ಜೀವಸೃಷ್ಟಿ
ಸೃಷ್ಟಿಯ ಬಣ್ಣದ ಹೂದೋಟದಲ್ಲಿ
ತರ ತರದ ವಿಸ್ಮಯವು
ಕಣ್ಣಿಗೆ ಅಂದದಿ ಕಾಣುವ ಸೋಜಿಗ
ಬಾಳಿನ ಸೌಭಾಗ್ಯವು
ಯಾವ ಶಿಲ್ಪಿಯು ಕಟೆದರೂ ಇಂಥ
ಶಿಲೆಯೂ ಬರಲಾರದು
ಸೃಷ್ಠಿಯ ಆಟದಿ ಮನುಜನ ಕ್ರಿಯೆಯೂ
ಎಂದಿಗೂ ಫಲ ನೀಡದೂ
ಬರಲು ಮರದಲಿ ಹಣ್ಣೆಲೆ ಚಿಗುರಿ
ಫಲ ಪುಷ್ಪ ನೀಡುವುದು
ಕಾಣದ ದೇವರು ಪ್ರಕೃತಿಯಡಿಯಲಿ
ಪ್ರತ್ಯಕ್ಷ ಕಾಣುವದು
ಜೀವಿಯ ಉದರದಿ ಜೀವವು ಜನಿಸಿ
ಕೌತುಕ ಮೆರೆಯುವುದು
ಉಸಿರನು ನಿಲ್ಲಿಸಿ ದೇಹವ ನಸಿಸುವ
ಸೃಷ್ಟಿಯ ವೈಚಿತ್ರ್ಯವು
ಕಲ್ಲಿನ ಒಳಗೆ ಕಪ್ಪೆಯು ತಾನು
ಜೀವವ ನೀಗುವುದು
ಕಪ್ಪೆ ಚಿಪ್ಪಿನಲಿ ಹೊಳೆಯುವ ಮುತ್ತದು
ದೇವರ ನಿಜಸೃಷ್ಟಿಯು
ಬದುಕು ಬವಣೆಗಳ ಬಾಳಿನಪಯಣದಿ
ನಾವೆಲ್ಲ ಪಯಣಿಗರು
ಕಲ್ಲುಬಂಡೆಯಲಿ ಅರಳಿದ ಮರ ಥರ
ಹೃದಯವು ಅರಳುವುದು
✍ ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆ ಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ