ಶುಕ್ರವಾರ, ಜುಲೈ 30, 2021

ಕಂದ (ಕವಿತೆ) - ಶ್ರೀ ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ.

ಕಂದ

ಕಂದ ಓ ಕಂದ ಚಂದವೊ ಚಂದ  ನೀನ್ನ ಈ ಬಂಧ....
ಆ ಅಂದವ ಸವಿಯಲು ಧರೆಯಲಿ  ಪಡುವರು ಎಲ್ಲರೂ ಮಹಾನಂದ....
ಯಾಕೊ ಈ ದೇವ ಆದ ಮಂದ ... ಅಲ್ಲಲ್ಲ... ನೊಂದ...ನೊಂದ...!!ಪಲ್ಲವಿ!!

ನಿನ್ನ ಧರೆಗೆ ತಂದ ಕಂದ!!
ಆ ದೇವ ನನ್ನ ಘನತೆ ಹೆಚ್ಚಿಸಿದ !
ಎಲ್ಲಕಿಂತ ಮಿಗಿಲು ಅಪ್ಪನ ಪದವಿ ನೀಡಿದ!!

ನೀ ಅಳಲು!!
ಆಯ್ತು ಭುವಿ ಒಡಲು!
ಕರುಣಾಮಯಿ ತಾಯಿ ಒಡಲು!!

ನೀ ನಗಲು!!
ಆಯ್ತು ನದಿ ಕಡಲು!
ಸವಿಯಲು ಕೆನೆ ಹಾಲು!!

ನನಗೆ ನೀನು ನಿನಗೆ ನಾನು!!
ಅನ್ನುವ ಆ ದೇವನು!
ಕಂದ ನಿನ್ನ ನಂಬಿ ಒಮ್ಮೆ ನಕ್ಕನು!!

ನಿನಗೆ ಸೋತು ಕೈಲಾಸ ಹೊಕ್ಕನು!!
ನಿನ್ನ ಕ್ಷಣ ಕ್ಷಣಕು ಈಗ ನೆನೆವನು!
ನಾನೆಕೆ ಕಂದನಾಗಲಿಲ್ಲ ಅಂದು ಕೋರಗಿದನು!!

ಅಳಿಯದೆ ಉಳಿಸಿದಿ ಮನು ಕುಲದ ಕಂದನ ಮಮತೆ!!
ನಾನೆಕೆ ನೀನೆ ಕಳದೆ ಮನೆ ಯೋಳಗಿನ ಎಲ್ಲಾ ಕೊರತೆ!
ಅಯ್ಯೋ ಕಂದ ನಿನ್ನ ನಲಿವಲಿ ನಾನೆ  ಮೂರು ಲೋಕ ಮರೆತೆ!!

ಪುಟ್ಟ ಪುಟ್ಪ ಹೆಜ್ಜೆಗಳು ಸೇರಿ ಆಯ್ತು ಜೀವನ ಪುಸ್ತಕ!!
ನಮಿಸುವೆ ನಿನ್ನ ಅಡಿದಾವರೆಗಳಲಿ ಇಟ್ಟು ಮಸ್ತಕ!
ಸೋಲದವರಾರು ಇಲ್ಲ ಇಲ್ಲಿ ನಿನ್ನ ಹಸ್ತಕ!!

✍️ ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ!ಭೈರಾಪೂರ ,ತಾ !ಜಿ! ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...