ಸೋಮವಾರ, ಆಗಸ್ಟ್ 16, 2021

ಸ್ವಾತಂತ್ರ್ಯೋತ್ಸವ (ಕವಿತೆ) - ಶ್ರೀ ಸಂಗಮೇಶ ಎನ್ ಜವಾದಿ.


ಸ್ವಾತಂತ್ರ್ಯೋತ್ಸವ.

ಸ್ವಾತಂತ್ರ್ಯೋತ್ಸವ ಬಂದಿತು, ಎಲ್ಲರೂ ಒಂದಾಗಿ ಬನ್ನಿ.
ತಿರಂಗ ಭಾವುಟವು ಹಾರಿಸಿ, ಎರಿಸಿ  ಬಾನಂಗಳಕ್ಕೆ, ಜೈ ಘೋಷ ಮೊಳಗಿಸೋಣ ಬನ್ನಿ.
ದೇಶಭಕ್ತ ಹೋರಾಟಗಾರರಿಂದ ನಮಗೆಲ್ಲರಿಗೂ ವಿಮುಕ್ತಿ ದೊರೆಯಿತು ಅಣ್ಣಗಳಿರಾ ಬನ್ನಿ.
ಸುವರ್ಣ ದಿನವಿದು ತ್ಯಾಗ- ಬಲಿದಾನಗೈದ ದೇಶಪ್ರೇಮಿಗಳನ್ನು ಸ್ಮರಿಸೋಣ ಬನ್ನಿ.||

ಭೇದಭಾವಗಳನ್ನು ಬದಿಗೊತ್ತಿ ಸ್ವಚ್ಛಂದ ಮನಸ್ಸಿನಿಂದ ಒಗ್ಗಟ್ಟಾಗಿ ಬನ್ನಿ.
ಗಡಿಯಲ್ಲಿ ನಿಂತು ನಮಗಾಗಿ ಹೋರಾಡಿದ ವೀರಯೋಧರನ್ನು ನೆನೆಯೋಣ ಬನ್ನಿ.
ಅನ್ನವ ಹಾಕುವ ಭಾರತದ ಬೆನ್ನೆಲುಬಾದ ಅನ್ನದಾತ ರೈತರನ್ನು ಗೌರವಿಸೋಣ ಬನ್ನಿ.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಮಸ್ತ ದೇಶಭಕ್ತರನ್ನು ವಂದಿಸೋಣ ಬನ್ನಿ.||

ದೇಶದ ಕೀರ್ತಿಪತಾಕೆ ವಿಶ್ವದ ಮೂಲೆ ಮೂಲೆಗೂ ಹರಡುವಂತೆ ಕಾಯಕ ಮಾಡೋಣ ಬನ್ನಿ.
ಸಂತರ ದಾಸರ ಶರಣರ ನೆಲೆಸಿದ ಈ ನಾಡಿಗೆ ಧನ್ಯತೆ ಹೇಳೋಣ ಬನ್ನಿ.
ಅಭಿವೃದ್ಧಿಗೆ ಮುನ್ನುಡಿ ಬರೆದು, ಭವ್ಯ ಭಾರತ ನಿರ್ಮಾಣಕ್ಕೆ ಕೈ ಜೋಡಿಸಲು ಮುಂದೆ ಬನ್ನಿ.
ನವಸಮಾಜ ಆದರ್ಶ ಸಮಾಜ ಸುಂದರ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥಿಯಾಗಿ ಮುಂದೆ ಬನ್ನಿ.||

ಶಿಕ್ಷಣ ಆರೋಗ್ಯ ಪರಿಸರ ಕ್ಷೇತ್ರಗಳಿಗೆ ಆದ್ಯತೆ ನೀಡೋಣ ಬನ್ನಿ. 
ಶಾಂತಿ ಸಹಬಾಳ್ವೆ ಸ್ನೇಹ ಸಂತೋಷದಿಂದ ಎಲ್ಲರೂ ಒಗ್ಗಟ್ಟಾಗಿ ಬಾಳೋಣ ಬನ್ನಿ.
ದ್ವೇಷ ಮದ ಮತ್ಸರ ಗಳಿಗೆ ತಿಲಾಂಜಲಿ ನೀಡಿ, ಭಾವೈಕ್ಯತೆ ಸಂದೇಶ ಸಾರೋಣ ಬನ್ನಿ.
ಎಲ್ಲರೂ ಒಂದಾಗಿ ಸಮಾನತೆ, ಸಾರ್ವಭೌಮತ್ವವನ್ನು ಎತ್ತಿ ಹಿಡಿಯೋಣ ಬನ್ನಿ ಓ ಬಂಧುಗಳೇ.||

-  ಸಂಗಮೇಶ ಎನ್ ಜವಾದಿ.
ಬರಹಗಾರ,
ಬೀದರ ಜಿಲ್ಲೆ.- 9663809340.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...