ಶುಕ್ರವಾರ, ಜುಲೈ 30, 2021

ಭಾರತದ ವಿಜ್ಞಾನಿಗಳಿಗೆ ಸವಾಲಾಗಿತ್ತೆ ಕೊರೋನ ವೈರಸ್? (ಲೇಖನ) - ಜಯಶ್ರೀ. ಆರ್. ಉಪನ್ಯಾಸಕರು, ಕೊಳ್ಳೇಗಾಲ.

ಭಾರತದ ವಿಜ್ಞಾನಿಗಳಿಗೆ ಸವಾಲಾಗಿತ್ತೆ ಕೊರೋನ ವೈರಸ್?

ಸಹಸ್ರಾರು ವರ್ಷಗಳ ಮೊದಲೇ ಜಗತ್ತಿಗೆ ಅದ್ಭುತ ವಿಜ್ಞಾನವನ್ನು ಭಾರತ ಬೋಧಿಸಿತ್ತು .ಸನಾತನ ಧರ್ಮಗಳು ನಮ್ಮ ದೇಶದಲ್ಲಿ ವೈಜ್ಞಾನಿಕವಾಗಿ ಬೆಳೆದು ಬಂದವು. ಯಾವುದೇ ರೋಗಗಳು ಜನ್ಮ ತಾಳಿದರೂ ವಿಜ್ಞಾನಕ್ಕೆ ಸವಾಲಾಗೆ ಇರುತ್ತದೆ.ಇಷ್ಟಕ್ಕೂ ನಮ್ಮ ದೇಶದಲ್ಲಿ ನಾವು ಕಂಡಂತಹ ರೋಗಗಳು ಬೇರೆ ದೇಶಗಳಿಂದ ಬಂದಂತಹವೇ ಆಗಿವೆ‌. ಕಾರಣ ಅಲ್ಲಿನ ಜೀವನವಶೈಲಿಯೇ ಆಗಿದೆ. ಇನ್ನೂ ಹೆಚ್ಚು ಪ್ರಜ್ಞಾವಂತರಾಗಿ ಆಲೋಚಿಸಿದರೆ, ಇಂದಿನ ಕೊರೋನ ವೈರಸ್ ಜೈವಿಕ ಅಸ್ತ್ರ ಎನ್ನಬಹುದು.ಅಭಿವೃದ್ಧಿ ರಾಷ್ಟ್ರ ಗಳ ಅಧಃಪತನಕ್ಕೆ ರೂಪಿಸಿರುವ ಸಂಚು ಆಗಿರಬಹುದು.ಬಹು ರಾಷ್ಟ್ರ ಗಳ ವಿಜ್ಞಾನಿಗಳಿಗೆ ಸವಾಲಾಗಿದ್ದ ಕೊರೋನ ವೈರಸ್ಗೆ ಬ್ರಹ್ಮಾಸ್ತ್ರ ಭಾರತದಲ್ಲಿ ಸಿದ್ದವಾಗೆಬಿಟ್ಟಿತು. ಕೊರೋನ ಜಾಗತಿಕ ಮಾರಕ ಕಾಯಿಲೆಯಾಗಿ ಲಕ್ಷಾಂತರ ಜನರ ಮರಣ ಮೃದಂಗ ಬಾರಿಸಿದ್ದು, ಇನ್ನು  ದಶಕ ಕಳೆದರು ಮುಕ್ತಿ ದೊರೆಯದೆಂದು ಹಲವಾರು ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಕಾಯಿಲೆಗಳು ಹೊಸತೇನು ಅಲ್ಲ. ಒಂದಲ್ಲ ಒಂದು ಕಾಯಿಲೆ ಸೃಷ್ಟಿಯಾಗುವುದು ಅವುಗಳಿಂದ ಉಂಟಾಗಬಹುದಾದ ಮೃತ್ಯುವನ್ನು ತಡೆಗಟ್ಟಲು ಪ್ರತಿ ದೇಶದಲ್ಲೂ ವಿಜ್ಞಾನಿಗಳು ಶ್ರಮವಹಿಸುತ್ತಲೆ ಇದ್ದಾರೆ. ಸಿಡುಬು, ಪೋಲಿಯೋ, ಧನುರ್ವಾಯು ಇಂತಹ ಮಾರಕ ರೋಗಗಳು ವಿಜ್ಞಾನಿಗಳ ಸತತ ಪ್ರಯತ್ನ, ಲಸಿಕೆಗಳ ಗುಣಮಟ್ಟದಿಂದ ಇಂದು ಈ ಕಾಯಿಲೆಗಳಲ್ಲಿ ಕೆಲವು ಶೂನ್ಯಕ್ಕೆ ಇಳಿದಿದೆ. ಇನ್ನೂ ಕೆಲವು ತೀರಾ ಕಡಿಮೆ ಪ್ರಮಾಣದಲ್ಲಿ ಬಾಧಿಸುತ್ತಿವೆ,ಪ್ರತಿ ಬಾರಿಯೂ ರೋಗಗಳು ಸಾಂಕ್ರಾಮಿಕ ಲಕ್ಷಣಗಳಿಂದ ಮನುಕುಲಕ್ಕೆ ಕಂಟಕವಾದಾಗ ಲಸಿಕೆ ಕಂಡು ಹಿಡಿಯುವುದು ಜಾಗತಿಕ ಆರೋಗ್ಯದ  ವಿಜಯವಾಗಿದೆ. ಲಸಿಕೆ ಯಿಂದ ರೋಗ ಸಂಪೂರ್ಣ ನಾಶವಾಗುವುದಿಲ್ಲ ರೋಗ ನಿರೋಧಕತೆ ಹೆಚ್ಚಿಸಿ ಉಲ್ಬಣವಾಗುವುದನ್ನು ತಪ್ಪಿಸುತ್ತದೆ.ಇಂತಹ ರೋಗ-ರುಜಿನಗಳು ತಾಂಡವವಾಡಲು ಕಾರಣ ಜಾಗತೀಕರಣ.ಬೇರೆ ದೇಶಗಳಿಂದ ಸೋಂಕು ನಮ್ಮ ದೇಶದೊಳಗೆ ನುಸುಳಲು  ಈ ಜಾಗತೀಕರಣದ ಸೋಗೆ ಮಾರ್ಗವಾಗಿದೆ.ಇಂದು ಮಾನವನ ಬಹುದೊಡ್ಡ ಬೇಡಿಕೆ ರೋಗಗಳ ನಿರ್ಮೂಲನೆ  ಈ  ಆಂದೋಲನಕ್ಕೆ ಲಸಿಕೆಯೆ ನಾಂದಿಯಾಗಿದೆ,ರೋಗಗಳ ವಿರುದ್ಧ ರಕ್ಷಣೆ ಪಡೆಯಲು ಲಸಿಕೆಗಳನ್ನು ಉಪಯೋಗಿಸಬೇಕು ಇದು ಮಾನವ ಕುಲದ ಆರೋಗ್ಯದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಇದರ ಕುರಿತು ಜಾಗೃತಿ ಮೂಡಿಸುತ್ತಲೇ ಇವೆ. ಆದರೂ ಎಷ್ಟೋ ವಿದ್ಯಾವಂತ ನಾಗರೀಕರು ಕೊರೋನ ಲಸಿಕೆ ಪಡೆಯಲು ನಿರಾಕರಿಸಿದರು. ಕೋಟ್ಯಂತರ ಜೀವ ರಕ್ಷಕಕ್ಕೆ ಬೆಂಬಲ ನೀಡದೇ ಮೂರ್ಖತನ ಪ್ರದರ್ಶಿಸಿದ್ದಾರೆ. ಲಸಿಕೆಗಳು ರಕ್ತದಲ್ಲಿ ಆಂಟಿಬಾಡಿ ತಯಾರಿಕೆಗೆ ಪ್ರಚೋದನೆ ನೀಡುತ್ತವೆ. ವ್ಯಕ್ತಿ ರೋಗದಿಂದ ನರಳದೆ ಇರುವಂತೆ ಮಾಡುತ್ತದೆ. ಲಸಿಕೆಯಿಂದ ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ತೊಂದರೆಯಾಗಬಹುದು, ಆದರೆ ಆ ಲಕ್ಷಣಗಳು ಲಸಿಕೆಯ ಕಾರ್ಯವೈಖರಿಯನ್ನು ಸೂಚಿಸುತ್ತದೆ. ಕೃತಕ ರೋಗ ಪ್ರತಿಬಂಧಕ ಶಕ್ತಿಯು ಹೆಚ್ಚುತ್ತದೆ, ಲಸಿಕೆ ತಯಾರಾಗುವ ಮೊದಲೇ ವಿಜ್ಞಾನಿಗಳು ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡು ಹಿಡಿಯಬೇಕೋ  ಆ ರೋಗಾಣುವನ್ನು ಅಧ್ಯಯನಕ್ಕೆ ಒಳಪಡಿಸುತ್ತಾರೆ. ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಕೊಂದು ಇಲ್ಲವೆ ದುರ್ಬಲೀಕರಿಸಿ ಲಸಿಕೆ ತಯಾರಿಸುತ್ತಾರೆ.ಪ್ರಯೋಗವನ್ನು ಪ್ರಾಣಿಗಳಿಗೆ ಮಾಡಿ ನಿಜವಾದ ರೋಗಾಣುವಿಗೆ ಒಡ್ಡಿ ಅದಕ್ಕೆ ರೋಗ ನಿರೋಧಕ ಶಕ್ತಿ ಬಂದಿದೆಯೇ ಎಂದು ಪರಿಶೀಲಿಸಿ ನಂತರ ಮಾನವರ ಮೇಲೆ ಪ್ರಯೋಗಿಸುತ್ತಾರೆ. ಇದರರ್ಥ ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಕೊಂದು,ಇಲ್ಲವೇ ದುರ್ಬಲೀಕರಿಸಿ ತಯಾರಿಸುವ ಔಷಧಿಯೇ ಲಸಿಕೆ. ಇದು ದೇಹದೊಳಗೆ 'ಪ್ರತಿ ಕಾಯ'ಸೃಷ್ಟಿಸಿ ರಕ್ಷಣೆ ಒದಗಿಸುತ್ತದೆ. ಪ್ರಾಣಿ ಗಳ ಮೇಲಿನ ಪ್ರಯೋಗ ಸಫಲ ವಾದರೆ ಮಾತ್ರ ಆರೋಗ್ಯವಂತ ವ್ಯಕ್ತಿ ಗಳ ಮೇಲೆ ಸಮ್ಮತಿ ಪಡೆದು ಲಸಿಕೆ ಪರೀಕ್ಷಿಸುವುದು. ಇದು ಕನಿಷ್ಠ ಮೂರು ಹಂತಗಳ ಬಳಿಕ ಸಾರ್ವಜನಿಕವಾಗಿ ಲಭ್ಯವಾಗುತ್ತದೆ. 
ಲಸಿಕೆಯ ಜನಕ 'ಎಡ್ವರ್ಡ್ ಜೆನ್ನರ್' ಈ ಮಹಾನುಭಾವ ಹುಟ್ಟು ಹಾಕಿದ ಪ್ರಯೋಗವೇ ಲಸಿಕೆ. ಇದರಿಂದ ಜಗತ್ತಿಗೆ ಜೀವಸಂಕುಲ ಉಳಿಸಲು ನೆರವಾಗಿದೆ. ಕೊರೋನ ಲಸಿಕೆ ಯನ್ನು ತುರ್ತಾಗಿ ಬಳಸಿರಬಹುದು, ಆದರೆ ಕಾರ್ಯಕ್ಷಮತೆ ಪರೀಕ್ಷಿಸಲಾಗಿದೆ.ಮಾನವ ಸಂಪನ್ಮೂಲ ದೇಶದ ಅತ್ಯಂತ ದೊಡ್ಡ ಸಂಪತ್ತು, ಅದನ್ನು ಉಳಿಸಿಕೊಳ್ಳಲು ಪ್ರತಿ ದೇಶವು ಪ್ರಯತ್ನಿಸುತ್ತಿವೆ, ಈ ದೇಶ ನಮಗೆ ಸಮಯೋಚಿತವಾಗಿ ಅತ್ಯದ್ಭುತ ಕೊಡುಗೆಯಾಗಿ ಲಸಿಕೆಯನ್ನು  ನೀಡಿದೆ.ಸುರಕ್ಷಿತ ಮಾರ್ಗವನ್ನು ಪಾಲಿಸಲಾಗದ ನಾವು ರೋಗಗಳು ಸೃಷ್ಟಿಯಾಗದಂತೆ  ಬದುಕಲು ಸಾಧ್ಯವಿಲ್ಲ, ಆದರೆ ಬದುಕಿಗಾಗಿ ಲಸಿಕೆ ಪಡೆದು ಸುರಕ್ಷಿತೆಯಿಂದ ಜೀವಿಸೋಣ,ದೇಶವನ್ನು ಬೆಂಬಲಿಸೋಣ, ವಿಜ್ಞಾನಿಗಳನ್ನು ಗೌರವಿಸೋಣ.ಲಸಿಕೆ ಎಲ್ಲರಿಗೂ ಆದಷ್ಟು ಬೇಗ ದೊರೆಯುತ್ತದೆ, ಆಗ ನಮ್ಮ ದೇಶವನ್ನು 'ಕೊರೊನಮುಕ್ತ' ದೇಶವನ್ನಾಗಿ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ ಕೂಡ ಲಸಿಕೆಯ ಮಹತ್ವವನ್ನು ತಾನು ತಿಳಿದು, ಇತರರಿಗೂ ತಿಳಿಸಬೇಕು.
                
 -   ಜಯಶ್ರೀ. ಆರ್.                             
   ಉಪನ್ಯಾಸಕರು
   ಜೆ.ಎಸ್.ಎಸ್ ನರ್ಸಿಂಗ್ ಕಾಲೇಜು, ಕೊಳ್ಳೇಗಾಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...