ಶುಕ್ರವಾರ, ಸೆಪ್ಟೆಂಬರ್ 17, 2021

ಶ್ರೀ ವಿರಾಟ ವಿಶ್ವಕರ್ಮ ನಮೋ (ಕವಿತೆ) - - ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಮಂಡ್ಯ.

ಶ್ರೀ ವಿರಾಟ ವಿಶ್ವಕರ್ಮ ನಮೋ

ಬ್ರಹ್ಮ ಸ್ವರೂಪ ಜ್ಞಾನಜ್ಯೋತಿಯ ನಾದಬ್ರಹ್ಮ
ಪಂಚಕರ್ಮ ಕಲೆ ಶಿಲ್ಪಕಲೆಗಳ ಮಹಾಪಂಡಿತನು
ಧರ್ಮಸಂಸ್ಥಾಪಕ ವಿಶ್ವಬ್ರಾಹ್ಮಣ ಜ್ಞಾನಿಯು
ಸಾಹಿತ್ಯ ಜ್ಞಾನ ವೇದ ಪಂಡಿತನು ಈ ಪರಬ್ರಹ್ಮನು
ಹಳದಿ ಪೀತಾಂಬರ ವಸ್ತ್ರತೊಟ್ಟ ಮಹಾಮಹಿಮನು
ಋಗ್ವೇದ ಯಜರ್ವೇದಗಳ ನಾದಬ್ರಹ್ಮ ಶ್ರೀ ವಿಶ್ವಕರ್ಮನು//೧//

ಪಂಚಭೂತಗಳ ಗೆದ್ದ ಮಹಾಧಾತೃ ಶ್ರೀ ವಿರಾಟ
ಯಜ್ಞಯಾಗಾದಿಗಳ ಪೂಜಿತ ದೈವಿಕ ಪರಬ್ರಹ್ಮನು
ಮನೆ ಮನ ಗುಡಿ ಗೋಪುರದಲ್ಲಿ  ನೆಲೆಸಿರುವ ದೈವವೇ
ಸರ್ವ ಜನಗಳ ಪರಂಜ್ಯೋತಿ ಈ ಬ್ರಹ್ಮನು
ಸನಾತನ ಸಂಸ್ಕೃತಿ ಸಾರಿದ ಕಲಿಯುಗದ ಪುರಾಣಿಕ
ಜಗವನ್ನೇ ಸೊಬಗಾಗಿಸಿದ ಈ ಮಹಿಮನು//೨//

ದೈವಜ್ಞ ಕಾಲಜ್ಞಾನಿ ದ್ರುಹಿಣಿ  ವಿಶ್ವಕರ್ಮ
ದೇವಲೋಕದ ಧನ್ವಂತರಿ ಪುರೋಗಾಮಿಯು
ದೈವಗಳ ದೈವ ಬ್ರಹ್ಮಸೂತ್ರ ಬ್ರಹ್ಮವಸ್ತುವೇ ಈ ಪರಬ್ರಹ್ಮ
ಸರ್ವ ಜನಾಂಗವ ಉದ್ದಾರಿಸು ಬಾ ಆದಿಪುರುಷ
ನಿನ್ಯಾ ಮಕ್ಕಳ ಹಸಿವು ಧಣಿವ ನೀಗಿಸಲು ಬಾ ವಿಧಾತ//೩//

ಅಜ್ಞಾನ ತೊಲಗಿಸಿ ಜ್ಞಾನ ವೃದ್ದಿಸು ಬಾ ಹೇ ವಿರಾಟನೇ
ಕುಲಕುಲವೆಂದು ಹೊಳಲಾಡುವ ಮನಗಳ ಬೆಸೆಯಲು ಶ್ರೀ ವಿಶ್ವಕರ್ಮನೇ ಬಾ
ವಿದ್ಯಾ ಪಾಂಡಿತ್ಯ ಸಾಧಿಸುವ ಛಲ ನೀಡು ಬಾ
ಐಕತೆಯಲಿ ಏಕತೆ ರೂಪವ ಸೃಷ್ಟಿಸು ಬಾ
ಶ್ರೀ ವಿರಾಟ ವಿಶ್ವಕರ್ಮ ದೇವನೇ ಎದ್ದು ಬಾ//೪//

ಸಾಮಾಜಿಕ ಆರ್ಥಿಕ ರಾಜಕೀಯ ಶಕ್ತಿಯ ನೀಡು ಬಾ
ಕಣಕಣಗಳ ಸೃಷ್ಟಿಕರ್ತನಿಗೆ ಕಮಲಪುಷ್ಪಗಳಿಂದ
ವೇದ ನಾದಗಳ ಮೂಲಕ ಅಪಿಸುವೆವು
ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮನಿಗೆ ಸಹಸ್ರ ನಮೋ ನಮೋ//೫//
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ, ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...