ನಿಸ್ವಾರ್ಥ ಸೇವಕ ಶ್ರೀ ಸಂಗಮೇಶ ಎನ್ ಜವಾದಿ.
ಉಳ್ಳವರು ಶಿವಾಲಯ ಮಾಡಿಹರು, ನಾನೇನು ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಲಶವಯ್ಯಾ ಕೂಡಲ ಸಂಗಮದೇವ ಕೇಳಯ್ಯಾ ಸ್ಥಾವರಕ್ಕಳಿವುಂಟು,
ಜಂಗಮಕ್ಕಳಿವಿಲ್ಲ. ವೆಂದು ಹೀಗೆ 900 ವರ್ಷಗಳ ಹಿಂದೆಯೇ ನಮ್ಮ ಸಮಾಜದಲ್ಲಿ ಇಂದೂ ಅಗತ್ಯವಾಗಿರುವ ಸುಧಾರಣೆ ಕಂಡುಕೊಂಡು ಆಚರಣೆಗೆ ತರಲು ಪ್ರಯತ್ನಿಸಿದ ಬಸವಣ್ಣನವರು ಕನ್ನಡಿಗರಿಗೆ ಚಿರವಂದ್ಯರು. ಕನ್ನಡ ನೆಲದ ಮೇಲೆ ಪ್ರಥಮ ಸಮಾಜೋ ಧಾರ್ಮಿಕ ಆಂದೋಲನವೊಂದು ಹನ್ನೆರಡನೆಯ ಶತಮಾನದಲ್ಲಿ ಜರುಗಿತು. ಈ ಆಂದೋಲನದ ನೇತಾರ ಬಸವಣ್ಣನವರು ಎನ್ನುವುದು ಇಡೀ ಜಾಗತಿಕ ಲೋಕಕ್ಕೆ ಗೊತ್ತಿರುವ ಸಂಗತಿ. ಎನ್ನುವ ವಿಷಯ ತಮ್ಮ ಗಮನಕ್ಕೆ ಪುನಃ ತರುತ್ತಾ,ಈ ದಿಸೆಯಲ್ಲಿ ಅಂದರೆ
ಬಸವಣ್ಣನವರು, ಸ್ವಾಮಿ ವಿವೇಕಾನಂದರು, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು, ಮಾಹಾತ್ಮ ಗಾಂಧಿ,
ಡಾ. ಎ.ಪಿ.ಜಿ ಅಬ್ದುಲ್ ಕಲಾಂ ರವರು ಸೇರಿದಂತೆ ವಿಶ್ವದ ದಾರ್ಶನಿಕರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಸಾಗುತ್ತಿರುವ ಬಹುಮುಖ ಪ್ರತಿಭಾವಂತರಾದ ಶರಣ ಸಂಗಮೇಶ ಎನ್ ಜವಾದಿಯವರ ಕಿರು ಪರಿಚಯವನ್ನು ಈ ಲೇಖನದ ಮೂಲಕ ಮಾಡಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಉದಯೋನ್ಮುಖ ಸಾಹಿತಿಗಳ ಆಶಾಕಿರಣ, ಎಲೆ
ಮರೆಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದ ಹವ್ಯಾಸಿ ಬರಹಗಾರ, ಮೌಲ್ಯಾಧಾರಿತ ವಿಚಾರಗಳು ಜಾಗತಿಕ ಸಮುದಾಯಕ್ಕೆ ಮುಟ್ಟಿಸುವ ಆಶಾವಾದಿ ಶರಣ ಪ್ರತಿಭೆ, ರಾಷ್ಟ್ರ - ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಅತ್ಯುತ್ತಮ ಸಮಾಜ ಮುಖಿ ಚಿಂತಕ,ಸರಳ ಸ್ನೇಹ ಜೀವಿ, ನಿಸ್ವಾರ್ಥ ಕನ್ನಡ ಸಾಹಿತ್ಯ ಸೇವಕ ,ಕನ್ನಡದ ಸಾರಥಿ ಯುವಜನತೆಯ ಆದರ್ಶ ವ್ಯಕ್ತಿ,ಕರುನಾಡಿನ ಚೈತನ್ಯ ಮೂರ್ತಿ, ಬಡವರ - ನೂಂದವರ ಕಣ್ಣಿರ ಹನಿ ಒರೆಸುವ ಮೇಧಾವಿ, ಅನಾಥರ ಸಂರಕ್ಷಕ ಅವರಿಗಾಗಿ ಹಗಲಿರುಳು ಶ್ರಮ ಹಾಕುತ್ತಿರುವ ಶ್ರಮಜೀವಿ,ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ನಾಡಿನ ಈ ಪುಣ್ಯ ಭೊಮಿಯಲ್ಲಿ ಹುಟ್ಟಿ, ಹಲವಾರು ಅವರ ಕಷ್ಟ ಸುಖಗಳ ನಡುವೆ, ಈ ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬ ಛಲದೊಂದಿಗೆ ಮುನ್ನುಗ್ಗುತ್ತಿರುವ ಸಾಧನೆ ಸರದಾರ,ನಿಜ ತತ್ವ ಪ್ರಚಾರಕ,
ಪ್ರಚಲಿತ ವಿದ್ಯಮಾನಗಳ ಕುರಿತು ಹಾಗೂ ವಿವಿಧ ವೈಚಾರಿಕ ಚಿಂತನಾತ್ಮಕ ಲೇಖನಗಳನ್ನು ಬರೆಯುತ್ತಿರುವ ಬರಹಗಾರ,
ನಮ್ಮೆಲ್ಲರ ಅಚ್ಚುಮೆಚ್ಚಿನ ಪ್ರಗತಿಪರ ಚಿಂತಕರಾದ ಶರಣ ಜೀವಿ ಶ್ರೀ ಸಂಗಮೇಶ ಎನ್ ಜವಾದಿ, ಕೊಡಂಬಲ ರವರು ಎಂದು ಹೇಳಲು ಗೌರವ, ಹೆಮ್ಮೆ ಎನಿಸುತ್ತದೆ.
ಸಂಗಮೇಶ ಎನ್.ಜವಾದಿಯವರು ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯ ನೂತನ ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಹಾಗೂ ಸರಸ್ವತಿ ದಂಪತಿಗಳ ಮಗನಾಗಿ ದಿನಾಂಕ 2-8-1984 ರಲ್ಲಿ ಜನಿಸಿದ್ದಾರೆ. ಬಡತನದ ನಡುವೆ ಇವರು ಬಿ.ಎಸ್ಸಿ., ಎಂ.ಎಸ್ಸಿ.
ಎಚ್. ಆರ್.ಎಂ.,ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಹಾಗೂ ಕೃಷಿ ಡಿಪ್ಲೊಮಾ(ಸಂಪ್ರದಾಯಕ) ವಿಧ್ಯಾಭ್ಯಾಸ ಪೂರೈಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ. ತದನಂತರ ಅವರ ಬದುಕಿನ ಜೀವನಕ್ಕಾಗಿ ಕಾಯಕ ಮಾಡಬೇಕೆಂದು ನಿರ್ಧಾರ ಮಾಡಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.
ಆದರೆ ಖಾಸಗಿ ಸಂಸ್ಥೆಗಳಲ್ಲಿ ಇವರ ಮನಸ್ಸಿಗೆ ನಮ್ಮದಿ ಸೀಗದೆ ಇರುವ ಕಾರಣ ಜೊತೆಗೆ ಸಮಾಜ ಸೇವೆ, ಸಾಹಿತ್ಯ ಸೇವೆ ಮಾಡುವ ಬಹು ದೊಡ್ಡ ಹಂಬಲ ಇದ್ದ ಕಾರಣದಿಂದ ಅಲ್ಲದೆ ಸಮಯ ಮತ್ತು ಕಾಲಾವಕಾಶ ನೀಡದ ಹಿನ್ನೆಲೆಯಲ್ಲಿ, ಖಾಸಗಿ ಸೇವೆಗೆ ತೀಲಾಂಜಲಿಯನ್ನು ಹೇಳಿರುತ್ತಾರೆ.
ಹೀಗಾಗಿ ಕೃಷಿ ಕಾಯದ ಬದುಕಿಗೆ ಹೆಚ್ಚು ಒಲವು ತೋರಿಸುತ್ತಾರೆ.ತೋರಿಸಿದ ಪರಿಣಾಮ ಈಗ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದುಡಿಯುತ್ತಿದ್ದಾರೆಂದು ಹೇಳಲು ಖುಷಿ ಎನಿಸುತ್ತದೆ. ಈ ತನ್ಮೂಲಕ ಅನೇಕ ರೈತರಿಗೆ ಮಾದರಿಯಾಗಿದ್ದಾರೆ ಹಾಗೂ ರೈತ ಸಂಘಟನೆಗಳ ರಚನೆ ಮಾಡುವ ಮೂಲಕ ರೈತರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳಿಗೆ ಸ್ವಂದನೆ ಮಾಡುವ ಕಾರ್ಯದಲ್ಲಿ ಮಗ್ನನರಾಗಿದ್ದಾರೆ ಜೊತೆಗೆ ರೈತ ಶಕ್ತಿ ಸೇವಾ ಸಂಸ್ಥೆ ಹುಟ್ಟು ಹಾಕಿ ರೈತರ ನೇರವಿಗೆ ಧಾವಿಸುತ್ತಿದ್ದಾರೆ.ಇವುಗಳ ಜೊತೆ - ಜೊತೆಗೆ
ಕಾಯಕ ತತ್ವ ಪ್ರಚಾರವನ್ನು ತಪ್ಪದೇ ಮಾಡುವ ಇವರು ಕಾಯಕದಲ್ಲಿ ಕೈಲಾಸ ಕಾಣುವ ಮೇಧಾವಿ.
ಸಾಮಾಜಿಕವಾಗಿ,ಶೈಕ್ಷಣಿಕ,ಧಾರ್ಮಿಕ ಮತ್ತು ಪರಿಸರದ ಸಂರಕ್ಷಣೆ, ದೇಹಾಂಗದಾನ ಜಾಗೃತಿ ಮೂಡಿಸುವ ಕೆಲಸ ಇದಲ್ಲದೆ ಚುಟುಕು ಸಾಹಿತ್ಯದ ಬೆಳವಣಿಗೆಗೆ ದುಡಿಯುತ್ತಿದ್ದಾರೆ ಹಾಗೆ ಗ್ರಾಮೀಣಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರು ಬರೆದ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಸಾಹಿತ್ಯದ ಆಸಕ್ತಿ ಬಿಡದೆ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಸಮಾಜ ಮುಖಿ ಸೇವೆಗಳ ಉತ್ತಮ ಕಾರ್ಯ ಚಟುವಟಿಕೆಯೊಂದಿಗೆ
ಕನ್ನಡ ನಾಡು ನುಡಿ ಭಾಷೆ,ನೆಲ, ಜಲ ಹಾಗೂ ಗಡಿ ಭಾಗದ ಜ್ವಲಂತ ಸಮಸ್ಯೆಗಳು ಬಂದಾಗ, ಮುಂದಾಗಿ ಹೋರಾಟ ಮಾಡುವ ಮನೋಭಾವ - ಮನೋಧೈರ್ಯ ಇವರದು.ಹಾಗಾಗಿ ಇಂದಿನ ಜನಾಂಗಕ್ಕೆ ಇವರ ಆದರ್ಶ ನಿಲುವುಗಳು ಮಾದರಿ ಮತ್ತು ಪ್ರೇರಣೆಯಾಗಿವೆ ಎಂದರೆ ತಪ್ಪಾಗಲಾರದು. ಇನ್ನು
ಇವರು ಬರೆದ ನೂರಾರು ಲೇಖನಗಳು ಒಟ್ಟು ಸೇರಿಸಿ ಐದಾರು ಪುಸ್ತಕಗಳನ್ನು ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಆದ್ದರಿಂದ ಇವರ ಅಪ್ರತಿಮ ಸಾಧನೆಯ ಸೇವೆಗೆ ನಾಡಿನ ಮಠಾಧೀಶರು, ಗಣ್ಯಮಾನ್ಯರು,ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸುವ ಕೆಲಸ ಮಾಡಲೆಂದು ಹಾರೈಸುತ್ತಾ, ಇವರು ವಿವಿಧ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಸೇವೆಯನ್ನು ತಿಳಿಸುವ ಸಣ್ಣ ಪ್ರಯತ್ನ ಮಾಡಲಾಗಿದೆ.
ಈಗಾಗಲೇ ಇವರು
(ಸಮಾಜ ಮುಖಿ ಸೇವೆಗಳ )ನಿರ್ವಹಣೆ ಮಾಡಿರುವ ಜವಾಬ್ದಾರಿಗಳು ಹೀಗಿವೆ:
ಕೊಡಂಬಲ ಯುವ ಬಸವಕೇಂದ್ರದ ಅಧ್ಯಕ್ಷರಾಗಿ,ವಚನ ಕಮ್ಮಟ ಪರೀಕ್ಷೆಯ ಸಂಯೋಜಕರಾಗಿ,ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಂಬಲ ಘಟಕದ ಅಧ್ಯಕ್ಷರಾಗಿ,ಬೀದರ ಜಿಲ್ಲಾ ಕೃಷಿ ಇಲಾಖೆಯ ಆತ್ಮ ಯೋಜನೆಯ ರೈತರ ಸಲಹಾ ಸಮಿತಿಯ ಸದಸ್ಯರಾಗಿ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ,ಕರುನಾಡು ಕವಿ ಬಳಗ(ರಿ)ಬೀದರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ,ಕೃಷಿ ಸೇವಾ ಸಂಸ್ಥೆ ಕೊಡಂಬಲ(ರಿ)
ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸತ್ಯ ತತ್ವ ಪಾಲಕರು: 20 ವರ್ಷಗಳಿಂದ ಸತ್ಯ ತತ್ವವನ್ನು ಅರಿತುಕೊಂಡು, ಒಪ್ಪಿ - ಅಪ್ಪಿಕೊಂಡು, ನಾಡಿನ ತುಂಬೆಲ್ಲಾ ಪ್ರಚಾರ ಮಾಡುವ ಕಾಯಕದಲ್ಲಿ ನಿರಂತರಾಗಿದ್ದಾರೆ. ವಿಜ್ಞಾನದ ತಳಹದಿಯಾದ ವಾಸ್ತವ ಹಾಗು ಅರಿವು, ಸಮಾತವಾದದ ತತ್ತ್ವಗಳ ವೈಚಾರಿಕ ತಳಹದಿಯ,ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿದೆ ಎಂದು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನದಲ್ಲಿ ಮಗ್ನನರಾಗಿದ್ದಾರೆ.ಬಸವಣ್ಣನವರ ಹಾಗೂ ಸ್ವಾಮಿ ವಿವೇಕಾನಂದರ ಆಶಯದಂತೆ ಕಂಧಾಚಾರಗಳ ಹಾಗೂ ಬೃಷ್ಟಾಚಾರದ
ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹಾಗೆ ಅವರ ಆಚಾರ ವಿಚಾರಗಳನ್ನು ಹೊತ್ತುಕೊಂಡು,
ಸತ್ಯ, ನ್ಯಾಯ, ನೀತಿ, ಕಾಯಕ,ದಾಸೋಹ, ಸಮಾನತೆ,ಭಾವೈಕ್ಯ ಸಂದೇಶ - ಮೌಲ್ಯಗಳನ್ನು ಸಾರುತ್ತಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಜೊತೆಗೆ ಇವರ ತತ್ವಗಳನ್ನು ಶಾಶ್ವತವಾಗಿ ಈ ನಾಡಿನಲ್ಲಿ ಬೇರೂರುವಂತೆ ಮಾಡುವ ಸಂಕಲ್ಪ ಇವರದು. ಹಾಗೆ ಅಜ್ಞಾನವನ್ನು ಅಳಿಸಿ,ಸುಜ್ಞಾನ ಬಿತ್ತುತ್ತಿರುವ ಕಾಯಕವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದಾರೆ. ದಯವೇ ಧರ್ಮದ ಮೂಲವಾಗಬೇಕು. ಯಾವ ಧರ್ಮವೂ ನಿರ್ದಯತೆಯನ್ನು ಬೋಧಿಸುವುದಿಲ್ಲ. ಅಕಸ್ಮಾತ್ ಅಂಥ ಯಾವುದಾದರೂ ಧರ್ಮಿವಿದ್ದರೆ ಅದು ಸೃಷ್ಟಿ ಕರ್ತನಿಗೆ ಒಪ್ಪಿಗೆಯಾದ ಧರ್ಮವೇ ಅಲ್ಲವೇ ಅಲ್ಲ ಎಂದು ಜನರಿಗೆ ತಿಳಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ
ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರ ನವರ ಆದರ್ಶ ಪ್ರಯೋಗಶೀಲ, ಚಲನಶೀಲ, ಲೋಕದ ಡೊಂಕ ತಿದ್ದಲು ಹೊರಡುವ ಜನನಾಯಕನ ಧಾಟಿಯಲ್ಲಿ ಅವರ ವಿಚಾರ ಇರುವುದಿಲ್ಲ. ಅಲ್ಲಿ ಸಂತನ ನಮ್ರತೆಯಿದೆ, ಸಿದ್ಧಾಂತದ ಭಾರಕ್ಕೆ ಬದಲಾಗಿ ಜೀವನ ಪ್ರೇಮದ ಹೂ ಹಗುರತೆಯಿದೆ. ಅವರು ಲೋಕವನ್ನು ತಿದ್ದುವ ಮುನ್ನ ತಮ್ಮ ತಮ್ಮ ಅಂತರಂಗವನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಾಯಕವನ್ನು ಮಾಡುತ್ತಾರೆ. ಇದೆ ದಿಸೆಯಲ್ಲಿ ಸಂಗಮೇಶ ಜವಾದಿಯವರ ಜೀವನ ಸಾಗುತ್ತಿದೆ ಎಂದರೆ ತಪ್ಪಾಗಲಾರದು ಸ್ನೇಹಿತರೆ.
ಸಾಹಿತ್ಯ ಸೇವೆ: 18 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಸಮಸ್ಯೆಗಳು ಬಂದಾಗ ಎದೆ ತಟ್ಟಿ ನಿಲುವ ಎದೆಗಾರಿಕೆ ಜವಾದಿಯವರದು.ಹಲವಾರು ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿದ ಹಿರಿಮೆ ಇವರದು.150 ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನಗಳನ್ನು ವಾಚನ ಮಾಡಿರುತ್ತಾರೆ. 500 ಅಧಿಕ ವೈಜ್ಞಾನಿಕ ಮತ್ತು ವೈಚಾರಿಕ - ಸಮಾಜ ಮುಖಿ ಲೇಖನಗಳನ್ನು ಬರೆದಿದ್ದಾರೆ.ಅದೇ ರೀತಿಯಲ್ಲಿ 200 ಕ್ಕೂ ಹೆಚ್ಚು ಕವಿತೆಗಳನ್ನು ಸಹ ರಚನೆ ಮಾಡಿದ್ದಾರೆ. ಆದಕಾರಣ ಇವರ ರಚನೆ ಮಾಡಿರುವ ಸಾಹಿತ್ಯ ರಾಷ್ಟ್ರ - ರಾಜ್ಯ ಮಟ್ಟದ
ನಾಡಿನ ವಿವಿಧ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಣೆಗೊಂಡಿರುತ್ತವೆ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಇವರಿಗೆ ಅಭಿನಂದನೆಗಳ ಮಾಹಾಪೂರವೇ ಹರಿದು ಬಂದಿರುವುದು ಇವರ ಸಾಹಿತ್ಯ ಸೇವೆಯ ಸಾಕ್ಷಿ ಪ್ರಜ್ಞೆಯಾಗಿದೆ ಬಂಧುಗಳೆ.
ತರಬೇತಿ/ಶಿಬಿರಗಳು: ಸಂಗಮೇಶ ಜವಾದಿಯವರು ಸಾಹಿತ್ಯ, ಸಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಂತೆ ಈ ವಿಭಾಗಗಳಲ್ಲಿಯೋ ಅತ್ಯಂತ ಶ್ರದ್ಧಾ ಭಕ್ತಿ ಭಾವದಿಂದ ಭಾಗವಹಿಸಿ ಅಪಾರವಾದ ಅನುಭವವನ್ನು ಪಡೆದಿದ್ದಾರೆ.
ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಬೀದರ ವತಿಯಿಂದ ಜರುಗಿದ - ಜರುಗುತ್ತಿರುವ ರೈತ ತರಬೇತಿ, ಕ್ಷೇತ್ರ ಪ್ರವಾಸ, ಕೃಷಿ ಮೇಳಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಧಾರವಾಡ ಇವರ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ತರಬೇತಿಯಲ್ಲಿ 3 ದಿನಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹುಬ್ಬಳ್ಳಿ ಯವರು ಆಯೋಜಿಸಿದ್ದ ಕೃಷಿ ತರಬೇತಿಯಲ್ಲಿ ಒಂದು ತಿಂಗಳ ಕಾಲ ಭಾಗಿಯಾಗಿ ತರಬೇತಿ ಪಡೆದುಕೊಂಡಿದ್ದಾರೆ.ಅದೇ ರೀತಿ ಕೃಷಿ ವಿಜ್ಞಾನ ಕೇಂದ್ರ ವಿಜಯಪುರ ರವರು ಆಯೋಜನೆ ಮಾಡಲಾದ ರಾಜ್ಯ ವಲಯ ಕಾರ್ಯಾಗಾರದಲ್ಲಿ 7 ದಿನಗಳ ಕಾಲ ತರಬೇತಿ ಪಡೆದಿರುತ್ತಾರೆ.ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ರವರು ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಲೇಖನ ತರಬೇತಿ ಶಿಬಿರದಲ್ಲಿ 3 ದಿನಗಳ ಕಾಲ ಹಾಜರಾಗಿರುತ್ತಾರೆ.ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಕರ್ನಾಟಕ ಸರ್ಕಾರ ಬೆಳಗಾವಿಯವರ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕಾದಂಬರಿ ಅಧ್ಯಯನ ಶಿಬಿರದಲ್ಲಿ 3 ದಿವಸಗಳ ಕಾಲ ಭಾಗಿಯಾಗಿರುತ್ತಾರೆ.ಇದಲ್ಲದೇ ಗ್ರಾಮಾಭಿವೃದ್ಧಿ ಸಂಸ್ಥೆ ಭಾರತ ಸರಕಾರ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ (ಸಮಗ್ರಹ ಗ್ರಾಮಗಳ ಅಭಿವೃದ್ಧಿ ವಿಷಯದ ಕುರಿತು) 2 ದಿನಗಳ ಶಿಬಿರದಲ್ಲಿ ಹಾಜರಾಗಿರುತ್ತಾರೆ. ಹೀಗೆ ಇನ್ನು ಹತ್ತು ಹಲವಾರು ತರಬೇತಿ/ಶಿಬಿರಗಳಲ್ಲಿ ಹಾಜರಾಗಿ ಅನುಭವವನ್ನು ಪಡೆದುಕೊಳ್ಳುವ ಮೂಲಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
ಸಮಾಜಮುಖಿ ಸೇವೆಗಳು: ಶರಣ ಸಾಹಿತ್ಯ ಪರಿಷತ್ತು ಹಾಗೂ ಕಲ್ಯಾಣ ಕಾಯಕ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ವಚನ ಚಿಂತನೆ ಗೋಷ್ಠಿ, ದತ್ತಿ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಮಕ್ಕಳಿಗೆ ವಿವಿಧ ವೈಜ್ಞಾನಿಕ - ವೈಚಾರಿಕ ಕುರಿತು ವಿಶೇಷ ಸ್ವರ್ಧೆಗಳು ಆಯೋಜನೆ,ಮಾಹಾಮನೆ ಕಾರ್ಯಕ್ರಮ, ಸಾಧಕರು - ಪ್ರತಿಭಾವಂತರಗೆ ಸನ್ಮಾನ,ವಚನೋತ್ಸವ ಕಾರ್ಯಕ್ರಮ,ಇತ್ಯಾದಿ ಶರಣ ಸಾಹಿತ್ಯ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳು ಸಂಗಮೇಶ ಜವಾದಿಯವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಾಗುತ್ತಿವೆ.ಇವುಗಳಲ್ಲದೆ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿವತಿಯಿಂದ ವಿವಿಧ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಬೀದರ ಜಿಲ್ಲಾದ್ಯಾಂತ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ದೇಹದಾನ,ನೇತ್ರದಾನ, ಅಂಗಾಂಗಗಳ ದಾನ,ರಕ್ತದಾನ ಕುರಿತು ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯ ಕ್ಷೇತ್ರದ ಅಭ್ಯುದಯಕ್ಕಾಗಿ ಹಗಲಿರುಳು ಜಿಲ್ಲಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚುಟುಕು ಸಾಹಿತ್ಯ ಬೆಳೆಸುವಲ್ಲಿ ನಿರಂತರಾಗಿದ್ದಾರೆ, ಚುಟುಕು ಸಾಹಿತ್ಯಕ್ಕೆ ಸಂಬಂಧಿಸಿದ ಕವಿಗೋಷ್ಠಿ, ಚಿಂತನಾ ಗೋಷ್ಠಿ, ವಿಶೇಷ ಉಪನ್ಯಾಸ ಕಾರ್ಯಕ್ರಮಗಳುನ್ನು ಹಮ್ಮಿಕೊಳ್ಳುವ ಮೂಲಕ ಚುಟುಕು ಸಾಹಿತ್ಯವು ಕಲ್ಯಾಣ ನಾಡಿನಲ್ಲಿ ಬೆಳೆಸಲು ಮುಂದಾಗಿದ್ದಾರೆ.ಕೃಷಿ ಕಾಯಕ ಸಂಸ್ಥೆಯ ಅಧ್ಯಕ್ಷರಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ರೈತರ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ರೈತರ ಸಮಸ್ಯೆಗಳು ಆಲಿಸುವುದರೊಂದಿಗೆ ಪರಿಹಾರ ಕಾರ್ಯಕ್ಕೆ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ.ಸ್ವತಃ ಕೃಷಿಕರಾಗಿ ದುಡಿಯುತ್ತಿರುವ ಸಂಗಮೇಶ ಜವಾದಿಯವರು ಇಡೀ ರೈತರ ಎಲ್ಲಾ ಸಮಸ್ಯೆಗಳ ಆಗು ಹೋಗುಗಳ ಬಗೆ ಸಂಪೂರ್ಣ ಮಾಹಿತಿ ಅವರಿಗೆ ಗೊತ್ತಿದೆ. ಹಾಗಾಗಿ ರೈತರ ಬವಣೆಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ರೈತರ ಸಂಕಷ್ಟ ಗಳಿಗೆ ಸ್ವಂದನೆ ಮಾಡುತ್ತಿದ್ದಾರೆ. ರೈತರ ಮಿತ್ರನಾಗಿ,ರೈತರ ಆಶಾಕಿರಣವಾಗಿ ಕೃಷಿ ಕಾಯಕ ಮಾಡುತ್ತಿದ್ದಾರೆ. ರೈತರಿಗೆ ಸರಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೆರವಾಗುತ್ತಿದ್ದಾರೆ, ರೈತರ ಚಿಂತನಾ ಗೋಷ್ಠಿ, ರೈತ ಕ್ಷೇತ್ರ ಪ್ರವಾಸ, ಕೃಷಿ ಮೇಳ,ರೈತರ ತರಬೇತಿ ಕಾರ್ಯಕ್ರಮ,ರೈತರ ಕ್ಷೇತ್ರ ಪ್ರವಾಸ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ರೈತರ ಸಮಗ್ರಹ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ವಿಕಾಸ್ ಅಕಡಾಮಿ, ಹಣತೆ ಕವಿ ಬಳಗ,ಬಸವ ಚೇತನ ಸಂಘ ಹಾಗೂ ಬರಹಗಾರ ಒಕ್ಕೂಟದ ವತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ನಾಡಿನಲ್ಲಿ ನಿಸ್ವಾರ್ಥದಿಂದ ಮಾಡಿಕೊಂಡು ಬರುತ್ತಿದ್ದಾರೆ.ಅಲ್ಲದೆ ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನ ಕೆಲಸ, ಗ್ರಾಮಾಭಿವೃದ್ಧಿಯ ಕನಸು ಹೊತ್ತುಕೊಂಡು ಸಾಗುತ್ತಿದ್ದಾರೆ. ಜಿಲ್ಲಾ ರೈತರ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಇವರದಾಗಿದೆ.
ಬಡವರ,ನೊಂದವರ, ಅನಾಥರ ಸಂರಕ್ಷಣೆ ಹಾಗೂ ಅವರ ಸಹಾಯಕ್ಕೆ ಧಾವಿಸುವ ಹೃದಯದ ಶ್ರೀಮಂತಿಕೆಯ ವ್ಯಕ್ತಿತ್ವದ ಧೀಮಂತರು ಹಾಗಾಗಿ ಸಂಗಮೇಶ ಜವಾದಿಯವರು ಶ್ರೇಷ್ಠ ನಿಸ್ವಾರ್ಥ ಸಮಾಜ ಸೇವಕರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಸಧ್ಯ ಇವರು (ಪ್ರಸ್ತುತ) ನಿರ್ವಹಣೆ ಮಾಡುತ್ತಿರುವ ಸಮಾಜಮುಖಿ ಸೇವೆಗಳ ಜವಾಬ್ದಾರಿಗಳು ಹೀಗಿವೆ:
ಕಲ್ಯಾಣ ಕಾಯಕ ಪ್ರತಿಷ್ಠಾನದ ಅಧ್ಯಕ್ಷ,ಕೃಷಿ ಕಾಯಕ ಸಂಘದ ಅಧ್ಯಕ್ಷ(ರಿ),ಬಸವ ಚೇತನ ತೋಟಗಾರಿಕೆ ಬಳೆಗಾರರ ಸಂಘದ (ರಿ) ಸಂಚಾಲಕ,ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯ ಸಮಿತಿಯ ನಿರ್ದೇಶಕ,ಅಖಿಲ ಕರ್ನಾಟಕ ಲಿಂಗಾಯತ ಪ್ರತಿಷ್ಠಾನದ ಅಧ್ಯಕ್ಷ,ಗೌರವ ಕಾರ್ಯದರ್ಶಿ ಕನ್ನಡ
ಪರಿಷತ್ತು ಚಿಟಗುಪ್ಪ ತಾಲೂಕು ಘಟಕ.,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿಟಗುಪ್ಪಾ ತಾಲೂಕಿನ ಅಧ್ಯಕ್ಷ,ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಅಭಿಯಾನ ಬೀದರ ಜಿಲ್ಲಾ ಸಮಿತಿಯ ಅಧ್ಯಕ್ಷ,ಜಿಲ್ಲಾಧ್ಯಕ್ಷರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ್ ಜಿಲ್ಲೆ., ಜಿಲ್ಲಾಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.,
ಹೀಗೆ ಹತ್ತು ಹಲವಾರು ಸಮಾಜಮುಖಿ ಸೇವಾ ಕೈಂಕರ್ಯ ಹೊತ್ತು ನಾಡಿನ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿರುವ ಪ್ರತಿಭಾವಂತ ನಿಸ್ವಾರ್ಥ ಸೇವಕರಾಗಿ ಸಧ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಇವರ ಸಾಧನೆ:
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೊಡಂಬಲ - ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಮಾಡಲಾಗಿದೆ ಹಾಗೂ
ಪ್ರಾಥಮಿಕ ಗ್ರಾಹಕರ ಸಹಕಾರ ಸಂಘ ನಿಯಮಿತ ಚಿಟಗುಪ್ಪಾ ಈ ಸಂಸ್ಥೆಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಮಾಡಲಾಗಿದೆ.ಹೀಗೆ ಇನ್ನು ಹಲವು ಸಹಕಾರ ಸಂಘಗಳ ಸದಸ್ಯ ಮತ್ತು ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸರಕಾರದ ವತಿಯಿಂದ ನಾಮ ನಿರ್ದೇಶನ - ಜವಾಬ್ದಾರಿಗಳು ಹೀಗಿವೆ:
ಬೀದರ ಜಿಲ್ಲೆಯ ಕೃಷಿ ಇಲಾಖೆ ಅಡಿಯಲ್ಲಿ ಬರುವ ಜಿಲ್ಲಾ ಮಟ್ಟದ ರೈತರ ಸಲಹಾ ಸಮಿತಿಯ ಸದಸ್ಯರಾಗಿ ಹಾಗೂ ರಾಜ್ಯ ಮಟ್ಟದ ರೈತ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮತ್ತೆ
ಕೊವೀಡ್ 19 ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಬಗೆಯ ಕಲಾವಿದರು ಸೇರಿದಂತೆ ಸಾಹಿತಿಗಳಿಗೆ ಆರ್ಥಿಕ ನೆರವು ನೀಡುವ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಜೊತೆಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಚಿಟಗುಪ್ಪ ತಾಲೂಕು ಘಟಕದ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಹೀಗೆ ಸರಕಾರದ ವತಿಯಿಂದ ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ಸೈ ಎನಿಸಿಕೊಂಡಿರುತ್ತಾರೆ.
ಇವರಿಗೆ ಸಂಧ ಗೌರವ ಸನ್ಮಾನಗಳು: ವಿನಯವಾಣಿ ಪತ್ರಿಕೆ ಆಡಳಿತ ಮಂಡಳಿಯ ವತಿಯಿಂದ ಕೊಪ್ಪಳ, ಮುರುಘಾ ಮಠ ಚಿತ್ರದುರ್ಗ, ಅನುಭವ ಮಂಟಪ ಬಸವಕಲ್ಯಾಣ, ಭಾಲ್ಕಿ ಹಿರೇಮಠ, ಹೊಲಸೂರಿನ ಬಸವೇಶ್ವರ ಮಠ,ಕಲ್ಯಾಣ ಪ್ರತಿಷ್ಠಾನ ಬೀದರ, ಬಸವಕೇಂದ್ರ ಬೀದರ, ಬೀದರ ಜಿಲ್ಲಾ ಕೃಷಿ ಇಲಾಖೆ ಬೀದರ,ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೀದರ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲೆ,ಕನ್ನಡ ಸಾಹಿತ್ಯ ಪರಿಷತ್ತು ಭಾಲ್ಕಿ ಮತ್ತು ಹುಮನಾಬಾದ ತಾಲೂಕು ಘಟಕ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು,ಬೀದರ ಜಿಲ್ಲಾಡಳಿತ ವತಿಯಿಂದ ಜರುಗುವ ಬಸವ ಉತ್ಸವದ ನಿಮಿತ್ತ,ಮಂದಾರ ಕವಿ ವೇದಿಕೆ ಬೀದರ ವತಿಯಿಂದ,ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿಂದ,ಸಿರಿಗನ್ನಡ ವೇದಿಕೆ ಮಂಡ್ಯ, ವೀರಕನ್ನಡಿಗರ ಸಂಸ್ಥೆ ಬೆಂಗಳೂರು,ಕೃಷಿ ವಿಶ್ವವಿದ್ಯಾಲಯ ಬೆಂಗಳೂರು,ಸಿರಿಗನ್ನಡಂ ವೇದಿಕೆ ಶಿವಮೊಗ್ಗ ಆಡಳಿತ ಮಂಡಳಿಯ ರವರ ವತಿಯಿಂದ,ಸಮರ್ಥ ಕನ್ನಡಿಗರ ಸಂಸ್ಥೆ ಬೆಂಗಳೂರು,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಪ್ರಶಸ್ತಿ ಪತ್ರ ಮತ್ತು ಅಭಿನಂದನಾ ಪ್ರಮಾಣ ಪತ್ರ,ರಾಜ್ಯ ಮಟ್ಟದ ಬೀಚಿ ಸಮಾದಾನಕರ ಬಹುಮಾನ,ರಾಜ್ಯ ಮಟ್ಟದ ವಿಜ್ಞಾನ ಸಮಾದಾನಕರ ಬಹುಮಾನ, ಮುಂಬೈ ಮೋಗವೀರ ಪತ್ರಿಕೆಯ ವತಿಯಿಂದ ಅಭಿನಂದನಾ ಪತ್ರ,
ರಾಜ್ಯ ಮಟ್ಟದ ಲೇಖಿಕಾ ಸಾಹಿತ್ಯ ವೇದಿಕೆ ಬೆಂಗಳೂರು ರವರಿಂದ ಸನ್ಮಾನ ಹೀಗೆ ಇನ್ನು ನೂರಾರು ಸನ್ಮಾನಗಳು ವಿವಿಧ ಕನ್ನಡ ಸಂಸ್ಥೆ, ಸಮಾಜಿಕ ಸೇವಾ ಸಂಸ್ಥೆ ಮತ್ತು ಮಠಗಳಿಂದ ಇವರ ತ್ಯಾಗಕ್ಕೆ ಸಂಧಿವೆ ಹಾಗೂ 100 ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿದ್ದಾರೆ.
500 ಕ್ಕೂ ಹೆಚ್ಚು ವೈಜ್ಞಾನಿಕ, ವೈಚಾರಿಕ ಮತ್ತು ಸಮಾಜ ಮುಖಿ ಲೇಖನಗಳು ಬರೆದಿದ್ದಾರೆ.ಹೀಗೆ
ಅತ್ಯುತ್ತಮ ಸಮಾಜಿಕ ಸೇವಕರಾಗಿ, ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಇವರ ನಿಸ್ವಾರ್ಥ ಸೇವೆಗಳಿಗೆ ಸಂಧ ಗೌರವ ಪ್ರಶಸ್ತಿಗಳು ಹೀಗಿವೆ:
ತಾಲೂಕು, ಜಿಲ್ಲಾ ಮಟ್ಟದ ಲೇಖನ ಮತ್ತು ಪ್ರಬಂಧ ಪ್ರಶಸ್ತಿ., ಹುಮನಾಬಾದ ಎಸ್ ಬಿಸಿ ಕಾಲೇಜು ವತಿಯಿಂದ ಪ್ರಶಂಸನಾ ಪ್ರಶಸ್ತಿ.,ಕವಿಚೇತನ ಪ್ರಶಸ್ತಿ.,ನೈಜದ್ವೀಪ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಚಿಂಚೋಳಿ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ.,
ಸಿರಿಗನ್ನಡ ವೇದಿಕೆ (ರಿ)ಮಂಡ್ಯ ಇವರಿಂದ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,ಕರ್ನಾಟಕ ಸಾಂಸ್ಕೃತಿಕ ಅಕಡಾಮಿ ವತಿಯಿಂದ ಕಾಯಕ ಶ್ರೀ ಪ್ರಶಸ್ತಿ.,ವೀರಶೈವ ಸಾಂಸ್ಕೃತಿಕ ಪ್ರತಿಷ್ಠಾನ ಇವರ ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ., ಭಾರತ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು ರವರಿಂದ ಕರ್ನಾಟಕ ಭೂಷಣ ಪ್ರಶಸ್ತಿ.,ಕಲ್ಯಾಣ ನಾಡಿನ ಹಾರಕೂಡ ಮಠದ ವತಿಯಿಂದ ಚನ್ನವೀರ ರತ್ನ ಪ್ರಶಸ್ತಿ.,
ಕರ್ನಾಟಕ ದರ್ಶನ ಮಾಸ ಪತ್ರಿಕೆಯಿಂದ ಜನಸೇವಾ ರತ್ನ ಪ್ರಶಸ್ತಿ.,ಸಮಾಜ ಕಲ್ಯಾಣ ಸೇವಾ ಸಂಸ್ಥೆಯ ವತಿಯಿಂದ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ.,ಬಸವ ಬೀಮ ಸೇನೆ(ರಿ)ಯ ವತಿಯಿಂದ ಚಿನ್ಮಯ ಜ್ಞಾನಿ ಚನ್ನಬಸವ ಪ್ರಶಸ್ತಿ.,ಚಿನ್ಮಯ ಪ್ರಕಾಶನ ಸಂಸ್ಥೆ ಬೆಳಗಾವಿ ಇವರಿಂದ ಬಸವ ಚೇತನ ಪ್ರಶಸ್ತಿ.,ಜನ ಮನ ಫೌಂಡೇಶನ್ ವತಿಯಿಂದ ಸೂಪರ್ ಅಚಿವರ್ ಅವಾರ್ಡ್ ಪ್ರಶಸ್ತಿ.,ಬೀದರ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,
ಕೊಪ್ಪಳದ ಇಟಗಿ ಉತ್ಸವ ಪ್ರಯುಕ್ತ ರಾಜ್ಯ ಮಟ್ಟದ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ.,ವೀರ ಕನ್ನಡಿಗರ ಸೇನೆ ಬೀದರ ರವರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.,
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ರವರಿಂದ ವಿಶ್ವ ಕನ್ನಡ ಸೇವಾ ಪ್ರಶಸ್ತಿ.,ರಾಜ್ಯ ಯುವ ಬರಹಗಾರರ ಒಕ್ಕೂಟ ವತಿಯಿಂದ ರಾಜ್ಯ ಮಟ್ಟದ ಕುದ್ಮಲ್ ರಂಗರಾವ್ ಪ್ರಶಸ್ತಿ.,ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕರ್ನಾಟಕ ಸೇವಾ ಮಾಣಿಕ್ಯ ಪ್ರಶಸ್ತಿ.,ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ಕುಸುಮಾಕರ ಪ್ರಶಸ್ತಿ,. ಸದ್ಗುರು ಯಲ್ಲಾಲಿಂಗೇಶ್ವರ ಸಂಸ್ಥಾನ ಟ್ರಸ್ಟ್ ಸಸ್ತಾಪೂರ ವತಿಯಿಂದ ರಾಜ್ಯ ಮಟ್ಟದ ಯಲ್ಲಾಲಿಂಗೇಶ್ವರ ಪ್ರಶಸ್ತಿ.,ರಾಜ್ಯ ಮಟ್ಟದ ಲೇಖಕರ ಪ್ರಶಸ್ತಿ., ಸೇರಿದಂತೆ ಇನ್ನು ಹತ್ತು ಹಲವಾರು ಪ್ರಶಸ್ತಿ, ಗೌರವ ಸನ್ಮಾನಗಳು ಪಡೆದ ಕೀರ್ತಿ, ಶ್ರೇಯಸ್ಸು ಇವರದಾಗಿದೆ.
ಅಭಿಮಾನದ ನುಡಿ: ಹೊಸ
ತಲೆಮಾರಿನ ಸಾಹಿತಿಗಳಲ್ಲಿ ಬೀದರ ನಾಡಿನ ಅಕ್ಷರ ಲೋಕಕ್ಕೆ ಕಳಸವಿತ್ತ ಸಾಹಿತಿಗಳಲ್ಲಿ ಸಂಗಮೇಶ ಎನ್ ಜವಾದಿಯವರು ಪ್ರಮುಖರಾಗಿರುವರು.
ಇವರು ಬರೆದ ಬರವಣಿಗೆಯಲ್ಲಿ ಅವಸರವಿಲ್ಲದ ಸಮಾಧಾನ ಚಿತ್ತದ ಗಾಂಭೀರ್ಯತೆ ಇದೆ.
ಸಾಮಾಜಿಕ ಚಿಂತನೆ, ಆಪ್ತತೆ, ಬದ್ಧತೆ, ಸೂಕ್ಷ್ಮ ಅವಲೋಕನದ ದೃಷ್ಟಿಯಿಂದ ಕೂಡಿದ್ದು ಸಮಕಾಲೀನ ಘಟನೆ ಹಾಗು ಜನಪರ ನೋವು ನಲಿವುಗಳ ಬವಣೆಯ ಭಾವನೆಗಳಿಗೆ ಪ್ರಮುಖ ಮುಖಾಮುಖಿಯಾಗಿವೆ.
ಜವಾದಿಯವರು ತಮ್ಮ ಓದಿನ ಜೊತೆ ಜೊತೆಗೆ ಇನ್ನೂ ಹೆಚ್ಚಿನ ಒತ್ತನ್ನು ಸಾಹಿತ್ಯದ ಕೃಷಿಗೆ ನೀರೆರೆದು ಪೋಷಿಸಿದ ಅವರು ಕಾವ್ಯ, ಕಥೆ, ಲೇಖನಗಳು ಬರೆಯುವುದರ ಜೊತೆಗೆ ವಿವಿಧೆಡೆ ನಡೆಯುವ ರಾಜ್ಯ ಹಾಗು ರಾಷ್ಟ್ರ ಸಮ್ಮೇಳನದಲ್ಲಿ ಪಾಲ್ಗೊಂಡು, ವಿಚಾರ ಗೋಷ್ಠಿ ಹಾಗು ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ಸಾಹಿತ್ಯ, ಸಮಾಜಿಕ ಸೇವೆಯಲ್ಲಿ ತೋಡಗಿಸಿಕೊಂಡ ಜವಾದಿಯವರ ಬದುಕಿನಲ್ಲಿ ಅವರು ಕಂಡ ನೋವು, ಸಂಕಟ, ಅನುಭವಿಸಿದ ಬಡತನ, ಸಣ್ಣ ವಯಸ್ಸಿನಲ್ಲೇ ತಂದೆಯ ಸಾವು, ಓದಿಗಾಗಿ ಊರೂರು ಅಲೆದದ್ದು, ಬರಿಗಾಲಿನಲ್ಲಿ ನಡೆದುಕೊಂಡೆ ವಿಧ್ಯಾಭ್ಯಾಸ ಮುಗಿಸಿಕೊಂಡೆ ಸಮಾಜಿಕ ಸೇವೆಯಲ್ಲಿ ಸಮರ್ತಿಸಿಕೊಂಡಿದ್ದನ್ನು ಕಂಡರೆ ಅವರ ನಿಸ್ವಾರ್ಥ ವ್ಯಕ್ತಿತ್ವ ನಮಗೆಲ್ಲರಿಗೂ ಸ್ವೂರ್ತಿಯಾಗಿ ಕಾಣುತ್ತದೆ.
ಇಂತಹ ನಿಸ್ವಾರ್ಥ ಅಪರೂಪದ ತ್ಯಾಗದ ಸೇವೆಯ ಸೇವಕ ಈ ಕಲ್ಯಾಣ ನಾಡಿನಲ್ಲಿ ಹುಟ್ಟಿ,ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಬಂಧುಗಳೆ, ಸ್ವಾಭಿಮಾನ - ಅಭಿಮಾನದ ಮೂಲಕ ಪ್ರತಿಯೊಬ್ಬ ಪ್ರಜೆಗಳಲ್ಲಿ ಸಾಹಿತ್ಯ - ಸಮಾಜ ಸೇವಾ ಮೌಲ್ಯಗಳ ಬಿತ್ತುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ನಿಜಕ್ಕೂ ಸಾಹಿತ್ಯ ಮತ್ತು ಸಮಾಜ ಮುಖಿ ಸೇವೆಗಳ ಒಳ್ಳೆಯ ಬೆಳವಣಿಗೆಯ ಸಂಕೇತ ಮತ್ತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಸಂಗಮೇಶ ಎನ್ ಜವಾದಿ ಯವರು ಹಲವಾರು ಸಮಸ್ಯೆಗಳ ನೋವಿನ ನಡುವೆ,ಎಲ್ಲಾ ಸಂಕಷ್ಟಗಳನ್ನು ದಾಟ್ಟಿ -ಸವೆಸಿ,ಹೋರಾಟದ ಕೆಚ್ಚೆದೆಯ ಮನೋಭಾವ - ಮನೋಧರ್ಮ ಪ್ರದರ್ಶನ ಮಾಡುವ ಮೂಲಕ ಜನಸಾಮಾನ್ಯರ ಪ್ರೀತಿ - ಸ್ನೇಹವನ್ನು ಸಂಪಾದನೆ ಮಾಡಿದ್ದಾರೆ. ನೋವು - ನಲುವಿನ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳದೆ. 12ನೇ ಶತಮಾನದ ಬಸವಾದಿ ಶರಣರು ಕಂಡ ಸಮತಾವಾದದ ಸಮಾನತೆಯ ಆದರ್ಶ ಸಮಾಜ ನಿರ್ಮಾಣ ಮಾಡುವ ಕನಸು ನನಸಾಗಿಸುವ ದಿಸೆಯಲ್ಲಿ ಕಾರ್ಯ ಪೃವತ್ತರಾಗಿದ್ದಾರೆ. ಪ್ರಪಂಚದ ಎಲ್ಲಾ ಜೀವಾತ್ಮರ ಘನತೆ, ಗೌರವ ಕಾಪಾಡುವುದರೊಂದಿಗೆ ಗೌರವಿಸುವುದೇ ನಿಜವಾದ ಮಾನವೀಯ - ಮನುಷ್ಯನ ಧರ್ಮ (ಗುಣ) ಎಂದು ತಿಳಿದು ನಡೆಯುತ್ತಿದ್ದಾರೆ.
ಸ್ವಾತಂತ್ರ್ಯ, ಸಮಾನತೆ, ನ್ಯಾಯ, ನೀತಿ, ಮೌಲ್ಯಗಳನ್ನು ಬಲವಾಗಿ ನಂಬಿ ಮಾನವೀಯ ಮೌಲ್ಯಗಳ ಸಾರುವ ಕಾಯಕದಲ್ಲಿ ನಿರಂತರಾಗಿದ್ದಾರೆ ಹಾಗೂ ಬಸವಾದಿ ಶರಣರ ಸನ್ಮಾರ್ಗದಲ್ಲಿ ಸಾಗುವ ಕೆಲಸದ ಜೊತೆ ಸಮಾನತೆ, ಸಹೋದರತೆ,ಸಹಬಾಳ್ವೆಗಳನ್ನು ಪ್ರಮಾಣಿಕವಾಗಿ ಜಾರಿಗೆ ತರಲು ಶ್ರಮಿಸುತ್ತಿದ್ದಾರೆ.ಹೀಗೆ ಅನೇಕ ಸಮಾಜಿಕ ಸಮಾನತೆಯ ಸಾರುವ ಸೇವೆಗಳ ಮೌಲ್ಯಗಳನ್ನು ಈ ನಾಡಿನ ಜನರಲ್ಲಿ
ಯಶಸ್ವಿಯಾಗಿ ಬಿತ್ತುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ಸೇರಿ ಸರ್ವ ಜನಾಂಗದಲ್ಲಿ ವಚನ ಸಾಹಿತ್ಯ ಸಿದ್ದಾಂತದ ಜೀವಾಳವನ್ನು ತುಂಬುವ ದಿಸೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.ಹಾಗಾಗಿ ನಮ್ಮೆಲ್ಲರಿಗೂ ಚೈತನ್ಯದ ಚಿಲುಮೆಯಾಗಿ ಕಂಗೊಳಿಸುತ್ತಿರುವ ಜವಾದಿಯವರ ಸೇವೆ ಅನನ್ಯ.
ಹಾಗಾಗಿ ಇಂತಹ ಬಹುಮುಖ ಪ್ರತಿಭೆಯ ಸಾಧಕರು ನಮ್ಮಗೆ ಸ್ವೋರ್ತಿಯ ಮಾರ್ಗದರ್ಶಕರು ಮತ್ತು ಕರುನಾಡಿನ ಹೆಮ್ಮೆಯ ಮಗನಾಗಿ ಇಡೀ ದೇಶವೇ ದೇಶ ಮೆಚ್ಚುವಂತೆ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸುತ್ತಾ, ವಿಶ್ವವೇ ಹೆಮ್ಮೆ ಪಡುವಂತ ಶರಣ ಸಾಹಿತ್ಯ,ಸಮಾಜ ಸೇವೆ ಮಾಡಲಿ ಎಂಬುವುದೇ ಪ್ರತಿಯೊಬ್ಬ ಬಸವಾ - ಸಾಹಿತ್ಯಾಭಿಮಾನಿಗಳ ಆದಮ್ಯ ಬಯಕೆ,ಇವರ ಸಮಾಜಿಕ ಚಿಂತನೆ, ಕನ್ನಡ ಹಾಗೂ ಶರಣ ಸಾಹಿತ್ಯ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಲು ವಿಶ್ವದ ದಾರ್ಶನಿಕರ ಮತ್ತು ಹಿರಿಯರ ಆಶೀರ್ವಾದ,ಅನುಗ್ರಹ ಇವರ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತೇವೆ.
-
ಲೇಖಕರು : ಬಿ.ಆರ್.ಮಂಕಲ್,ಬೀದರ.
-
ಪ್ರಸ್ತುತ ಇವರ ವಿಳಾಸ : -
ಸಂಗಮೇಶ ಎನ್ ಜವಾದಿ, ಕೊಡಂಬಲ.
ಜಿಲ್ಲಾಧ್ಯಕ್ಷರು : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರುನಾಡು ಸಾಹಿತ್ಯ ಪರಿಷತ್ತು,ಬೀದರ ಜಿಲ್ಲೆ.
ನಂ :-3/135, ರಾಜ್ ಖಾನಾವಳಿ.
ಆರ್ಯ ಸಮಾಜದ ಹತ್ತಿರ.
ಚಿಟಗುಪ್ಪ - 585412.
ತಾಲೂಕ - ಚಿಟಗುಪ್ಪ.
ಜಿಲ್ಲೆ - ಬೀದರ.
ಮೊ.ನಂ:9663809340.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713649 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ