ಮುಂಗಾರು ಮಳೆಯ ಸಡಗರ
ಅಹಾ ಸುರಿಮಳೆ ಹರುಷ ತಂದಿದೆ
ಮುಗಿಲು ಕುಣಿದಿದೆ ಮನವು ನುಡಿದಿದೆ
ಏನು ನಿನ್ನ ಮಾಟ ಒಳಗೆಲ್ಲ ಕುಣಿದಾಟ
ಮೋಡ ಮುಕಿದೆ ಹನಿಯು ನಗುತ್ತಿದೆ
ಎಷ್ಟೋ ವರುಷ ಕಾಣದಾದ ಮುಂಗಾರುಮಳೆ
ಹಾರಿ ಬಂದಿದೆ ತೂರಿ ಬಂದಿದೆ ಹರುಷ ನೀಡಿದೆ
ರೈತನಂತು ನಗುತ ಹೊಲದಲ್ಲಿಂದು ನೆಗೆತ
ಫಸಲು ಪೈರಿಗೆ ನಗುವ ತುಂಬಿತು ಹಕ್ಕಿ ಹಾರಿತು
ಹರಿವ ನೀರು ಜುಳುಜುಳು ಕೆರೆಗೆ ಬಂದಿತು
ಬತ್ತಿ ಹೋದ ಕೆರೆಗಳೆಲ್ಲ ಉಕ್ಕಿ ಹರಿಯಿತು
ಹರಿವ ನೀರ ಎದುರಿನಲ್ಲಿ ಮೀನು ನುಗ್ಗಿತ್ತು
ಮೀನ ಈಡಿಗನ ಮನದಲ್ಲಿ ಸಂತಸ ಬೀರಿತು
ದನಕರುಗಳಿಗೆ ಹಸಿರುಲ್ಲು ಮೇಲೆ ಬಂದಿತು
ಚಿಗುರು ಮೂಡಿತು ಹೃದಯ ಅರಳಿತು
ಹೊಸತು ನೋಟ ಅವಳ ಕಣ್ಣ ಗಿರಿಗೆ ಜಾರಿತು
ರೆಕ್ಕೆ ಬಿಚ್ಚಿ ಹಾರುತ್ತಿತ್ತು ಹಕ್ಕಿ ಹರುಷ ಕಂಡಿತು
ಮೂಡಣದಿ ರವಿಯ ಕಿರರಣ ಸೊಗಸು ಮೂಡಿತು
ಜಲಪಾತದ ಹೊಳಪಿನಲ್ಲಿ ಹಾಲು ಹರಿಯಿತು
ಹೂವು ಅರಳಿ ಮಕರಂದಕೆ ದುಂಬಿ ಕರೆಯಿತು
ವನ ಸಿರಿ ಸ್ವರ್ಗದಲ್ಲಿ ಪ್ರಾಣಿ ಪಕ್ಷಿಗಳು ಕುಣಿಯಿತು
ಇದೆ ಹರುಷವು ವರುಷ ಬರಲಿ
ರೈತನ ಮನಸ್ಸಿಗೆ ಸಂತಸವ ಮೂಡಲಿ
ಕೇಕೆ ಹಾಕಿ ಹೊಲವ ಉಳುಮೆ ಮಾಡಲಿ
ನಾಡಿಗೆಲ್ಲ ದವಸ ಧಾನ್ಯ ಹೊನ್ನು ಚೆಲ್ಲಲಿ
ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ