ಶುಕ್ರವಾರ, ಜುಲೈ 30, 2021

ಪುಸ್ತಕ ಪರಿಚಯ : ಮಾರ್ಗಾನ್ವೇಷಣೆ - ಪ್ರೊ. ನಿತ್ಯಾನಂದ ಬಿ. ಶೆಟ್ಟಿ.


ಪುಸ್ತಕ ಪರಿಚಯ 
ಪುಸ್ತಕದ ಹೆಸರು : ಮಾರ್ಗಾನ್ವೇಷಣೆ.
ಲೇಖಕರು: ಪ್ರೊ ನಿತ್ಯಾನಂದ ಬಿ ಶೆಟ್ಟಿ.
ಪುಸ್ತಕದ ಪ್ರಕಾರ: ಸಾಹಿತ್ಯ ಸಂಶೋಧನೆಯ ರೀತಿ - ನೀತಿಗಳ ಕುರಿತು.

(ಪುಸ್ತಕದ ಮುಖ ಪುಟ)

"ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ ಕೆಲಸದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಒಂದು ಮನೆ ಕಟ್ಟುವುದಿರಲಿ, ಸಸಿ ನೆಟ್ಟು ಪೋಷಿಸುವುದಿರಲಿ, ವಿಶ್ವವಿದ್ಯಾಲಯವೊಂದರ ವಿಭಾಗವನ್ನು ಬೆಳೆಸುವುದಿರಲಿ, ಅಥವಾ ಸಣ್ಣದೊಂದು ಬರವಣಿಗೆ ಮಾಡುವುದೇ ಇರಲಿ, ನಾವು ತೋರಿಸುವ ಕಾಳಜಿ ಅವುಗಳ ಶ್ರೇಯಸ್ಸಿಗೆ ಕಾರಣವಾಗಿರುತ್ತದೆ. ಪ್ರಸ್ತುತ ಪುಸ್ತಕ ಲೇಖಕರಿಗಿರುವ ಕಾಳಜಿ ಮತ್ತು ಪ್ರಾಮಾಣಿಕತೆಗಳಿಂದ ರೂಪುಗೊಂಡಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ, ಇಲ್ಲಿರುವ ಕಾಳಜಿಗಳು ಯಾವುವು?ಕನ್ನಡ, ಸಾಹಿತ್ಯ, ಸಂಶೋಧನೆ, ಶೈಕ್ಷಣಿಕ ಲೋಕ ಮತ್ತು ಕಲಿಕೆ ಇಲ್ಲಿ ಕಾಳಜಿಗೊಳಪಟ್ಟ ಅಂಶಗಳು. ಇವೆಲ್ಲವೂ ಒಂದಾಗುವುದು ಸಾಹಿತ್ಯ ಸಂಶೋಧನೆಯನ್ನು ಅನ್ವೇಷಣೆ ಮಾಡುವ ಹಂಬಲದಲ್ಲಿ."

- ಎನ್ ಎಸ್ ಗುಂಡೂರ (ಮಾರ್ಗಾನ್ವೇಷಣೆ ಪುಸ್ತಕದ ಮುನ್ನುಡಿಯಿಂದ)
ಸಂಶೋಧನೆ ಮಾಡುವುದು ಹೇಗೆ? ಯಾಕೆ? ಅದರಿಂದಾಗುವ ಉಪಯೋಗಗಳೇನು? ಅಂತಹ ಉಪಯೋಗಗಳಿಗ್ಯಾವುದಕ್ಕೂ ಆಸೆ ಆಮಿಷೆಗಳಿಲ್ಲದೆ ನಿರಂತರವಾಗಿ ಮತ್ತು ನಿರರ್ಗಳವಾಗಿ ಏಕೋಚಿತ್ತಭಾವದಿಂದ ನಮ್ಮ ಪೂರ್ವಸೂರಿಗಳು ನಡೆಸಿದ ಸಂಶೋಧನೆ ಎಂತಹ ಸಂಶೋಧನೆ? ಅವರನ್ನು ನಾವ್ಯಾಕಿಂದು ನೆನೆಯಬೇಕು? ಎಂಬ ಹಲವಾರು ಪ್ರಶ್ನೆಗಳೊಂದಿಗೆ ಮಾನವಿಕಗಳೆಲ್ಲದರ ಒಂದೊಂದೇ ಅಂಶವನ್ನು ತಮ್ಮ ಪುಸ್ತಕದಲ್ಲಿ ಎಳೆಯುತ್ತಾ, ಹಿಗ್ಗಿಸುತ್ತಾ ಹೊಸದೊಂದನ್ನು ಕಟ್ಟುತ್ತಾ, ಹೀಗೆ ಮತ್ತೆ ಮತ್ತೆ contradict ಮಾಡುತ್ತಾ, ಹಲವಾರು ಜಿಜ್ಞಾಸೆಗಳನ್ನು ಕುರಿತು ಬಹಳ ಪರಿಕಲ್ಪನಾತ್ಮಕವಾಗಿ ತಾತ್ವಿಕತೆಯನ್ನು ಅಡಿಗಡಿಗೂ ಮೈವೆತ್ತಂತೆ 'ನಿತ್ಯಾನಂದ ಬಿ. ಶೆಟ್ಟಿ'ಯವರ "ಮಾರ್ಗಾನ್ವೇಷಣೆ" ಎಂಬ ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದ ಪುಸ್ತಕ ಇನ್ನೇನು ಕೆಲವೇ ದಿನಗಳಲ್ಲಿ ಓದುಗ ಲೋಕಕ್ಕೆ ಕಾಲಿಡಲಿದೆ. 
ಶ್ರೀಧರ ಆರ್ ವಿ
ಈ ಅಭೂತಪೂರ್ವವಾದ ಕೆಲಸಕ್ಕೆ ಪ್ರೊ. ನಿತ್ಯಾನಂದ ಬಿ. ಶೆಟ್ಟಿಯವರಿಗೆ ಅಭಿನಂದನೆಗಳು. 🌹🍀🙏

(ಪುಸ್ತಕದ ಕುರಿತಾದ ಅಭಿಪ್ರಾಯ - ಶ್ರೀ ಶ್ರೀಧರ ಆರ್.ವಿ.)  


(ಪುಸ್ತಕದಿಂದ ಆಯ್ದ ಭಾಗ)


ಪ್ರತಿಗಳಿಗಾಗಿ: (ಪುಸ್ತಕ ದಿನಾಂಕ : 07.08.2021 ರ ನಂತರ ಓದುಗರ ಕೈ ಸೇರಲಿದೆ)

ಖರೀದಿಯ ಮತ್ತು  ಹಣ ಪಾವತಿಸುವ ವಿವರಗಳು 👇

350 ಮುಖಬೆಲೆಯ ಈ ಪುಸ್ತಕದ ಪ್ರಕಟಣಾಪೂರ್ವ ಮಾರಾಟ ಬೆಲೆ ರೂ. 325/- 

 ಬ್ಯಾಂಕ್ ಖಾತೆಯ  ವಿವರಗಳನ್ನು ಗಮನಿಸಿ ಗೂಗಲ್/ಫೋನ್ ಪೇ ಮೂಲಕ ಪಾವತಿ ಮಾಡಿ. ಅದರ Screen Shot ಅನ್ನು ಈ ಕೆಳಗಿನ ನಂಬರ್ ಗೆ ಕಳಿಸಿ. ತಮ್ಮ ಸ್ಪಷ್ಟ ವಿಳಾಸವನ್ನು  ದೂರವಾಣಿ ಸಂಖ್ಯೆಯೊಂದಿಗೆ ನಮೂದಿಸುವುದನ್ನು ಮರೆಯದಿರಿ.

ಪುಸ್ತಕದ ಅಂಚೆ ವೆಚ್ಚವನ್ನು ಪ್ರಕಾಶನ ಸಂಸ್ಥೆ ಭರಿಸುವುದು. 

*ಬೆಸುಗೆ ಪಬ್ಲಿಕೇಶನ್ಸ್*
ಬೆಸುಗೆ ಟ್ರಸ್ಟ್ (ರಿ.)ನ ಅಂಗಸಂಸ್ಥೆ
1. Account Name : Besuge Publications

2. Bank name : Bank of Maharashtra, Tumkuru

3. Acct. No. : 68001406947
4.IFSC. : MAHAB0001197

ಸಂಪರ್ಕಕ್ಕೆ : 8970162207.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...