ಗುರುವಾರ, ಜುಲೈ 1, 2021

ಬಳೆ ತೊಡಿಸು ಬಳೆಗಾರ (ಕವಿತೆ) - ಜಿ ಟಿ ಆರ್ ದುರ್ಗ ಬಂಗಾರಪೇಟೆ.

ಬಳೆ ತೊಡಿಸು ಬಳೆಗಾರ

ಬಳೆಗಾರ ಬರುತ್ತಿಲ್ಲ ಬಳೆಗಳ ತೊಡಿಸಾಕ್ಕೆ
ಅಕ್ಕ ತಂಗಿಯರ ಕೈಯಲ್ಲಿ ಬಳೆಯಿಲ್ಲ! ಬಳೆಗಾರ ಬಾರಯ್ಯ ಬಳೆ ಹೊತ್ತು ನಮ್ಮೂರಿಗೆ 

ಕೇರಿ ಕೇರಿ ಸುತ್ತಿ ಹೊತ್ತಾಗುವುದು ಬಾರಯ್ಯ
ಸುತ್ತೆಲ್ಲ ನೆರೆಹೊರೆಯರು ಕರೆಯುತ್ತಾರೆ ! ಬಳೆಗಾರ
ಮುತ್ತೈದೆಯರ ಅಂದ ಚೆಂದವ ನೋಡು ಬಾರಾ

ತವರಿನ ಮನೆಯಲ್ಲಿ ನಾನೆಂದು ಬಂಟನಮ್ಮ
ಬಹು ವರುಷ ನಾನೆ ಬಳೆ ಕೊಡುವೆನು !ಬಂಗಾರಿ
ಚಿತ್ತಾರ ಬಿಡಿಸಿದ ಹಸಿರು ಗಾಜಿನ ಬಳೆಯ

ಸಾಲು ಸಾಲಾಗಿ ಗರತಿಯರು ಬಂದಾರೆ
ರಾಯದುರ್ಗದ ಹಸಿರು ಬಳೆ ತೊಡಿಸು! ಬಳೆ ಸೆಟ್ಟಿ
ನಾರಿಯರಿಗೆ ಬಣ್ಣ ಬಣ್ಣದ ಬಳೆ ತೊಡಿಸುವ

ಮನೆ ಮರೆತಿನಿ ತಂಗಿ ಬೀದಿಯ ಹೆಸರೇಳು
ನಿನ್ನ ತಾಯಿಯ ಮನೆಯ ನೆನಪೇಳು! ಬಂಗಾರಿ
ಬಳೆ ತೊಡುವವರಿಲ್ಲ ಈ ಯುಗದಿ 

ಬಳೆಗಾರ ಮರಿಬೇಡ ಹಳೆ ಅಂಚಿನ ಮನೆ ಕಾಣೋ
ಮನೆ ಮಂದೆ ಹಾರಾಡೊ ಗಿಳಿ ಕುಂತಾವೆ! ಬಳೆ ಸೆಟ್ಟಿ
ಹುಡಿಕ್ಯಾದ್ರು ಹೋಗಿ ಬಾ ನನ್ನ ತವರು ಮನೆಗೆ


ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...