ಮನದೊಳಗೆ ಮೌನ ಮಾತಾದಾಗ
ನನ್ನ ತನದಿ ಭಾವ ಒಂದು..
ಮಾತ ಮರೆತು,ಮೌನ ತಳೆದು..
ದಿಟ್ಟತನದಿ ಮಿಡಿಯುತಿಹುದು.
ಕಣ್ಣಲ್ಲೇನೋ ಸನ್ನೆ ಮಾಡಿ,
ಕೆನ್ನೆಮೇಲೆ ಗುಳಿಯ ತೋಡಿ
ನೂರು ಪಾಠಹೇಳುತಿಹುದು..
ಸಂಜೆಗಣ್ಣ ತಂಪ ಸೂಸಿ
ಮೋಹ ಮರೆತು, ದಾಹ ದಹಿಸಿಹುದು
ಭಕ್ತಿಭಾವ, ಅರಿವ ಜ್ಯೋತಿ ಮೂಡಿಸಿಹುದು.
ಬದುಕ ಹರುಷದಿ,ಪ್ರೀತಿ ತಳೆದು
ನಲ್ಲೆನೆದುರು ನಾಚಿ ನಿಂತು
ಪ್ರೀತಿ ಋಣವ ತೀರಿಸಿಹುದು..
- ಚೈತ್ರ ಚಿಕ್ಕಿ.ಟಿ.
ಶಿಕ್ಷಕಿ. ಹೊಲೆರಹಳ್ಳಿ
ದೇವನಹಳ್ಳಿ ತಾಲ್ಲೂಕು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ