ಗುರುಕುಲ ಕಲಾ ಪ್ರತಿಷ್ಠಾನ ಕೊಡಮಾಡುವ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಕುಮಾರಿ ಸಂಗೀತ ಹಣಮಂತ ಮಠಪತಿ ಆಯ್ಕೆ.
ಗುರುಕುಲ ಕಲಾ ಪ್ರತಿಷ್ಠಾನ ಕೊಡಮಾಡುವ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಕುಮಾರಿ ಸಂಗೀತ ಹಣಮಂತ ಮಠಪತಿ ಆಯ್ಕೆಯಾಗಿದ್ದು ವಿಚಾರ ಮಂಟಪ ಸಾಹಿತ್ಯ ಪತ್ರಿಕಾಬಳಗದ ವತಿಯಿಂದ ಇವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತಾ ...
🌱ಹೆಸರು:
*ಸಂಗೀತಾ ತಂ ಹಣಮಂತ ಮಠಪತಿ*
*(ರಾಮಭಕ್ತೆ)*
(ಎಚ್.ಜಿ.ಸಂಗೀತಾ.ಮಠಪತಿ)
🌱ಹುಟ್ಟಿದ ದಿನಾಂಕ:೦೩/೦೭/೧೯೯೮(ದಾಖಲಾತಿ ದಿನಾಂಕ)
*೧೪/೦೨/೧೯೯೯* (ಜನ್ಮ ದಿನಾಂಕ)
🌱 *ಹುಟ್ಟಿದ ಸ್ಥಳ:*
ನೀರಬೂದಿಹಾಳ
(ಅಮ್ಮನ ತವರೂರು)
ತಾ/ಬಾದಾಮಿ
ಜಿ/ಬಾಗಲಕೋಟೆ
🌱 *ತಂದೆ:ಹಣಮಂತ*
🌱 *ತಾಯಿ: ಗುರುಬಾಯಿ*
ಪ್ರಸ್ತುತ ಸ್ನಾತ್ತಕೋತ್ತರ ಪದವಿಯನ್ನು (ಎಂ.ಎಸ್ಸಿ)
ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಜಾನಪದ ಗೀತೆ, ದಾಸ ಸಾಹಿತ್ಯ, ಜಾನಪದ ನೃತ್ಯ, ಏಕ ಪಾತ್ರಾಭಿನಯ, ಅಭಿನಯ ಗೀತೆ, ನಾಟಕ ಹೀಗೆ ಎಲ್ಲದರಲ್ಲಿಯೂ ಭಾಗವಹಿಸಿ ವಿವಿಧ ರಂಗಗಳಲ್ಲಿ , ಸುಮಾರು ಎಂಭತ್ತು ಪ್ರಶಸ್ತಿ ಪತ್ರಗಳನ್ನು ಮತ್ತು ಬಹುಮಾನಗಳನ್ನು ಪಡೆದಿರುತ್ತಾರೆ.
🌳 *ಸಾಹಿತ್ಯ ಕೃಷಿ* 🌳
🌲 *ಕವನಗಳು:*
*೮೦* (ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟ ಆಗಿರುವ ಕವನಗಳು)
*೧೫೦* ರಚನೆ ಆಗಿರುವ ಕವನಗಳು
🌲 *ಕಥೆಗಳು:* *೧೫*
🌲 *ಷಟ್ಪದಿ ಕವನಗಳು: ೩೦*
🌲 *ವಚನಗಳು: ೧೮೦* (ವಚನ ಸಂಕಲನ ಬಿಡುಗಡೆ ಹಂತದಲ್ಲಿ)
*ಶ್ರೀರಾಮನ ಅಂಕಿತನಾನದಲ್ಲಿ ಒಂದು ನೂರಾ ಎಂಭತ್ತು ವಚನಗಳು*
🌲 *ಕಾದಂಬರಿ:* ಬರವಣಿಗೆ ಹಂತದಲ್ಲಿದೆ
ಇದರ ಜೊತೆಗೆ ಹಾಯ್ಕು, ಹನಿಗವನ, ರುಬಾಯಿ, ಸುನೀತ, ಚುಟುಕು ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.
🌱ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದ್ದು ಸಧ್ಯದಲ್ಲೇ ಒಂದು ವಚನ ಸಂಕಲನ ಮತ್ತು ಒಂದು ಕವನ ಸಂಕಲನ ಬಿಡುಗಡೆ ಆಗಲಿವೆ.
ಇವರ *ಅಪ್ರಕಟಿತ ಕೃತಿ ರಾಮಾಮೃತ (ವಚನ ಸಂಕಲನ) ಕೃತಿಯ ಹಸ್ತ ಪ್ರತಿಯು ಗುರುಕುಲ ಪ್ರತಿಷ್ಠಾನ ರಿ ಕೊಡಮಾಡುವ ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ*
ಇವರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗವು ತುಂಬು ಹೃದಯದ ಅಭಿನಂದನೆಗಳು ಶುಭ ಹಾರೈಕೆಗಳನ್ನು ತಿಳಿಸುತ್ತದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ 'ಕುಮಾರಿ ಸಂಗೀತಾ ಹಣಮಂತ ಮಠಪತಿ' ಇವರು ಶ್ರೀರಾಮನವರ ಅಂಕಿತನಾಮದೊಂದಿಗೆ ರಚಿಸಿರುವ ಅಪ್ರಕಟಿತ ಕೃತಿ *ರಾಮಾಮೃತ* (ವಚನ ಸಂಕಲನ)ವು ಗುರುಕುಲ ಕಲಾ ಪ್ರತಿಷ್ಠಾನ ಕೊಡಮಾಡುವ *ಗುರುಕುಲ ಸಾಹಿತ್ಯ ಕೇಸರಿ* ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.ಇವರು ಪದವಿ ವಿದ್ಯಾಭ್ಯಾಸವನ್ನು ಎಸ್ ಆರ್ ಕಂಠಿ ಕಾಲೇಜು ಮುಧೋಳದಲ್ಲಿ ಮುಗಿಸಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರದಲ್ಲಿ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಸಾಹಿತ್ಯದ ಜೊತೆಗೆ ಗಾಯನ,ನೃತ್ಯ,ನಾಟಕ,ಏಕಪಾತ್ರಾಭಿನಯ,ಇತ್ಯಾದಿ ಇವರ ಹವ್ಯಾಸಗಳು.ಇವರು ಸುಮಾರು 150ಕವನಗಳು,15 ಕಥೆಗಳು,30 ಷಟ್ಪದಿ ಕವನಗಳನ್ನು ರಚಿಸಿದ್ದಾರೆ. ಒಂದು ಕಾದಂಬರಿಯನ್ನು ಬರೆಯುತ್ತಿದ್ದಾರೆ.ಇದರ ಜೊತೆಗೆ ಹಾಯ್ಕು,ಹನಿಗವನ,ರುಬಾಯಿ, ಸುನೀತ,ಚುಟುಕು ಹೀಗೆ ಎಲ್ಲ ಸಾಹಿತ್ಯ ಕ್ಷೇತ್ರಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಸಾಹಿತ್ಯಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ,ರಾಜ್ಯ ಮಟ್ಟದ,ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ನಿರ್ವಹಣೆಯನ್ನು ಸಹ ಮಾಡುತ್ತಾರೆ.ಇತ್ತೀಚೆಗಷ್ಟೇ ಇವರು ಉಪನ್ಯಾಸ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
*ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಅಪ್ರಕಟಿತ ಕೃತಿ ರಾಮಾಮೃತವು ಒಂದು ನೂರಾ ಅರವತ್ತು ವಚನಗಳ ಗುಚ್ಛವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
💐💐 ಅಭಿನಂದನೆಗಳು ಮತ್ತು ಶುಭಾಶಯಗಳು 💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ