ಬುಧವಾರ, ಜುಲೈ 21, 2021

ಬದುಕು (ಕವಿತೆ) - ಪುರುಷೋತ್ತಮ್ ಪೆಮ್ನಳ್ಳಿ.

🌹ಬದುಕು🌹

ಓ ಬದುಕೆ ನಿನೇಷ್ಟು ಸುಂದರ
ಹಿಡಿದೆಯ ನಗುವಿಗೆ ಹಂದರ
ಸುಗುಣದ ಬಾಳು ಬಂಗಾರ
ಪ್ರೀತಿಯೇ ಬದುಕಿಗೆ ಆಕಾರ...

ಸುಖಮಯ ಕ್ಷಣಗಳ ಸವಿನೆನಪ
ಬದುಕಿನ ಹವಳದ ತೇರಿಗೆ ಆಲಾಪ
ಬದುಕಿ ಬದುಕ ಪ್ರೀತಿಸು
ಕಾಲದ ತಾಳಕೆ ನರ್ತಿಸು...

ಬದುಕೆಂಬುದು ಸುಂದರ ಕನಸು
ಜೀವಿಸಿ ಮಾಡಿಕೋ ನನಸು
ಬದುಕಲ್ಲಿ  ನೀನಾಷ್ಟೆ ಅಲ್ಲ
ಅವಲಂಬಿತರಿಗಂಚು ಸಿಹಿ ಬೆಲ್ಲ ...

ಇತಿಹಾಸದಿ ಉಳಿಯುವಂತಾಗಲಿ ಬದುಕು
ಛಲದಿ ದಾಟಿ ನಡೆ ಕಷ್ಟದ ಬಿರುಕು
ಇರಲಿ ಬದುಕಲಿ ಸಾಧನೆಯ ಹಂಬಲ
ಕಲಿಸಿದ ಎಲ್ಲ ಗುರುವರ್ಯರೇ ನಿನ್ನಯ ಬಲ...

ಬದುಕ ಬದುಕಿ ಪ್ರೀತಿಸು
ವಿಜಯಕೆ ಸಕಲರ ಹರಸು..

🌹ಪುರುಷೋತ್ತಮ್  ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...