ಪ್ರತಿದಿನ ಶಾಂತಿಯುತ ಜೀವನ ನಡೆಸಲು
ಕಾರಣ ನಮ್ಮೀ ಸೈನಿಕರು
ದೇಶದ ಗಡಿಯನು ಕಾಯುವ ಯೋಧರು
ಅವರೇ ನಮ್ಮಯ ದೇವರು|
ಹೆತ್ತವರ ಮಡದಿ ಮಕ್ಕಳ ತೊರೆದು
ದೇಶವೇ ನಮ್ಮ ಮನೆಯೆನ್ನುವರು
ಮಳೆ ಬಿಸಿಲು ಚಳಿಗಾಳಿಗೆ ಹೆದರದೆ
ದೇಶ ರಕ್ಷಣೆ ಮಾಡುವರು|
ದೇಶವ ಪ್ರೀತಿಸುವ ನಿಜ ದೇಶಭಕ್ತರು
ಶಿಸ್ತುಬದ್ಧ ಜೀವನ ನಡೆಸುವರು
ಲಕ್ಷಾಂತರ ಜೀವ ರಕ್ಷಿಸಲು ತಮ್ಮಯ
ಪ್ರಾಣ ತ್ಯಾಗವ ಮಾಡುವರು|
ಗಡಿಯಲ್ಲಿನ ಗುಂಡಿನ ಸದ್ದಿಗೆ ಹೆದರದೆ
ನೀಡುವರು ಅದಕೆ ಪ್ರತ್ಯುತ್ತರ
ಗುಂಡಿಗೆಯಲಿ ರೋಷ ತುಂಬಿಕೊಂಡು
ಶತ್ರುಗಳ ಎದೆಸೀಳುವ ಕಾತುರ|
ಪ್ರತಿ ಉಸಿರಲಿ ಇರುವುದು ದೇಶಸೇವೆ
ತಾಯ್ನಾಡು ಸವ೯ ಶ್ರೇಷ್ಠ
ದೇಶವೇ ಅವರಿಗೆ ಎಲ್ಲಕ್ಕಿಂತ ಮಿಗಿಲು
ಸಹಿಸುವರು ಬಂದ ಸಂಕಷ್ಟ|
ಸೈನಿಕರ ಬದುಕು ಮುಳ್ಳಿನ ಹಾಸಿಗೆ
ಕಠಿಣ ಸವಾಲಿನ ಜೀವನ
ರಕ್ತದಿ ದೇಶದ ಭವಿಷ್ಯ ಬರೆಯುವರು
ಸಲ್ಲಿಸೋಣ ಅವರಿಗೆ ನಮನ||
- ಸುನಂದಾ ಪುರಾಣಿಕ, ಹಳಿಯಾಳ.ಉತ್ತರ ಕನ್ನಡ.
ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ!!
ಪ್ರತ್ಯುತ್ತರಅಳಿಸಿTq
ಅಳಿಸಿದೇಶಸೇವೆ, ತ್ಯಾಗ, ಅರ್ಪಣಾ ಮನೋಭಾವ ದ ಸೈನಿಕರ ಕುರಿತು ಬರೆದ ಕವಿತೆ ತುಂಬಾ ಸೊಗಸಾಗಿದೆ. ಅಭಿನಂದನೆಗಳು 💐💐💐💐💐
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿ