ಶುಕ್ರವಾರ, ಜೂನ್ 25, 2021

ಮದ ಲಿಂಗನ ಕಣಿವೆ ಪ್ರೇಮ ಕಥೆ….! - ಅಂಜನ್ ಕುಮಾರ್ ತುಮಕೂರು.

ಮದ ಲಿಂಗನ ಕಣಿವೆ  ಪ್ರೇಮ ಕಥೆ….!

ನುಡಿ :- ಲವ್ ಇಸ್ ಜಸ್ಟ್ ಫೀಲಿಂಗ್ಸ್..!
             ಪ್ರೇಮಿಗಳು ದೂರದರು, ಪ್ರೇಮಿಗಳು ಸತ್ತರು 
              ಅವರ ನಿಜವಾದ ಪ್ರೀತಿ ಸಾಯುವುದಿಲ್ಲ.!
              ಆದ್ರೆ ನಿಜವಾದ ಪ್ರೀತಿ ಎಲ್ಲರಿಗೂ ಸಿಕ್ಕಿಲ್ಲ ,ಪಡೆದು ಕೊಂಡ ಅವರಿಗಿಂತ ಕಳೆದು ಕೊಂಡು ಸತ್ತವರೆ ಹೆಚ್ಚು ಹುಚ್ಚರಾದವರೆ ಹೆಚ್ಚು ಒಟ್ಟಿಗೆ ಇಲ್ಲಿ ಪ್ರೆಮಿಗಳೆಲ್ಲ ಹುಚ್ಚರು ..! ಆದ್ರೆ ಪ್ರೀತಿ ಸ್ನೇಹ  ಈ ಕೆಲವು  ಸಂಭಂದ ಗಳು ಯಲ್ಲಿ ಯಾವಗ ಹೇಗೆ ಕಾಣದ ಮನಸಲ್ಲಿ ಹುಟ್ಟಿ ಒಂದು ಫೀಲಿಂಗ್ಸ್ ( ಭಾವನೆ ) ಆಗಿ ಬೆಳೆಯುತ್ತೆ ಅಂತ ಗೊತ್ತಿಲ್ಲ . ಆದ್ರೆ ಆ ಪ್ರೀತಿ ಅನ್ನೋದು ಕಳೆದು ಹೋದ್ರೆ ಕಣ್ಣಿಗೆ ಕಾಣದ ಕೈ ನಲ್ಲಿ ಮುಟ್ಟದ ಆ ಸಣ್ಣ ಕಣ ಅನ್ನಿಸುವ ಒಂದು ದೊಡ್ಡ ಜೀವಾ ವೆ ಇಲ್ಲದೆ ಆಗಿರುತ್ತದೆ... ನಿಜ ಅಲ್ವಾ !?

ಹಿನ್ನೆಲೆ :-  ಈ ಕಥೆ ಯು ಒಂದು ಪ್ರೇಮವನ್ನು ಚಿತ್ರಣ ಮಾಡಿದರೆ ಮತ್ತೊಂದು ನಮ್ಮ ಸುತ್ತು ಕಣಿವೆ ಯ ಪ್ರಕೃತಿ ಸೊಬಗನ್ನು ಕಲ್ಪನೆಯಲ್ಲಿ ಚಿತ್ರಿಸಲಾಗಿದೆ ...! ನಾ ಬರೆದ ಎಲ್ಲ ಕಥೆಗಳು ಸಹ ನಿಜ ಕಥೆಗಳು ಹಾಗೆ ಇದು ಕೂಡ ಒಂದು ನಿಜ ಕಥೆ ..!

ಮದಲಿಂಗ ನ ಕಣಿವೆ  
                       ಸುತ್ತು ಕಣಿವೆ...!

ನಮ್ಮೂರು ಚಿಕ್ಕನಾಯಕನಹಳ್ಳಿ...!
ಅಜ್ಜಿ ಗುಡ್ಡ ಹತ್ತೇಲು ಬೆಟ್ಟ .. ಮಲೆನಾಡು..,!

ಕವಿ ಕಾವ್ಯ ಕಲ್ಪನೆ
ಹೆಸರಲ್ಲೇನಿದೆ ..!

( ಮುದ್ರಣ ದೋಷ ಇದ್ದರೆ ದಯವಿಟ್ಟು ಕ್ಷಮಿಸಿ ಮತ್ತು ಈ ಸಣ್ಣ ಕಥೆ ಓದಿ ನಿಮ್ಮ ಅಭಿಪ್ರಾಯ ಈ ೭೪೮೩೧೪೬೬೯೭ ನಂಬರ್ ಗೆ ಕಾಮೆಂಟ್ ಮಾಡಿ ಯುವ ಕವಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ..! )

ಮದಲಿಂಗ ನ ಕಣಿವೆ 
                          ಸುತ್ತು ಕಣಿವೆ..!

ನಮ್ಮೂರು , ಕಲ್ಪತ ರ ನಡು,  ಶೈಕ್ಷಣಿಕ ಬಿಡು ,ಈ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಹಾಗಲ ವಾಡಿ , ಚೇಳೂರು ..
ಮಾರ್ಗ ಮದ್ಯೆ ಅಂದ್ರೆ ಬರ್ಷೇಹಳ್ಳಿ, ಕತ್ರಿಕೆ ಕಾಳು, ಜಾಣೆಹೆರು , ಅಜ್ಜಿ ಗುಡ್ಡ,  ಹಾಗೂ ಭೂತಪ್ಪನ ಗುಡಿ ಈ ಊರುಗಳ ಸಮೀಪ ಬರುವ ರಮ್ಯ ಮನೋಹರ ವಾದ ತುಮಕೂರು ಮಲೆನಾಡು , ನಮ್ಮೂರು , ಹುಲಿಗಳ ತವರು , ಹಕ್ಕಿ - ಪಕ್ಷಿಗಳ ಗೂಡು ,ಪ್ರೇಮಿಗಳ ಪಾತ್ರ ,ಸಿನಿಮಾ ರೋಮಾನ್ಸ್ ಗಳ ಹಾಗೂ ಕವಿ ಮನಗಳ  ಹಾಗೆ ನೋಡುಗರನ್ನು ಮಳೆ ಗಾಲದಲ್ಲಿ ಮೈ ಬಿಚ್ಚಿ ಮಾತಾಡಿ ಆಕರ್ಷಿಸಿ ಕೈ ಬೀಸಿ ಕರೆಯುವ ಪ್ರಕೃತಿಯ ಮಡಿಲಲ್ಲಿ ನಗುತ್ತಿರುವ ಸುತ್ತು ಕಣಿವೆ , ಮದ ಲಿಂಗ ನ ಕಣಿವೆ ..!

ಈಗ ನಾನು ನೇರವಾಗಿ ಕಥೆಗೆ ಬರ್ತೀನಿ ಏನೂ ಅಂದ್ರೆ ಈ ಕಣಿವೆಗೆ ಈ ಹೆಸರು ಬರಲು ಒಂದು ಕಾರಣ ಇದೆ ಆ ಕಾರಣವೇ ಈ ಸತ್ಯ ಕಥೆ . ಅಜ್ಜಿ ಗುಡ್ಡ ಅಥವಾ ಮದ ಲಿಂಗ ನ ಪ್ರೇಮ ...!

ಸುಂದರ  ಇಪ್ಪತೆರೆಡ್ ರ ಯುವಕ , ಹದಿನಾರರ ಎಲೆಬಾಲೆ . ಈ ಬಾಲೆಯನ್ನು ಒಂದು ಅಜ್ಜಿ ಸಾಕಿಕೊಂಡು ಇರುತ್ತಾಳೆ ಇವಳು ಪ್ರತಿ ನಿತ್ಯ ಅಂಚಿ ಕಡ್ಡಿ ಕುಯ್ದು ಪರ್ಕೆ ಕಟ್ಟಿ ಊರ ಮೇಲೆ ಮಾರಿ ಜೀವನ ಸಾಗಿಸುತ್ತಾ ಈ ರೂಪ ಲಾವಣ್ಯ ಸೌಭಾಗ್ಯ ವತಿ ಕಿನ್ನರಿ ಯ ಪ್ರೀತಿ ಇಂದ ನೋಡಿಕೊಂಡಿರುತ್ತಲೆ.  ಈ ಹುಡುಗಿ ಗೆ ಮತ್ತು ಲಿಂಗ ನಿಗು ಪ್ರೀತಿ ಹುಟ್ಟು ಇಬ್ಬರು ಬಿಟ್ಟು ಇರದಷ್ಟು ಮನ ಮೆಚ್ಚಿ ಪ್ರೀತಿಸು ತ್ತಿರುತ್ತರೆ  ಆ ವಿಷಯ ಹುಡುಗಿಯ ಅಜ್ಜಿಗೆ ಗೊತ್ತಿರುವುದಿಲ್ಲ ಈ ಹುಡುಗಿಗೆ ಅಪ್ಪ ಅಮ್ಮ ಇಲ್ಲ ಈ ಹುಡುಗ ಅಂದ್ರೆ ಲಿಂಗನೆ ಅವಳಿಗೆ ಅಪ್ಪ ಅಮ್ಮನಿಗೂ ಅತಿ ಪ್ರೀತಿ ಕೊಟ್ಟಿರುತ್ತಾನೆ .. ಈಗ ಇವರು ಎಸ್ಟು ದಿವಸ ಹೀಗೆ ಇರೋದು ಮದ್ವೆ ಆಗೋಣ ಎಂದು ಮಾತಾಡುತ್ತಾರೆ ಆದ್ರೆ ಇಷ್ಟು ದಿವಸ ಸಾಕಿ ಸಲಹಿದ ಅಜ್ಜಿ ಬಿಟ್ಟು ಹೇಗೆ ಎಂದು ಈ ಹುಡುಗಿ ಲಿಂಗ ನ ಬಳಿ  "ಅಯ್ಯೋ !ಅಯ್ಯೋ! ನಾವು ಹೆಂಗ ಈಗ ಮಾಡೋದು ನಮ್ ಮುದುಕಿ ನಮ್ ಮದ್ವೇವ್ಯಗ ಒಪ್ಪಕಿಲ್ಲ ಎಂತ ಮಾಡೋದು !?" ಎಂದು ಮುಖ ಸಣ್ಣ ಮಾಡಿ  ಕೇಳುತ್ತಾಳೆ ..ಅದಕ್ಕ ಆ ಹುಡುಗ" ನಾ ಇಲ್ವೇ ಬಿಡು ಒಪ್ಪಿಸುವೇ ನೀ ಚಿಂತಿಸದೆ ಇರೆ" ಎಂದು ಒಂದು ದಿನ ಅಜ್ಜಿಯ ಮನೆಗೆ  ತಾಂಬೂಲ ಸಮೇತ ಬಂದು ಅಜ್ಜಿಯನ್ನು " ಅಜ್ಜಿ ನಾ ನಿಮ್ಮ ಮುದ್ದು ಮೊಮ್ಮಗಳನ್ನು ಪ್ರೀತಿಸು ತಿದ್ದೇನೆ ನಿಮ್ಮ ಮೊಮ್ಮಗಳನ್ನು ಕೊಟ್ಟು ಮದುವೆ ಮಾಡಿ ಎಂದು ತುಂಬಾ ವಿನಯ ಭಕ್ತಿ ಇಂದ ಕೇಳುತ್ತಾನೆ ಆದ್ರೆ ಅಜ್ಜಿಯ ಕರೆ ಕಲ್ಲು ಹೃದಯ ಕರಗದೆ ಹೋಯ್ತು ಇದಕ್ಕೆ ಕಾರಣ ಜಾತಿ ..! ಅಜ್ಜಿಯ ಯೋಚ್ನೆ ನಾವು ಕುಲ ಬಿಟ್ಟು ಕುಲಕ್ಕೆ ಹೇಗೆ ಸಂಭಂದ ಬೆಳೆಸುವುದು ಎಂದು ..! ಆದ್ರೆ ಆ ಮುಗ್ದ ಹುಡುಗಿಯರನ್ನು ಕಿರುಗಣ್ಣಿನಲ್ಲಿ ನೋಡಿ ಅವಳ ಮನದ ಭಾವನೆ ಕಣ್ಣಲ್ಲಿ ನೋಡಿ ಅಜ್ಜಿ ಕೊನೆಯಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾಳೆ ಎನ್ ಅಂದ್ರೆ ಪಂಥ ..!

ಆ ಪಂಥ ಎನ್ ಅಂತೀರಾ..!? ಕಣಿವೆಯ ಒಂದು ಕಡೆಯ ಕಡು ವಾದ , ಗಗನವೇ ಬಾಗಿ ಘಟ್ಟವನ್ನು ತಬ್ಬಿ ಕೊಂಡು ಇರುವಂತೆ  , ಗಾಳಿಯಲ್ಲಿ ತೇಲುವ ಹಾಗೆ ,ತಳದಲ್ಲಿ ನಿಂತರೆ ತಲೆ ಎತ್ತಿ ಮೇಲೆ ನೋಡುವ  ಗುಡ್ಡ  , ಅದುವೇ ಈಗ" ಅಜ್ಜಿ ಗುಡ್ಡ"..!  ಈ ಕಡುದಾಡ್ಡಬೆಟ್ಟವನ್ನು ಹತ್ತಬೇಕು ಎಂದು ಪಂಥ ..ಹೇಗೆ ಅಂದ್ರೆ.. 

”ಹಿಮ್ಮುಖವಾಗಿ ಹತ್ತಬೇಕು, ಹಿಮ್ಮುಖವಾಗಿ ಇಳಿಯ ಬೇಕೂ ..!” ಒಂದು ಹನಿ ನೀರು ಸಹ ಕುಡಿಯ ಬಾರದು , ತಿರುಗಿ ನೋಡಬಾರದು , ನಿಲ್ಲದೆ ಹತ್ತಬೇಕು , ಆಯಾಸ ಆದರೂ ಅದು ಮುಖದಲ್ಲಿ ಮಗುವಿನ ನಗು ಇರಬೇಕು .. ಅಂತ ಪಂಥ ಕಟ್ಟಿದಳು ಇವನು ವಿಧಿ ಇಲ್ಲದೆ ಪ್ರೀತಿಗಾಗಿ ಈ ಪಂಥಕ್ಕೆ ಒಪ್ಪಿ ಕೊಳ್ಳುತ್ತಾನೆ ..!

ಆಗ ಆ ಹುಡುಗಿ  ತುಂಬಾ ಅಳುತ್ತಾ ಆ ಸುಂದರ ಕೆಂಪು  ಕೆಂದಾವರೆ ಹೂ ಅಂತೆ  ಇರುವ ಕೆನ್ನೆ ಬಾಡುತ್ತದೆ . ಆಕೆಗೆ ಇದೆ ಗೂಡಲ್ಲಿ ಭಯ ಆತಂಕ ಉಂಟಾಗುತ್ತದೆ , ಅವನಿಗೆ ದೈರ್ಯ ಹೇಳುವಷ್ಟು ಕೂಡ ಶಕ್ತಿ ಇರುವುದಿಲ್ಲ, ಹತ್ತುವಾಗ ಆಯಾಸ ದಣಿವು ಉಂಟಾದಾಗ ತಂಪಾಗಿರಲಿ ಎಂದು ಕೇವಲ ಒಂದು ನಿಂಬೆ ಹಣ್ಣು ಕೊಟ್ಟು ಆಯಾಸ ಬಾಯಾರಿಕೆ  ಆದ್ರೆ ಈ ನಿಂಬೆ ಹೆಣ್ಣನ್ನು ಕಡಿದು ತಿನ್ನು ಎಂದು ಹೇಳಿ ಉದ್ದ ಜಡೆಯ ತಲೆ ಬಾಗಿ ಅವನ ಭುಜದ ಮೇಲೆ ತಲೆ ಇಟ್ಟು ಮಲಗಿ ದುಃಖಿ ಸಿ ಬಿಕ್ಕಿ ಬಿಕ್ಕಿ ಅಳುತ್ತ ತಬ್ಬಿಕೊಳ್ಳುತ್ತ ನೀ ಇಲ್ಲ ಅಂದ್ರೆ ನಾ ಇರುವುದಿಲ್ಲ ಎಂದು ಇನ್ನೂ ಗಟ್ಟಿ ಯಾಗಿ ಬಿಗಿದಪ್ಪಿ ಮುಂದೆ ನಿಂತು ಆ ರಾಮಪೂರದಮ್ಮ ಆ ಭೂತಪ್ಪ ಒಳ್ಳೇದು ಮಾಡ್ಲಿ ಆ ಬೆಟ್ಟದ ವ್ಯಾಗ್ರ ನಿನ್ನ ಬೆನ್ನ ಕಾಯ್ಲಿ ಎಂದು ನುಡಿದಳು .. ಮದ ಲಿಂಗ ಅವಳ ತಲೆ ನೇವರಿಸಿ ಕಣ್ಣನಿಯನ್ನ ಹೊರೆಸಿ ಗದ್ದ ಹಿಡಿದು ಎಲ್ಲಿ ಇಲ್ಲಿ ನೋಡು ನನ್ನ ನಾ ಈ ಪಂಥ ಗೆದ್ದು ಬರುವೇ ಎಂದು  ಹೇಳಿ ಅವಳಿಗೆ ದೈರ್ಯ ತುಂಬಿ ಪ್ರೀತಿ ನಂಬಿ  ಎಲ್ಲಿ ಸ್ವಲ್ಪ ನಗು ನಿನ್ನ ನಗು ನನ್ನ ಸ್ಫೂರ್ತಿ ಎಂದು ಹೇಳಿದ ಅವಳ ಮುಗುಳು ನಗೆ ಸಾವಿರ ಪಟ್ಟು ಗೆದ್ದ ಕುಷಿ ತಂದು ಕೊಟ್ಟಿತ್ತು ..! ಅವಳ ಮುದ್ದು ಮುಖದ ಸಣ್ಣ ಜೇನ ಅವಳಗಳಿಗೆ ಮುತ್ತು ಇಟ್ಟು ..! 
 
ಅಜ್ಜಿ ಮಾತಿಗೆ ಪಣತೊಟ್ಟು, ಸೊಂಟಕ್ಕೆ ಅವಳ ದಾವಣಿ ಬಿಗಿದು , ಆ  ವನ ದೇವಿಯ ಆಶೀರ್ವಾದ  ಪಡೆದು ಕಾಲಿಗೆ ಬಣ್ಣದ ಗೆಜ್ಜೆ ಕಟ್ಟಿ ಬಿಟ್ಟ ಆ ಅಜ್ಜಿಯ ಹಟ್ಟಿ ..!

ಎತ್ತರದ ಬೆಟ್ಟ  , ಅದರ  ಬುಡದಲ್ಲಿ ಮೂಡಣ ದಿಕ್ಕಿ ಗೆ ಮುಖ ಮಾಡಿ ಪಡು ಗೆ ಬೆನ್ನು ಮಾಡಿ ನೆತ್ತಿ ಸುಡುವ ಬಿಸಿಲಿನಲ್ಲಿ  ಆ ಕಲ್ಲುಗಳು ಸುಡುವಾಗ ಕಾಲು ಇಟ್ಟರೆ ಬೊಬ್ಬೆ ಬರುವ ಹಾಗೆ, ದೊಡ್ಡ  ದೊಡ್ಡ ಬಂಡೆಗಳು , ಬೇಲಿ ಪೊದೆಗಳು , ಗೋರಿ ಕಲ್ಲುಗಳು, ಕಾಡು ಪ್ರಾಣಿಗಳ ಸದ್ದು , ಹಕ್ಕಿ ಪಕ್ಷಿ ಗಳ ಕೂಗು , ಹಚ್ಚ ಹಸುರಿನಿಂದ ಕೂಡಿ ಬ್ಯಸಿಗೆಯಲ್ಲಿ ಹಾಸಿಗೆಯ ರೀತಿ ಹೊದ್ದುಕೊಂಡು ಇರುವ ಬಾದೆ ಹುಲ್ಲು , ಅದರಲ್ಲಿ  ವಿಷ ಜಂತು ಗಳು , ಕಾಲಿಗೆ ಸಿಗುವ ಮೊಲ ,ಉಸಿರು ಬಳ್ಳಿ , ಚುರುಕು ಕೊಡುವ ತುರುಚೆ ಸೊಪ್ಪು.  ಇದರ ಮಧ್ಯೆ ಮೈ ಕಿತ್ತು ನೆತ್ತರು ರುಚಿ ನೋಡಿದ ಮುಳ್ಳುಗಳು , ಘಟ್ಟದಲ್ಲಿ ಘಂ ಎಂದ ಜಾ ಲೀ ಪೂ , ಇದರ ಮಧ್ಯೆ ಕಷ್ಟ ಪಟ್ಟು ಬೆಟ್ಟದ ತುದಿಯನ್ನು ತಲುಪಿದ ಅಷ್ಟರಲ್ಲಿ ಅವನು ಬಾಡಿ ಬಳಲಿ ಬೆಂಡಾಗಿ ಹೋಗಿದ್ದ ಆದ್ರೆ ಪ್ರೀತಿಗಾಗಿ ಅವನು ಇದನ್ನು ಪೂರ್ಣ ಗೊಳಿಸ ಬೇಕಾಗಿತ್ತು .. ಆ ಹುಡುಗಿ ಕೊಟ್ಟ ನಿಂಬೆ ಹೆಣ್ಣನ್ನು ಅಲ್ಲಿ ಕಚ್ಚಿ ತಿಂದು ಬೀಜ ಉಗಿದ   .ಆ ಹಣ್ಣು ನೋಡಿ ಆ ಹುಡುಗಿಯನ್ನೇ ನೋಡಿದ ಅಷ್ಟು ಸಂತೋಷದಿಂದ ಅವನ ದೇಹದ ಆಯಾಸ ಮಾಯವಾಗಿ ಮನಸಿನಲ್ಲಿ ಪ್ರೀತಿಯ ಚಿಲುಮೆ ಚಿಮ್ಮಿತು ಜೋರಾಗಿ ಹೂ. ...! ಹಾ ...!ಹೂ..! ಹೆ ..!ಎಂದು  ಕೂಗಿ 
ಪ್ರೀತಿಯ ಪಂಥದಕ್ಕಿ ಗೆದ್ದೆ ಗೆಲ್ಲುವೆ ಎಂಬ ಅತಿ ಹೆಚ್ಚಿನ ಹುಚ್ಚು ಅವನ ಇಲ್ಲಿ ಸುಳ್ಳು ಆಗಿ ಬಿಡುತ್ತದೆ .

ಮೆಲ್ಲಮೆಲ್ಲನೆ  ಹಿಮ್ಮುಖವಾಗಿ ಇಳಿಯುತ್ತಾ ಇರುವಾಗ ಒಂದು ಕರಿ ಕಲ್ಲುಬಂಡೆ ಕಾಲಿಗೆ ತೊಡರಿ ಬಳ್ಳಿಗಳು ಸುತ್ತಿಕೊಂಡು ಅವನಿಗೆ ಏನು ಏನು ಕೂಡ ಹಿಡಿದುಕೊಳ್ಳಲು ಸಿಗದೆ ಬೇಲಿಗಳ ಮೇಲಾಸೆ ಕಲ್ಲು ಬಂಡೆಗಳ ಮೇಲೆ ಉರುಳಿ ಕರಕಲು ಕಲ್ಲುಗಳ ಮೇಲೆ ಜಾರಿ ಬೆಟ್ಟದ ಅರ್ಧಭಾಗದಿಂದ ಕೆಳ ಬಿದ್ದ . ಬೀಳುವಾಗ ಕಾಲಿಗೆ ಕಟ್ಟಿದ್ದ ಬಣ್ಣದ ಗೆಜ್ಜೆ ಸದ್ದು ನಿಂತಿತು ಕೆಳಗೆ ಆ ಹುಡುಗಿಯ ಪ್ರಾಣ ಪಕ್ಷಿ ಹಾರಿ ಹೋಯ್ತು ಇವನು ಜಾರಿ ಬೀಳುವಾಗ ಕೂಗಿದ ಸದ್ದಿಗೆ ಹಿಡಿ ಖಾನನವೆ  ನಡುಗಿ ಪ್ರಾಣಿ ಪಕ್ಷಿಗಳು ಕಂಗೆಟ್ಟು ಓಡಿದವು ಹುಲಿಗಳು ದಿಕ್ಕು ತಪ್ಪಿದವು ಜಿಂಕೆಗಳು ಜಾರಿದವ್ ಹಕ್ಕಿಗಳು ಹಾರಿ ಅಜ್ಜಿ ಗುಡ್ಡ ದ ತುದಿ ಯಲ್ಲಿ ಗೂಡು ಮಾಡಿದವು ಒಂದು ರೀತಿ ಒಂದು ಕ್ಷಣ ಈ ಕಣಿವೆ ಪ್ರಂತ್ಯವೆ ನಿಶಬ್ಧ ವಾಗಿ ಘಟ್ಟ ಘಮ ಘಮಿ ಸಿತು  ಆದ್ರೆ ಎರೆಡು ಜೋಡಿ ಹಕ್ಕಿಗಳ ಕಲರವ ನಿಂತು ಹೋಯ್ತು .. ಆ ಸ್ಥಳವೇ ಇಂದು ಮದಲಿಂಗನ್ ಕಣಿವೆ , ಮತ್ತು ಆ ಅಜ್ಜಿ ಮಾಡಿದ ಪಂಥದ ಘಟ್ಟವೆ ಅಜ್ಜಿಗೂಡ್ಡ .. 

ನೀವು ತುಮಕೂರು ನಿಂದಾ ಬರುವಾಗ ಅಪ್ಪಣ್ಣ ನಹಳ್ಳಿ ಯ ಮೇಲೆ ಆದು ಹೋದಾಗ ಅಥವಾ ಹಾಗಲ ವಾಡಿ ಮೇಲೆ ಚಿಕ್ಕನಾಯಕನ ಹಳ್ಳಿ ಗೆ ಹೋಗುವಾಗ ಕಾಣಸಿಗುವ ಈ ಪುಟ್ಟ ಘಟ್ಟ ಪ್ರದೇಶಗಳು ಕಣಿವೆ ಮತ್ತು ಅಜ್ಜಿ ಗುಡ್ಡ ಇಂದು ಇದು ಒಂದು ಎಲ್ಲೆ ಯಾಗಿ ಇದೆ ..!

ಇದೆ ಘಟ್ಟ ಸಾಲುಗಳು ಉತ್ತರಕ್ಕೆ ಮಾರಿ ಕಣಿವೆ  ,ಹುಳಿಯಾರು ,ಭೋರಣ ಕಣಿವೆ , ಹೊಸದುರ್ಗ ದ ವಾರೆಗೂ ಚಾಚಿದೆ ದಕ್ಷಿಣಕ್ಕೆ ಹಾತ್ತೆಲ್ ಬೆಟ್ಟ ಹಾಗೂ ದೂರೆ ಗುಡ್ಡ ,ಕೋರೆ , ರಾಮೇಶ್ವರ ವಜ್ರ ( ರಾಮ್ ದೇವೃ) 
ದೊಡ್ಡ ಗುಣಿ ಕಾಡು ( ಕರ್ನಾಟಕ ರಾಜ್ಯ ಅರಣ್ಯ ) ಮುಂದಕ್ಕೆ ರಾಮನಗರ ಮೈಸೂರು ತುರುವೇಕೆರೆ ಹಾಸನ ದ ವರೆಗೂ ಈ ಕಾಡು ಒಂದೇ ಸಮನೆ ಅಬ್ಬಿ ತನ್ನ ಸೊಬಗನ್ನು ಕಲ್ಪನೆಯ ಗೂಡಾಗಿ ನಿರ್ಮಿಸಿದೆ . ಪ್ರಕೃತಿ ಮಾತೆ  ನೆಲೆಸಿರುವ ಭವ್ಯ ತಾಣವಾಗಿದೆ . 

ಹಾಗೆ ಅಲ್ಲಿನ ದೊರೆ ಗುಡ್ಡಕ್ಕೆ ಬಂದರೆ ನನಗೆ ಗೊತ್ತಿಲ್ಲ  ಅದನ್ನು. ನಾನು ನೋಡಿ ಯು ಇಲ್ಲ ಅದೇ ಊರಿನ ಗೊಲ್ಲರ ಅಜ್ಜ ನಮ್ಮ ಹೊಲದಲ್ಲಿ ಇದ್ದರೂ ಅವರು ಕುರಿ ಕಾಯುವಾಗ ನೋಡಿದ್ದು ನಮ್ಮ ಮುಂದೆ ಹೇಳುತ್ತಿದ್ದರು ಎನ್ ಅಂದ್ರೆ "ದೊರೆ ಗುಡ್ಡ" ಇದು ಅಂದಿನ ಕಾಲದಲ್ಲಿ ಒಬ್ಬ ದೊರೆ ಅಳುತಿದ್ದ. ಆ ಗುಡ್ಡದಲ್ಲಿ ಈಗಲೂ ಅರಮನೆ ಇದೆ ಆದ್ರೆ ನೋಡಲು ಗುರುತು ಸಿಗುವುದಿಲ್ಲ ಅದರ ಒಳಗೆ ಯಾರು ಸಹ ಹೋಗಿಲ್ಲ.ಮತ್ತೆ ಅದರಲ್ಲಿ ನಿಧಿ ಇದೆ ಅಂತ ಅಲ್ಲಿಗೆ ಹೋದವರು ಮತ್ತೆ ಅವರ ಅಡ್ರಸ್ ಇಲ್ಲ ಅಂದ್ರು ನಾ ಅವರು ಹೇಳಿದಕ್ಕೆ ತಲೆ ತುಗುತಿದ್ದೆ . ಮುಂದೆ ಆ ಅರಮನೆ ಪಾಳು ಬಿದ್ದ ಮೇಲೆ ಯಾರೋ ಒಬ್ಬ ಅಗೋ ರಿ ಬಂದು ಅದ್ರಲ್ಲಿ ಇದ್ದ ಅಮಾವಾಸ್ಯೆ ಹುಣ್ಣಿಮೆ ರಾತ್ರಿ ಜೋರಾಗಿ ಕೂಗುತ್ತಿದ್ದ ಆ ಕೂಗು ಸುತ್ತ ಏಳು ಹಳ್ಳಿಗೂ ಕೇಳ್ತಾ ಇತ್ತು ಆ ಕೂಗನ್ನು ಕೇಳಿದ್ದು ಬಿಟ್ಟರೆ ಅವನನ್ನು ನೋಡಿದ ಒಬ್ಬ ಒಬ್ಬನೇ ಪುಣ್ಯಾತ್ಮ ಇಲ್ಲ ಎಂದರು ನನ್ನ ಎದೆಯ ಯಾವೊಂದು ಒಂದು ಕಡೆ ಭಯದ ವಾತಾವರಣ ಸೃಷ್ಟಿ ಮಾಡಿ ಬಿಟ್ಟರು ಆ ಅಜ್ಜ ಆದ್ರೆ ನಾ ಮುಂದೆ ಕುತೂಹಲ ಕೆರಳಿಸಿದ ಆ ಕಥೆಯ ಬಗ್ಗೆ ಕೇಳಿದೆ  ಅವರು ಅಲ್ಲಿನ ಬೇತಾಳ ದ ಕಥೆಯನ್ನು ಎತ್ತಿದರು .!  ಅದೇ ಗುಡ್ಡದಲ್ಲಿ ಒಬ್ಬ ದೊಡ್ಡ ಮಂತ್ರವಾದಿ ಇದ್ದನಂತೆ ಅವನಿಗೂ ಈ ಅಜ್ಜ ನಿಗೂ ತುಂಬಾ ಪರಿಚಯ ಆದ್ರೆ ಈಗ ಆ ಮಂತ್ರವಾದಿ ಇಲ್ಲ ಅನಿಸುತ್ತದೆ ಆ ಅಜ್ಜ ಮಾತ್ರ ನನ್ನ ಕಣ್ಣ ಮುಂದೆ ಇದ್ದರೆ ಅಷ್ಟೆ . ಆ ಮಂತ್ರವಾದಿ  ಅರಸೀಕೆರೆಯ ಮೂಲದವನು ಎಂದರು ನಿಜ ನೋ ಸುಳ್ಳೋ ಗೊತ್ತಿಲ್ಲ ! ಅವನು ಬೇತಾಳ ವಶೀಕರಣ ಮಾಡಿಕೊಳ್ಳಲು ಒಂದು ಹೆಣ್ಣು ನರಬಲಿ ಕೊಟ್ಟಿದ್ದ ಎಂದು ಬೇರೆ ಹೇಳಿ ನನ್ನ ಮನಸಿನಲ್ಲಿ ಇನ್ನೂ ಕುತೂಹಲ ಕೆರಳಿಸಿದ್ದ ಅಜ್ಜ ..ಆಗ ನಾನು ಕೇಳಿದೆ ನೀನು ಆ ಗುಹೆ ಆ ಅರಮನೆ ನೋಡಿದೀಯ ಅಂದೆ ಹ್ಮಂ ನೋಡಿದ್ದೇನೆ ಅಲ್ಲಿ ಎಲ್ಲ ಅದರ ಮುಂದೆ ಹೆ ನಾನು ಕುರಿ ಮೆಸಿದ್ದೇನೆ ಆದ್ರೂ .! ನಿಮಗೆ ಭಯ ಆಗ್ಲಿಲ್ವಾ ಅಂದ್ರೆ ನಾನು ದೆವ್ವ ಭೂತಗಳ ಜೊತೆ ಮಾತಾಡಿದ್ದೆ ಅಂದ್ರು ..! ಇನ್ನು ಇಂಟ್ರೆಸ್ಟ್ ಆಗಿ ಇದೆ ಅಂದು ಕೊಂಡು ನಾನು ಮುಂದೆ ಹೇಳು ಅಂದೆ ....! ಅವ್ರು .......

ಮತ್ತೆ ನಮ್ಮ ಕಥೆಗೆ ಬನ್ನಿ ಘಟ್ಟಗಳ ಪ್ರದೇಶದಲ್ಲಿ ಹತ್ತೆಲ್ ಬೆಟ್ಟವು ಒಂದು ಅದರ ಮುಂದೆ ಸಿಮೆಂಟ್ ಕೈಗಾರಿಕೆ ಇದೆ ಇದು ನಮ್ಮ ತುಮಕೂರು ಕೈಗಾರಿಕೆ ಇದಕ್ಕೆ ಈ ಬೆಟ್ಟಗಳ ಕಚ್ಚಾ ವಸ್ತುಗಳೇ ಸಾಗಿಸುತ್ತಾರೆ ಅದನ್ನು ತುಮಕೂರು ಗುಬ್ಬಿ ನಿಟ್ಟೂರು ಆದಮೇಲೆ ಕೊಡ್ಲಿ ಕ್ರಾಸ್ ಇಂದ ಮುಂದೆ  ಶಿವಮೊಗ್ಗ ಅಂತಾರಾಷ್ಟ್ರೀಯ ರಸ್ತೆ ನಲ್ಲಿ ನೋಡ ಬಹುದು ..ರೈಲು ಮಾರ್ಗದಲ್ಲಿ ಆ ಫ್ಯಾಕ್ಟರಿ ನ ನಿಟ್ಟೂರು ಇಂದ ಬಲಕ್ಕೆ ನೋಡಬಹುದು ..ನಿಲಿಗಿರಿ ತೋಪು..

ಹತ್ತೆಳ್ ಬೆಟ್ಟ ಇಲ್ಲಿ ನರಸಿಂಹ ಸ್ವಾಮಿ ದೇವಾಲಯ ವಿದೆ   ಪ್ರವಾಸಿ ತಾಣ . ಈ ಬೆಟ್ಟಕ್ಕೆ  ಈ ಹೆಸರು ಬರಲು ಕೂಡ ಒಂದು ನೈಜ್ಯ ಕಥೆ ಇದೆ  .. ! ಏನೂ ಅಂದ್ರೆ ಮದುವೆಗೆ ಹೋಗುವಾಗ ಈ ಬೆಟ್ಟವ  ಹತ್ತಬೇಕಾಗಿರುತ್ತೆ ಆ ಕಾಲದಲ್ಲಿ ಎತ್ತಿನ ಬಂಡಿ ಯಲ್ಲಿ ಹೋಗುತ್ತಿದ್ದರು ಇನ್ನೂ ಹೆಚ್ಚಿನ ಜನ ಅದರ ಹಿಂದೆ ಮುಂದೆ ಗುಂಪು ಗುಂಪಾಗಿ ನಡೆಯುತ್ತಿದ್ದರೂ  ಈ ರೀತಿ ಹೋಗುವಾಗ ಬೇಸರ ಕಳೆಯಲು ಕೆಲವು ಆಟಗಳು , ಪಂಥಗಳು, ಪದಗಳು ಹೀಗೆ ಆಡುತ್ತಿದ್ದರು ಹೀಗೆ ಇರುವಾಗ ಅತ್ತೆ ಮತ್ತು ಅಳಿಯ ಇಬ್ಬರು ಈ ಬೆಟ್ಟದಲ್ಲಿ ಪಂಥ ಕಟ್ಟಿ ಪದ ಹಾಡಿದ್ದರು ಎಂದು ನಾ ಕೇಳಿದ್ದೆ ಆ ಅತ್ತೆ ಅಳಿಯ ಹಾಡಿದ ಬೆಟ್ಟವನ್ನು( ಅತ್ತೇಳು ) ಹತ್ತೆಲ್ಯೂ ಎಂದು ಕರೆಯುತ್ತಾರೆ ..! 


ನಮ್ಮ ಈ ಪ್ರಕೃತಿಯು ಮಳೆಗಾಲದಲ್ಲೂ ಎಂತು ನೋಡಲು ಎರೆಡು ಕಣ್ಣುಗಳು ಸಾಲದು  ಒಮ್ಮೆ ನೀವು ಬೇಟಿ ಬೇಟಿ ಕೊಡಿ ಆದ್ರೆ ಸರ್ಕಾರದವರು ಇದನ್ನು ಉದ್ದರ ಮಾಡಿಲ್ಲ ಇದೆ ಬೇಸರದ ಸಂಗತಿ .!

ಈ ಘಟ್ಟದ ಕಾಡಿನಲ್ಲಿ ಗಂಧದ ಮರಗಳು ಅಧಿಕವಾಗಿ ಇವೆ ಮತ್ತು ಲೋಹ ಅಧಿರು ಅಧಿಕವಾಗಿ ಇದೆ ಮತ್ತು ಅಪರೂಪದ ಸಸ್ಯವರ್ಗ ಗಳು ಪ್ರಾಣಿಗಳು ಪಕ್ಷಿಗಳು ಇವೆ ಮಳೆ ಬರುವಾಗ ಇಲ್ಲಿನ ಹಳ್ಳ ಕೊಳ್ಳಗಳು ಮೈ ತುಂಬಿ ಹರಿಯುತ್ತವೆ ಆದ್ರೆ ಈಗ ಮನುಷ್ಯ ತನ್ನ ಸ್ವಾರ್ಥಕ್ಕೆ ಕದ್ದು ಬಳಕೆ ಮಾಡುತ್ತಿದ್ದಾನೆ ಅದನ್ನು ಕೇಳುವ ಅಧಿಕಾರಿಗಳೇ ಇಲ್ಲವಾಗಿದ್ದಾರೆ . ಈ ಹಳ್ಳಗಳು ತುಂಬಿ ಹರಿ ದಾಗ ಮೊದಲು ದೊಡ್ಡ ಗುಣಿ ಮತ್ತು ಸಿಂಗದ ಹಳ್ಳಿ ಕೆರೆ ಅದರ ಮುಂದೆ ಗಳಿಗೇಕೆರೆ ಮತ್ತು ಹಾಗಲ ವಾಡಿಯ ವರೆಗೂ ಮತ್ತು ಹರದಗೆರೆ ಯ ಕೆರೆ ಯ ವರೆಗೂ ನೀರು ತುಂಬಿ ತುಳುಕುತ್ತಿತ್ತು. ಇಂದು ಮೂರು ಕೆರೆಯಲ್ಲಿ ದನ ಕರು ಕುಡಿಯುವ ನೀರು ಇರುವುದು ಹೆಚ್ಚು .ಇನ್ನ ನಮ್ಮ ಹೊಸಕೆರೆ ಇಂದ ಮುಂದೆ ಬಂದಾಗ ಹಾಗಳವಾಡಿ ಬುಕ್ಕಾಪಟ್ಟಣ ರಸ್ತೆ ಯಲ್ಲಿ ಸಿಗುವ ಮಿಲ್ಲೇಕಲ್ಲು ತಿರುವು......

- ಅಂಜನ್ ಕುಮಾರ್ 
ಪುರ ಹಾಗಲವಾಡಿ
ಗುಬ್ಬಿ ತಾ 
ತುಮಕೂರು ಜಿಲ್ಲೆ.
ದೂ: 7483146697.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

22 ಕಾಮೆಂಟ್‌ಗಳು:

  1. "ಸಾಧನೆ"ಮಾಡಲು ಹೊರಟವ ಸೋಲುಗಳ ಲೆಕ್ಕ ಹಾಕಬಾರದು.🏃🏻👣👣 ಕಷ್ಟ ಪಡ್ತಿದ್ಯ ಇನ್ನೂ ಕಷ್ಟ ಪಡು ಮುಂದೆ ಬರ್ತೀಯ 🙏🏻❤️🤗

    ಪ್ರತ್ಯುತ್ತರಅಳಿಸಿ
  2. "ಸಾಧನೆ"ಮಾಡಲು ಹೊರಟವ ಸೋಲುಗಳ ಲೆಕ್ಕ ಹಾಕಬಾರದು.🏃🏻👣👣

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...