ಇರುವನಲ್ಲೊಬ್ಬನು!
°°°°°°°°°°°°°°°°°°°°
ಪ್ರಿಯೆ ಕೈಕೊಟ್ಟರು
ಬಂಧು ಕೈಮಾಡಿದರು
ಆತ್ಮೀಯರೆ ಕೈಯೆತ್ತಿದರು
ಬದುಕಲಿಕ್ಕಿಷ್ಟು ಸಾಕು
ಇರುವನಲ್ಲೊಬ್ಬನು
ಮಿತ್ರ ವಿರಮಿಸಿದರು
ತಂದೆ ಮೌನವಾದರು
ತಾಯೆ ಮುನಿಸಿಕೊಂಡರು
ಬದುಕಲಿಕ್ಕಿಷ್ಟು ಸಾಕು
ಇರುವನಲ್ಲೊಬ್ಬನು
ಸಾಲಮನ್ನವಾದರು
ಆಗದೇ ಹೋದರು
ಹಣವೆ ಇರದೆ ಹೋದರು
ಬದುಕಲಿಕ್ಕಿಷ್ಟು ಸಾಕು
ಇರುವನಲ್ಲೊಬ್ಬನು
ಅವರು ಬಂದು ಹೋದರು
ಇವರು ಇರದೆ ಹೋದರು
ತಾನೊಬ್ಬಂಟಿಯಾದರು
ಬದುಕಲಿಕ್ಕಿಷ್ಟು ಸಾಕು
ಇರುವನಲ್ಲೊಬ್ಬನು
ಊಟಕಿಲ್ಲವಾದರು
ಉಡಲು ಕಡಿಮೆಯಾದರು
ಪರದೇಶಿಯಾಗೆ ಅಲೆದರು
ಬದುಕಲಿಕ್ಕಿಷ್ಟು ಸಾಕು
ಇರುವನಲ್ಲೊಬ್ಬನು
ನನಗಾಗಿಯೆ ಕಾದುತಿಹನು
ನನ್ನುಳಿವಿನ ಉಸಿರೆ ಅವನು
ಮತ್ತೆ ಮತ್ತೆ ಬದುಕುತಿಹನು
ನಮ್ಮ ವೀರಯೋಧನು
ಇರುವನಲ್ಲೊಬ್ಬನು
~ ಅಣ್ಣಪ್ಪ ಅರಬಗಟ್ಟೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ