ಭಾನುವಾರ, ನವೆಂಬರ್ 7, 2021

ಕೊಟ್ಟೂರ ಕಾಲೇಜು ಲೈಫ್ (ಲೇಖನ) - ಗಂಗಜ್ಜಿ. ನಾಗರಾಜ್, ಸಾಸ್ವಿಹಳ್ಳಿ.

ಹದಿಹರೆಯದ ವಯಸ್ಸು ಅದು 18 ರ ಹುಚ್ಚು  ಮನಸ್ಸು ಅಂತಾರೆ. ಹೌದು ವಿದ್ಯಾರ್ಥಿ ಜೀವನದ ಮರೆಯಲಾಗದ ಘಟ್ಟ ಈ ಕಾಲೇಜ್ ಲೈಫ್ ಹೊಸ ಪರಿಸರ ಹದಿಹರಿಯದ ಮನಸ್ಸಿನ ಮುಗ್ಧ ಮನಸುಗಳು ಅಂದ ಚಂದದ ಮುದ್ದು ಮುಖಗಳು ಎಲ್ಲಾ ತೀರಾ ಹೊಸತು ಎಂಬ ಭಾವನೆ ಈ ಕಾಲೇಜು ಜೀವನದ ಆರಂಭದ ದಿನಗಳ ಸವಿ ನೆನಪುಗಳು ಹೇಳಿಕೇಳಿ ಇದು ಅಸಲಿ ಟೀನೇಜ್ ಕಥೆ ಮುಗ್ಧವಾಗಿ ಆರಂಭವಾದ ನನ್ನ ಕಾಲೇಜು ಸ್ನೇಹ ಪ್ರೀತಿಯಿಂದ ಅನುಬಂಧ ದತ್ತ ಬೆಸೆದುಕೊಳ್ಳುವ ಸಮಯವೂ ಹೌದು ಉತ್ತರ ಸಿಗದ ಹಲವಾರು ಪ್ರಶ್ನೆಗಳು ಕಾಡುವ ವಯಸ್ಸು ನಮ್ಮದು
           ಎಸ್ ಎಲ್ ಸಿ ಪಾಸ್ ಆದ ನಂತರ ನಾನು ಕಾಲೇಜಿಗೆ ಹೋಗುತ್ತಿದ್ದೇನೆ ಎಂಬ ಒಣಜಂಭ ಬೇರೆ ಮನಸ್ಸುಗಳಿಗೂ ಇರುವ ಹಾಗೆ ನನ್ನೊಳಗೂ ಇದ್ದಿತು ಹೋಂವರ್ಕ್ ಅಸೈನ್ಮೆಂಟ್ ಪನಿಶ್ಮೆಂಟ್ ಗಳಿಂದ ಮುಕ್ತಿ ದೊರೆತಿದೆ ಎಂದು ಅನುಭವವಾಯಿತು ಭಾರವಾದ ದೊಡ್ಡ ಸ್ಕೂಲ್ ಬ್ಯಾಗಿಗೆ ಟಾಟಾ ಬಾಯ್ ಬಾಯ್ ಹೇಳಿ ಬಿಳಿ ಪುಸ್ತಕಗಳ ಕೈಹಿಡಿದು ಫಾರ್ಮಲ್ ಬಟ್ಟೆಗೆ ಕೈಕೊಟ್ಟು ಆಗ ಬದಲಾಯಿತು ನನ್ನ ಲೈಫಿನ ಕನಸು ಹೇಳಿಕೇಳಿ ಕಾಲೇಜು ಜೀವನದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ನಾನು ಕೆಲವೊಂದು ನಿರೀಕ್ಷೆಗಳ ಕನಸು ಕಂಡೆ ನಾನು ಕಾಲೇಜಿನಲ್ಲಿ ಸಂತೋಷಕ್ಕೆ ಕೊರತೆಯಿಲ್ಲ ಅದುವರೆಗೆ ಸ್ಕೂಲಿನಲ್ಲಿ ಬರುತ್ತಿದ್ದ ಶಿಕ್ಷಕರ ಬದಲು ಲಚರ್ಸ್ ಬಂದು ಗಂಟೆಗಟ್ಟಲೆ ಮಾಡುವ ಉಪನ್ಯಾಸಕ್ಕೆ ಆರಂಭದ ದಿನಗಳಲ್ಲಿ ಅಡ್ಜಸ್ಟ್ ಆಗುವುದೇ ಕಷ್ಟದ ದಿನಗಳು ಹಿಸ್ಟರಿ ಸೊಸೆಲಜಿ ಕ್ಲಾಸಿನಲ್ಲಿ ನಿದ್ದೆ ಮಾಡುವುದು ದೊಡ್ಡ ಹಬ್ಬವಾಯಿತು ಟೀಚರ್ ಜೊತೆ ಚೆಲ್ಲಾಟ ಮಾಡಿ ನಗುತ ದಿನಗಳು ಕಳೆದವು ಈ ಕಾಲೇಜು ಜೀವನದಲ್ಲಿ ಅತಿ ಹೆಚ್ಚು ಕ್ಲಾಸ್ ಬಂಕ್ ಮಾಡುವ ಅಭ್ಯಾಸವಾಯಿತು. ಅದರಲ್ಲೂ ದೇವಣ್ಣ ನಾ ಎಗ್ರೈಸ್ ಅಂಗಡಿ ಫುಲ್ ಫೇಮಸ್ 20 ರೂಪಾಯಿ ಕೊಟ್ರಾ ಸಾಕು ಹೊಟ್ಟೆ ತುಂಬಾ ರೈಸ್ ಕೊಡ್ತಿದ್ದ ಮರೆಯಲಾಗದ ದೇವಣ್ಣನ ಎಗ್ರೈಸ್ ಸೆಂಟರ್. ಇಲ್ಲವಾದರೆ ನೆಪಹೇಳಿ ಕಾಲೇಜಿನಿಂದ ಹೊರಡುತ್ತೇವೆ ಊರಿನಲ್ಲಿ ಜಾತ್ರೆ ಸ್ನೇಹಿತರ ಮನೆಯ ಕಾರ್ಯಕ್ರಮ ಇದ್ದರೆ ಕಾಲೇಜಿನ ಕಡೆ ಹೋಗೋದೇ ಇಲ್ಲ. ಜೊತೆಗೆ ಪಟೇಲರ ಕೆಂಪು ಬಸ್ನೊಳಗೆ ಎಲ್ಲರು ಮಾತಾಡ್ಕೋತ ಸಂತೋಷ ಪಡುತ್ತಿದ್ದ ಅ ದಿನಗಳು ಪ್ರತಿನಿತ್ಯ ಕಣ್ಣಲ್ಲಿ ಕನಸುಗಳಾಗಿ ಕಾಡುತ್ತಿವೆ. ಅಕ್ಕಂದಿರೊಂದಿಗೆ ನಾ ಆಡುತ್ತಿದ್ದ ಜಗಳ ಅಬ್ಬಾ ಮರೆಯಲಾಗದ ಕ್ಷಣಗಳು.. ಮದ್ಯಾಹ್ನ ಆದರೆ ಸಾಕು ಗೆಳೆಯರೊಂದಿಗೆ ಕೊಟ್ಟೂರೇಶ್ವರ ಸನ್ನಿದಿ ಹೋಗಿ ಪ್ರಸಾದವನ್ನ ಊಟದಂತೆ ಸೇವಿಸುವ ನಮ್ಮ ಅ ಕಪಿಚೇಷ್ಟೆ ಅ ಶ್ರೀ ಗುರು ಕೊಟ್ಟೂರೇಶ್ವರ ನ ನಿತ್ಯದ ಅಲಂಕಾರ ಸವಿದ ನಾವೇ ಪುಣ್ಯವಂತರು. ಅಪ್ಪನ  ಕಡೆಯಿಂದ ಸುಳ್ಳು ಹೇಳಿ ಹಣವನ್ನು ಪಡೆದು ಖಾಲಿ ಆಗುವವರೆಗೂ ಸುತ್ತಾಡಿ ಸುತ್ತಾಡಿ ಬರುತ್ತಿದ್ದೆವು ತಂದ ಟಿಫನ್ ಅನ್ನು ಎಲ್ಲ ಸ್ನೇಹಿತರ ಜೊತೆಗೆ ಹಂಚಿಕೊಂಡು ತಿನ್ನುವ ಖುಷಿಯೇ ಬೇರೆ ಬಡವರು ಶ್ರೀಮಂತರೆನ್ನದೆ ಜೊತೆಗೆ ಆಟ ಆಡುವುದು ಖುಷಿಯಾಗಿರುವುದು ಹೇಳುವ ಏಕೈಕ ಸ್ಥಳವೇ ಕಾಲೇಜು ನಾವು ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದುಕೊಟ್ಟಿತು ನೆನಪುಗಳು ಮರೆಯಲಾಗದ ಕಾಲೇಜಿನ ದಿನಗಳು ನಮ್ಮ ಜೀವನದ ಗೋಲ್ಡನ್ ಕ್ಷಣಗಳು... 
- ಗಂಗಜ್ಜಿ. ನಾಗರಾಜ್ 
ಹವ್ಯಾಸಿ ಬರಹಗಾರರು ಸಾಸ್ವಿಹಳ್ಳಿ.. m-8548985753.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...