ಶುಕ್ರವಾರ, ಜುಲೈ 30, 2021

ಕನಿಕರ (ಕವಿತೆ) - ಶ್ರೀ ಸಿದ್ಧರಾಮ ಸಿ ಸರಸಂಬಿ ಕಲಬುರ್ಗಿ.

ಕನಿಕರ

ಕನಿಕರ ಇದೆಯಾ ನಿಮಗೆ ?
ಕೊರೊನಾ ಕಾಲಡಿ ಸಿಲುಕಿದವರ
ಕಷ್ಟದಲ್ಲಿ ಕಣ್ಣಿರಿಡುವವರ
ಬಿರುಗಾಳಿಗೆ ನರಳಿದವರ
ನರನರಳಿ ಹೊರಳುವವರ
ಹೊರಳಿ ಮೇಲೆಳಲಾಗದವರ ಬಗ್ಗೆ.

ಕನಿಕರ ಇದೆಯಾ ನಿಮಗೆ?
ಆಸೆಗೆ ಹಣ ನೀಡುವವರ
ದುಷ್ಟರ ದುರಾಸೆಗೆ ಬಲಿಯಾದವರ
ಮೊಸದ ಸುಳಿಗೆ ಸಿಲುಕಿದವರ
ನಿರಾಸೆಯಿಂದ ತಿರುಗುವವರ
ತಿರುಗಿದರು ಜೀವ ಉಳಿಯದವರ ಬಗ್ಗೆ

ಕನಿಕರ ಇದೆಯಾ ನಿಮಗೆ?
ಮಡದಿ ಮಕ್ಕಳ ಹೊತ್ತು ಭಾರ
ಅನಿವಾರ್ಯವಾಗಿ ನಡೆದರು ದೂರ
ನಿರುದ್ಯೋಗ ಭೂತ ಬಡಿದವರ
ನೆಲೆ ಇಲ್ಲದೆ ಅಲೆಯುವವರ
ಅಲೆದರೂ ನೆಲೆ ಸಿಗದವರ ಬಗ್ಗೆ.

ಕನಿಕರ ಇದೆಯಾ ನಿಮಗೆ? 
ಬಡತನದಿ ಬೆಂದವರ
ಈ ನಾಡಲಿ ನೊಂದವರ
ಅನ್ನವಿಲ್ಲದೆ ಹಸಿದವರ
ಹಸಿದು ಉಸಿರಿಲ್ಲದವರ
ಉಸಿರಿದ್ಧು ನರಸತ್ತವರ ಬಗ್ಗೆ.
     ಇದೆಯಾ , ಸ್ವಾಮಿ ನಿಮಗೆ ,ಕನಿ...ಕರ ?

- ಸಿದ್ಧರಾಮ ಸಿ ಸರಸಂಬಿ. ಕಲಬುರ್ಗಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...