ಶುಕ್ರವಾರ, ಜುಲೈ 30, 2021

ಗೆಳೆತನ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಗೆಳೆತನ

ನಿನ್ನ ಏಳ್ಗೆಯ ಕಂಡು ಹೆಮ್ಮೆ ಪಡದಿರಲಾರೆ
ಯಾವ ಜನುಮದ ಬಂಧು ನನ್ನ ಗೆಳೆಯನೆ
ಲೆಕ್ಕವಿಲ್ಲದ ಗಳಿಗೆ ಕೂಡಿ ನಡೆದೆವು ಜೊತೆಗೆ
ಮನವನರಳಿಸೊ ಬೆರಗು ನೀನೆ ಆಗಿಹೆ

ಕುಗ್ಗಿ ಬಾಡಿದ ವೇಳೆ ನೊಂದು ಬಾಗಿದ ಕ್ಷಣದಿ
ಸೋತು ನಿಂತರುವಾಗ ನೆರವು ನೀಡುವೆ
ಎನ್ನ ದುಃಖಕೆ ಮರುಗಿ  ನಗೆಯ ಉಕ್ಕಿಸುವವನೆ
ಯಾವ ಜನುಮದ ಪುಣ್ಯ ನಿನ್ನ ಪರಿಚಯ 

ಅಮೃತಕು ಮಿಗಿಲಾದ ಸವಿಯ ನೀಡುವೆ ಗೆಳೆಯ
ಭೂಮಿ ತೂಕದ ಸಹನೆ ನಮ್ಮೊಳಡಗಿದೆ
ಎಲ್ಲೆ ಮೀರಿದ ಸ್ನೇಹ ಬಂಧ ಬೆಸೆದಿದೆ ನಮ್ಮ
ಗೆಳೆತನಕು ಮಿಗಿಲೊಂದು ಜಗದಿ ಏನಿದೆ?

ವಂಚನೆಯ ತೊರೆದೇವು ಸ್ವಾರ್ಥವನೆ ಬಿಟ್ಟು
ಮೇಲು ಕೀಳನು ಮೆಟ್ಟಿ ಅಹಂಮಿಕೆಯ ಮರತೇವು
ಸಂಕೋಚ ಇರದೇನೆ  ಭಾವ ಬೆಳಗುತಲಿಹುದು
ತಾಯಿಗಿಂತಲೂ ಮಿಗಿಲು ಎಮ್ಮ ಸ್ನೇಹವು

          -   ಶ್ರೀ ತುಳಸಿದಾಸ ಬಿ ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

ಜ್ಞಾನದ ಬೆಳಕನ್ನು ಹಚ್ಚುವ ಸಮಸ್ತ ಉಪಾಧ್ಯಾಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು . ಸಾಮಾನ್ಯವಾಗಿ ವಿಶ್ವದಾದ್ಯಂತ ಹಲವಾರು ದಿನಾಚರಣೆಗಳನ್ನು ನಾವು ಆಚರಿಸುತ್ತೇವೆ .ಪ...