ಹೇ ಶ್ಯಾಮಲೆ
ಹೇ ಗಿರಿದರಕನ್ಯೆ ಸಸ್ಯಶಾಲ್ಮಲೆಯೆ
ಭೂ ಪೂಜಿಪೆ ಸೌರಾಷ್ಟ್ರಸುಂದರಿಯೇ
ಗಿರಿಕಂದರೆ ನಿತ್ಯನೂತನಮಹಿಯೆ
ನೀ ಸೃಷ್ಟಿಸಿರುವೆ ಈ ಇಳೆಯೊಳು
ನಿರಾಕಾರ ಭೋರ್ಗರೆಯುವ ನದಿತೊರೆಗಳಿರೆ
ಖಗ ಮೃಗ ನಭಚರ ಪಂಚತರುಗಳಿರೆ
ಬಾನಹಂದರದಲ್ಲಿ ತಿಂಗಳ ನೇಸರೂ ತಂಗಿ
ಧರೆಯ ವಿಸ್ತೃತ ನಾಕ ಸೃಷ್ಟಿಗೊಂಡಿದೆ.
ಈ ನಿನ್ನ ಕಲ್ಪನಾಹರ್ಮ್ಯಾಂಗಣಯೊಳು
ನಿನ್ನ ಮಲೆಯಸುಧೆಯುಂಡ ಮಕ್ಕಳು
ನೀ ಉಣಿಸಿದ ಮೃಷ್ಟಾನ್ನ ಪಂಚಾಮೃತವ ಮರೆತು
ದುರಾಸೆಯ ಜಾಡಿಡಿದ ಹಸುಬನ ಹಕ್ಕಿಗಳಾಗಿ
ಪಂಚಕ್ಲೇಶಗಳ ಸಾವಷ್ಚಂಭದ ಹಂದಿಗಳು
ನಿನ್ನೊಡಲಿಗೆ ಕೊಡಲಿನಾಟಿ ಕಡಲ ಕಡೆದಿಹರು
ಜಾತಿ ಧರ್ಮ ವರ್ಣಭೇದದಿಂದ ಹುಟ್ಟುದಾರಿದ್ರ್ಯಗೊಂ ಡಿತು
ನಿನ್ನೊಳಲು ನಿನ್ನ ಜೀವಾತ್ಮವು ಅಧಃಪತನಗೊಂಡಿದೆ.
ಈ ಲೋಕವೇ ನಿನ್ನಮಯೆ
ನೀ ಸಿರಿಕಂಡ ಸುರಭೂಜ ಕರುಣಾಮಯಿ
ಆಕ್ರೋಶಗೊಂಡು ಸೃಷ್ಟಿಯನ್ನೇ ಅಂಧಕಾರವನ್ನಾಗಿಸಿ
ನಿನ್ನ ಹಕ್ಕಿಗಳು ಸುರಗೋಪಗಳಾಗಾಗುವ ಮುನ್ನವೆ
ಹುತವಹ ಸುಂಟರಗಾಳಿಯಾಗಿ ಸುಡದಿರು
ನಿನ್ನ ನೈಜನಾಕ ನಶಿಸದಂತೆ ವಿದಗ್ಧವೃತ್ತಿಂದ
ಸಕಲಜೀವರಾಶಿಯ ನಿಸ್ವಾರ್ಥಮನದಿಂದ ಕ್ಷಮಿಸಿ
ಪ್ರೀತಿ ಸತ್ಯದ ಭೂಪಟದ
ವೈಜಯಂತಿಯನ್ನೇರಿಸು.
- ಆದರ್ಶ್ ಕೆ.ಎಸ್🖋️
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ