ಬುಧವಾರ, ಜುಲೈ 2, 2025

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌


ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂರು ತಾಲೂಕಿನ ಸುಮಾರು 45 ಜನ ವೈದ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಹಾಸನದ ಇಂಡಿಯಾನಾ ಆಸ್ಪತ್ರೆಯ  ಹೆಸರಾಂತ ಹೃದಯ ರೋಗ ತಜ್ಞರಾದ ಡಾಕ್ಟರ್ ಶ್ರೀಯುತ ಅನೂಪ್ ರವರು ಯುವಕರಲ್ಲಿ ಹೆಚ್ಚುತ್ತಿರುವಂತಹ ಹೃದಯಘಾತ ಕುರಿತು ಮಾಹಿತಿ ನೀಡಿದರು ಈ ಕಾರ್ಯಕ್ರಮದಲ್ಲಿ ಹಲವರು ಹೃದಯಘಾತದ ಬಗ್ಗೆ  ತಮ್ಮಲ್ಲಿ ಮೂಡಿದಂತಹ  ಪ್ರಶ್ನೆಗಳಿಗೆ ವೈದ್ಯರಲ್ಲಿ ಉತ್ತರವನ್ನು ಪಡೆಯುವುದರ ಮೂಲಕ  ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಹಾಸನ ಹಿಮ್ಸ್ ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಾದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದಂತಹ ಶ್ರೀಯುತ ಡಾಕ್ಟರ್ ರವಿ ಎಸ್
 ಸ್ಥಾನೀಯ ವೈದ್ಯರಾದಂತಹ ಡಾಕ್ಟರ್ ಹರ್ಷ ಕ್ಯಾನ್ಸರ್ ವಿಭಾಗದ ವಿಕಿರಣ ತಜ್ಞರಾದಂತಹ ಡಾಕ್ಟರ್ ಶ್ರೀಯುತ ರಾಘವೇಂದ್ರ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ವಿಜಯ, ತಾಲೋಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವಸಂತಕುಮಾರ್  ಬೇಲೂರಿನ ಯುವ ಮುಖಂಡರಾದಂತಹ ಶ್ರೀಯುತ ಸಂತೋಷ್ ಜಿಲ್ಲಾ ಕೆ ಡಿ ಪಿ ಸದಸ್ಯರಾದಂತಹ ಶ್ರೀಮತಿ ಸೌಮ್ಯ ಆನಂದ್ ಪತ್ರಕರ್ತ ಸಂಘದ ಅಧ್ಯಕ್ಷರಾದಂತಹ ರಘುನಂದನ್ ಕರ್ನಾಟಕ ರಾಜ್ಯ ಸ್ಪಂದನ ಸಿರಿ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಆಶಾಕಿರಣ ಉಪಾಧ್ಯಕ್ಷರಾದಂತಹ ಕೇಶವ ಕಿರಣ್ ತಾಲೋಕು ಅಧ್ಯಕ್ಷರಾದಂತಹ ಶ್ರೀಮತಿ ಪ್ರತಿಭಾಮಯ್ಯ ಸದಸ್ಯರುಗಳಾದಂತಹ ಶ್ರೀಮತಿ  ರಾಧಾ, ಶ್ರೀಮತಿ ರಜನಿ ಗಿರೀಶ್, ಶ್ರೀಮತಿ ಮಮತಾ ವಿರೂಪಾಕ್ಷ, ಶ್ರೀಮತಿ ಗೀತಾ ಧರ್ಮೇಗೌಡ, ಶ್ರೀಮತಿ ಸುಮಾ ಪೃಥ್ವಿ,ಶ್ರೀಮತಿ ಶಶಿಕಲಾ ರವಿಶಂಕರ್ ಹಾಜರಿದ್ದರು ಇದೇ ಸಂದರ್ಭದಲ್ಲಿ ಹೆಸರಂತ ಗಾಯಕರಾದಂತಹ ಕುಮಾರ್ ಚಂದನ್ ಹಾಗೂ ಶ್ರೀಮತಿ ವೇದಶ್ರೀ ಇವರುಗಳು ತಮ್ಮ ಸುಮಧುರ ಗಾಯನದಿಂದ ವೈದ್ಯರನ್ನು ರಂಜಿಸಿದರು ಹೆಸರಾಂತ ಹೃದಯರೋಗ ತಜ್ಞರಾದಂತಹ ಡಾಕ್ಟರ್ ಅನೂಪ್ ವರು ಹಾಗೂ ಡಾಕ್ಟರ್ ಹರ್ಷ ಮತ್ತು ಡಾಕ್ಟರ್ ರವಿ ಇವರು ಮಕ್ಕಳಿಗೆ  ಹೊರಗಿನ ಆಹಾರಗಳಿಂದ  ದೂರವಿದ್ದು ಮನೆಯಲ್ಲೇ ತಯಾರಿಸಿದ ಆಹಾರದ ಜೊತೆಗೆ ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವುದು ದುಶ್ಚಟಗಳಿಂದ ದೂರವಿದ್ದು ದಿನಕ್ಕೆ 8 ಗಂಟೆಗಳ ಕಾಲ ನಿದ್ರಿಸುವುದರಿಂದ ಹೃದಯ ಘಾತ  ತಡೆಯಬಹುದು ಎಂದು ತಿಳಿಸಿದರು ನಂತರ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ  ವೈದ್ಯರನ್ನು ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಮಾತನಾಡಿದಂತಹ ಕರ್ನಾಟಕ ರಾಜ್ಯ ಸ್ಪಂದನ ಸಿರಿ ಜಿಲ್ಲಾಧ್ಯಕ್ಷರಾದಂತಹ ಶ್ರೀಮತಿ ಆಶಾಕಿರಣ ರವರು  ನಮ್ಮ ಆರೋಗ್ಯವನ್ನು ಕಾಪಾಡುವಂತಹ ವೈದ್ಯರನ್ನು  ಅಭಿನಂದಿಸುವುದು ಸಂತಸದ ವಿಷಯ ಇಂತಹ  ವೈದ್ಯರಿಗೆ ಆ ಶ್ರೀ ಚನ್ನಕೇಶವನು  ಆಯಸ್ಸು ಆರೋಗ್ಯವನ್ನು ಕೊಟ್ಟು ಹೆಚ್ಚಿನ ಸೇವೆಯನ್ನು ಮಾಡಲು ಆಶೀರ್ವದಿಸಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಹಾಜರಿದ್ದು ವೈದ್ಯರ ಸಲಹೆಯನ್ನು ಆಲಿಸಿದಂತಹ ಸಭಿಕರು ಮತ್ತು ಅಭಿನಂದನೆಯನ್ನು ಸ್ವೀಕರಿಸಿದಂತಹ ವೈದ್ಯರಿಗೆ ಕಾರ್ಯಕ್ರಮಕ್ಕೆ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಂತಹ ಎಲ್ಲಾ ಅತಿಥಿಗಳಿಗೆ ಪತ್ರಕರ್ತರಿಗೆ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನ ಸಹಾಯವನ್ನು ನೀಡಿದಂತಹ ಎಲ್ಲರಿಗೂ  ಧನ್ಯವಾದಗಳನ್ನು ತಿಳಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

''ಶಿಲ್ಪಿಯೂ, ಗುರುವೂ''

“ಶಿಲ್ಪಿಯೂ, ಗುರುವೂ” ಬಿಸಿಲು-ಮಳೆಗಂಜದ ಕಾಯಕಯೋಗಿ ಇವನು..  ಕಗ್ಗಲ್ಲನ್ನು ಕಡೆದು ಶಿಲ್ಪವಾಗಿ ಸುವವನು...  ಶಿಲೆಯಲ್ಲಿ ಸುಂದರ ಕಲೆಯರಳಿಸುವವನು...  ಕಲೆಯಿಂದ ಶಿಲೆಗೊಂದ...