ಸಂಶೋಧನೆ
ನಾನು ದಿನ ಹಗಲು ರಾತ್ರಿ ಎನ್ನದೆ
ಮನದೊಳಗೆ ಸಾಹಿತ್ಯವ ಹುಡುಕ್ಕುತ್ತಿದ್ದೇನೆ
ಪದಗಳ ಒಳಗುಟ್ಟಿನ ಹೂಗುಚ್ಚುಗಳಿವೆ
ಅಂತರಾಳದೊಳಗೆ ಹುದುಗಿವೆ
ಪ್ರಾಸ ಅಂತ್ಯ ತ್ರಿಪದಿ ಷಟ್ಪದಿಗಳನ್ನು
ಇವುಗಳನ್ನು ಹಳೆ ತಲೆಗಳು ಸಂಶೋಧಿಸಿದ್ದಾರೆ
ಕನ್ನಡದ ಶಿಲೆಯೊಳಗೂ ಕೊರೆದಿದ್ದಾರೆ
ಕಲ್ಲು ಮಣ್ಣು ಚಿನ್ನ ಹೊನ್ನಿನಲ್ಲೂ ಹುಡುಕಿದ್ದಾರೆ
ದಿಗ್ಗಜರು ಸಂಶೋಧನೆ ಅಪಾರವಾದುದು
ನಾನೂ ಹಗಲು ರಾತ್ರಿಗಳು ಎದ್ದು ಕುಳಿತು
ಬಿದ್ದು ಒದ್ದಾಡಿದರು ಪತ್ತೆ ಹಚ್ಚಲು ಆಗುತ್ತಿಲ್ಲ
ಮನೆಯೊಳಗೆ ಹೊಲಗದ್ದೆಗೆ ಹೋದರು ಸಿಗುತ್ತಿಲ್ಲ
ಕನ್ನಡದ ಸೌಂದರ್ಯವನ್ನು ಕೆತ್ತಿರುವರು
ಎಂಟು ದಿಗ್ಗಜರು ಬಂಟನಾಗಿರುವ ಪಂಪ ರನ್ನರು
ಪದಪದಕ್ಕು ಸಂಶೋಧಿಸಿದ ನಿಘಂಟುಕಾರರು
ಹೆಜ್ಜೆಯೊಳಗಿನ ಸುದ್ದಿಗು ಪದಗಳ ಜೀವದಾತರು
ನಾನು ಕಣ್ಣು ಮುಚ್ಚಿದರೆ ಸಾಕು
ಬಡಿದೆಚ್ಚರಿಸುತ್ತಿವೆ ಸಾಹಿತ್ಯದ ಮೆಲುಕು
ಊಟ ತಿನ್ನುವಂಗಿಲ್ಲ ನಿದ್ರೆ ಮಾಡುವಂತಿಲ್ಲ
ಜಳಕನು ಮಾಡೊಂಗಿಲ್ಲ ಕಾಡುತ್ತದೆ ಕವಿತೆಗಳೆಲ್ಲ
ನನ್ನ ಬತ್ತಿದ ಮೆದುಳಲ್ಲಿ ಜ್ಞಾನದ ಸುಳುವು
ಜಲಧಾರೆಯು ತುಟು ತುಟು ಅನುಕುತ್ತಿದೆ
ಆದರೂ ಹೊಸ ಹೊಸ ಸಾಹಿತ್ಯ ಹುಡುಕ್ಕುತ್ತಿದೆ
ಕವಿತೆಯ ಸಂಶೋಧನೆ ನನ್ನ ಬಿಡದೆ ಬೆನ್ನಟ್ಟಿದೆ
- ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ