ಮಲತಾಯಿ (ಕಥನ ಕವನ)
ಪುಟ್ಟದಾದ ಮನೆಯೊಳೊಂದು ಮುದ್ದು ಅರಗಿಣಿ
ತಾಯಿಯನ್ನ ಕಳೆದುಕೊಂಡ ತಬ್ಬಲಿ ಮರಿಗಿಣಿ
ಕುಡುಕ ತಂದೆ ಸಿಡುಕಿ ಮಲತಾಯಿ ಜೊತೆಯಲಿ
ಘನಘೋರ ಜೀವನ ನಡೆಸುವ ಚಿನ್ನದ ಗಣಿ!!
ತಾಯಿ ಮಮತೆಯಿಲ್ಲದೇ ತಂದೆ ರಕ್ಷೆಯಿಲ್ಲದೇ
ಯಾರ ಹೆಗಲು ಮಗುವಿಗೆ ನೆರಳಾಗಿ ಸಿಗುವುದೇ
ಎಂಬ ತವಕ ದಿನವೂ ಕಾಡುವುದು ಜನತೆಗೇ
ಹರಕೆ ಹೊತ್ತರು ಜನ್ರು ಮಗುವಿನ ಒಳಿತಿಗೇ!!
ಮುಖದ ತುಂಬಾ ಮುಸುರಿಯ ಲೇಪನ
ಕೈ ತುಂಬಾ ಇದ್ದಲಿ ಮಷಿಯ ಚಂದನ
ಕೂಡಿ ಆಡುವ ಎಳೆಯ ವಯಸಿನ ಕಂದನ
ಕಂಡರೆ ಯಾರಿಗಾದರೂ ಮರುಕ ಬಾರದೇನಾ!!
ಮರುಕವಿಲ್ಲದ ಮಲತಾಯಿ ಮನಸದು
ಮಮತೆ ತೋರದ ಕ್ರೂರ ಹೆಣ್ಣ್ ರೂಪವದು
ಯಾರಿಗಂಜದ ಯಜಮಾನಿತನ ಅವಳದು
ಹೇಳೋರಿಲ್ಲದ ಕೇಳೋರಿಲ್ಲದ ಮನೆಯದು!!
ಹಳಸಿದ್ಧನ್ನವೇ ಮೃಷ್ಟಾನ್ನವಾಗಿದೆ ಮಗುವಿಗೇ
ಚಿಂತೆ ಮಾಡದೇ ದಿಟ್ಟತನದಲ್ಲಿಹಳು ನೆಟ್ಟಗೆ
ಹರಿದ ಕೊಳಕು ಬಟ್ಟೆ ಉಟ್ಟಿಹಳು ಈ ಗಟ್ಟಿಗೆ
ಮಲಸೋದರ ತೊಟ್ಟಿಹ ರೇಷ್ಮೆಯ ಟೊಪ್ಪಿಗೆ!!
ಕಂಡರೂ ಖುಷಿಯ ಪಡುವ ಮುಗ್ಧ ಕೂಸದು
ಅಸೂಯೆ ಇಲ್ಲದ ಅಪೂರ್ವ ಅಪರಂಜಿಯದು
ದೂರ ಸರಿದರು ಎಲ್ಲರೂ ಅವಳೇದುರಾದರೇ
ತ್ಯಾಪೆ ಬಡಿದ ತೂತು ಅಂಗಿ ಕಂಡು ನಕ್ಕರು!!
ಆದ್ರೂ ಬೇಸರ ಇಲ್ಲಾ ಈ ಮಂದಹಾಸಳಿಗೆ ಗುರಿಯ ಮುಟ್ಟುವ ತವಕ ಮಾತ್ರ ಹಸುಳೆಗೆ
ರಾತ್ರಿ ಹಗಲು ಓದಿಹಳು ಬಾಲೇ ಛಲ ಬಿಡದೇ
ಜಗವ ಗೆಲ್ಲೋ ಕನಸು ಕಾಣುತಾ ಮನದಲ್ಲೇ!!
ಸಮಯ ಬಂದಿತು ಆ ಕಷ್ಟ ಕಳೆಯಿತು
ಅದೃಷ್ಟ ಒಲಿಯಿತು ಈಗ ಈ ಚೆಲುವೆಗೆ
ದೇಶದ ಚುಕ್ಕಾಣಿ ಹಿಡಿದೇ ಬಿಟ್ಟಳು
ರಾಷ್ಟ್ರಕ್ಕೆ ಮಾದರಿ ಅಧ್ಯಕ್ಷಳಾದಳು!!
ಮಲತಾಯಿ ಮಾಡಿದ ಎಲ್ಲಾ ಪಾಪಕೇ
ಕ್ರೂರ ರೋಗಕೆ ಬಲಿಯಾದಳು ಆಕೇ
ಒಳಿತು ಮಾಡಿದರೆ ಆಗುವದೆಲ್ಲ ಒಳಿತೇ
ಕೆಡುಕು ಮಾಡಿದರೆ ಆಗುವದೆಲ್ಲಾ ಕೆಡಕೇ!!
ಈ ಸತ್ಯವಾದ ಸತ್ಯ ನೀ ಅರಿತರೇ ಬಾಳು ಸುಂದರ
ಹೃದಯ ಎಂದಿಗೂ ಆಗುವದು ದೇವಮಂದಿರ
ಜಗಕೆ ಆಗು ನೀ ಎಂದಿಗೂ ಉಪಕಾರಿ ಮಾನವ
ಹರಸುವರು ಆಗ ನಿನಗೆ ಇಡೀ ಮನುಕುಲ!!
- ಸೂಗಮ್ಮ ಡಿ ಪಾಟೀಲ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ