*ಗಜಲ್*
ನಿಶ್ಯಬ್ದ ಕಡಲು ಪ್ರಕ್ಷುಬ್ಧವಾಗುತ್ತದೆ ಒಮ್ಮೊಮ್ಮೆ
ಅಸಹನೆ ಕಂಬನಿಯಾಗಿ ಸುರಿಯುತ್ತದೆ ಒಮ್ಮೊಮ್ಮೆ
ಭುವಿಯ ಒಡಲಲ್ಲೂ ಜ್ವಾಲಾಮುಖಿ ಅಡಗಿರುತ್ತದೆ
ನಗುವಿನ ಅಂತರಾಳದಲೂ ನೋವಿರುತ್ತದೆ ಒಮ್ಮೊಮ್ಮೆ
ಮಂಜಿನ ಮೋಡದಿ ಘರ್ಷಣೆಯ ಕಾವಿರುವುದಿಲ್ಲವೆ?
ಮಾತು ಮಾತು ಮಥಿಸಿ ಸಿಡಿದೇಳುತ್ತದೆ ಒಮ್ಮೊಮ್ಮೆ
ಧುತ್ತೆಂದು ಚಂಡಮಾರುತ ಬೀಸುವುದು ಎಲ್ಲಿಂದಲೊ
ಸಧ್ಭಾವನೆಯೂ ಕಠೊರವಾಗುತ್ತದೆ ಒಮ್ಮೊಮ್ಮೆ
ನೆಮ್ಮದಿಯ ಬದುಕಿಗೆ ಸಹನೆಯೆ ಮೂಲ 'ಆರಾಧ್ಯೆ'
ಆದರೂ ಕೋಪ ಸರ್ವನಾಶಕೆ ಎಳೆಯುತ್ತದೆ ಒಮ್ಮೊಮ್ಮೆ
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ