ಬುಧವಾರ, ಆಗಸ್ಟ್ 13, 2025

ನಿವೇದನಾ..

ನಿವೇದನಾ

ಕೈಮುಗಿಯುತ ದೇವರೇ ತಾವಾದಿರಿ
ಘಂಟೆಯಿಲ್ಲ ಜಾಗಟೆಯಿಲ್ಲ
ಧೂಪದಾರತಿ ಅಭಿಷೇಕಗಳಿಲ್ಲ
ದೇವನ ಕಾಣಿಸಿದ ಪ್ರಣತಿ ನೀವು
ಕಂಡನೆ ದೇವ ಕಾಣುವೆನೆ ನಾs

ಕೊರಳ ನೀಡುತ ಹೂವೆ ತಾವಾದಿರಿ
ಕಾಡಲ್ಲ ತೋಟವಲ್ಲ ತಾವಿಲ್ಲ
ಬೇರಿಲ್ಲ, ರೆಂಬೆಕೊಂಬೆ ಕಿರೀಟಗಳಿಲ್ಲ
ಶ್ರೀಗಂಧ ಪರಿಮಳ ತುಂಬಿ ತಾವು
ಕಂಡಿತೆ ಹೂ ಮುಡಿವೆನೆ ನಾs

ಬೊಗಸೆಯೊಡ್ಡುತ ನೀರೇ ತಾವಾದಿರಿ
ಬಾವಿಯಲ್ಲ ಸರೋವರವಲ್ಲ
ರತ್ನಗರ್ಭದಿಂದೆದ್ದ ಆವಿಯೂ ಅಲ್ಲ
ದಾಹ ತಣಿಸುವ ಅಮೃತವು
ಕಂಡಿತೆ ಜಲ ಕುಡಿವೆನೆ ನಾs

ನೀನೆನ್ನುತ ನಾನಾಗಿಯೇ ನಿಂತಿರಿ
ದೇಹವಲ್ಲ ಭೂತಭ್ರಾಂತಿಯಲ್ಲ
ನಾನಾನೆನ್ನುವ ಜಗವೂ ಅಲ್ಲ
ಕಣಕಣದಲೂ ಆತ್ಮವೆ ದೇವ
ಕಂಡಿತೆ ಜೀವ ಒಂದಾಗುವೆನೆ ನಾs
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...