಚೆಲ್ಲುವ ಭಾವದಿ 
ದೇಶ ನೋಡು ಕೋಶ ಓದು ನಿಜ ಅರ್ಥಕೆ 
ವಿಸ್ಮಯತೆಯ ಅಸ್ಮಿತೆಯನ್ನು ಅರಿಯುವಿಕೆ

ಗುರುವಿನ ನೆರಳಿನ ಅಂಬರದಲಿ ಬೆಳೆವ ಸಸಿಗೆ
ನವನವೀನತೆಯ ಕಂಡ ಜ್ಞಾನ ಭಂಡಾರವನ್ನ
ಅರ್ಥೈಸುವ ಸಮಯ ಸಂದರ್ಭದ ಲೆಕ್ಕಣಿಕೆಗೆ
ಪುಸ್ತಕದಿಂದ ಮಸ್ತಕದ ಸಂಕೊಲೆ ಬಿಡಿಸಬಹುದು 
ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...