ತ್ರಿಪದಿ
ತೆರೆದೆವು ನಾವು ಬಾಗಿಲು
ಶತ್ರು ಒಳಗೆ ಬರಲು
ಕಾರಣ ಹೊಲಸು ಎಂಜಲು//
ಹಾಗೆ ನಕ್ಕು ನಂಜಲು
ಬಿಟ್ಟೇವು ಸ್ವಾಭಿಮಾನ ಸಾಯಲು
ಹೇಡಿ ವೈರಿ ಮೆರೆಯಲು//
ತ್ಯಾಗ ಬಲಿದಾನ ಸೊರಗಲು
ಕಾರಣ ಸ್ವಾರ್ಥ ಹೆಗಲ ಹೇರಲು
ಮರೆತೆವು ಗುಣ ಹಣ ಗಳಿಸಲು//
ಕಾಲ್ ಕಿತ್ತೆ ಧೈರ್ಯ ಕುಂದಲು
ಕೈ ಹಿಡಿದೆ ಶೌರ್ಯ ತುಳಿಯಲು
ಮನ ಸೋತೆ ಕಾರ್ಯ ಉಳಿಸಲು//
ಕೆಂಪಾದವು ಧರೆ ಮುಗಿಲು
ರಕ್ತದ ವಾಸನೆ ಹರಡಲು
ವೈರಿಯು ಜಯ ಸಾಧಿಸಲು//
ನ್ಯಾಯ ನೀತಿ ಧರ್ಮ ಕಳೆಯಲು
ಎಲ್ಲರು ಕೈಕಟ್ಟಿ ಸುಮ್ಮನೆ ಕುಳಿತಿರಲು
ಮಾಡುವರಾರು ಯೋಚನೆ ಪೀಳಿಗೆ ಬಾಳಲು//
✍️ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ, ಸಾ!ಭೈರಾಪೂರ. ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ