ನನ್ನ ಗುರು ಸೂರ್ಯನಾರಾಯಣ
ತೂಕಡಿಸಿ ತೂಕಡಿಸಿ ಓದುತಲಿದ್ದೆ
ಅಣ್ಣ ಸೂರಿ ತಾರಾ ತಾರಾ ಎನಲು
ಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆ
ಗದರಿ ಗದರಿ ವಿನಯದಿ ಅರುಹಿದ
ಗಮನದಿ ವಿಷಯವನು ಓದು ಓದು
ಕಲಿಯುತಿರು ಅದ ಬರೆದು ಬರೆದು
ಉಳಿವುದು ಸದಾ ನೆನಪು ನೆನಪು
ಎದುರಿಸು ಛಲದಿ ಪರೀಕ್ಷೆ ಪರೀಕ್ಷೆ
ಕದಿಯಲಾಗದು ಜ್ಞಾನದ ಸ0ಪತ್ತು ಸ0ಪತ್ತು
ತು0ಬಿಕೋ ಅದನು ಮನಕೆ ನೆನೆ ನೆನೆದು
ನಿನಗೆ ತರುವುದು ಸದಾ ಕೀರುತಿ ಕೀರುತಿ
ನಿರ0ತರ ಎನಿಸುವೆ ನೀ ಸಜ್ಜನ ಸಜ್ಜನ
ಆಗುವೆ ನೀ ಸ್ವಾವಲ0ಬಿ ಸ್ವಾವಲ೦ಬಿ
ಗಳಿಸುವೆ ಉನ್ನತ ಉನ್ನತ ಸ್ಥಾನಮಾನ
ನಡೆಸುವೆ ಹ0ಗಿಲ್ಲದ ಜೀವನ ಜೀವನ
ಮಾಡುವೆ ಅಶಕ್ತರಿಗೆ ದಾನವ ದಾನವ
ಎಡವಿ ಎಡವಿ ಬೀಳುವ ಸಮಯದಿ
ಎಚ್ಚರಿಸಿ ಎಚ್ಚರಿಸಿ ತಿದ್ದಿ ತೀಡುವನೇ
ಸಜ್ಜನ ಗುರು ಗುರು ಆಚಾರ್ಯರು
ಅಣ್ಣನೇ ನನ್ನ ದಾರಿ ದೀವಿಗೆ ದೀವಿಗೆ
ಹೊಳೆಯುತಿರುವೆ ಇ೦ದು ಫಳ ಫಳ ಜಗದಿ
ಗಳಿಸುತಿರುವೆ ಝಣ ಝಣ ಕಾ0ಚಾಣ
ನೀಡುತಿರುವೆ ಖುಷಿ ಖುಷಿಯಲಿ ದೇಣಿಗೆ
ಸ್ಮರಿಸಿ ಸ್ಮರಿಸಿ ಕೈಮುಗಿಯುವೆ ನನ್ನ ಸೂರಿಗೆ
ನನ್ನ ಗುರು ಸೂರ್ಯನಾರಾಯಣ ದಿವ್ಯಚೇತನಕ್ಕೆ ನಮೋ ನಮೋ 🙏
- ಲಲಿತಾ ಕೆ ಅಚಾರ್, ನಿವೃತ್ತ ಪ್ರಾ೦ಶುಪಾಲರು - ಬೆಂಗಳೂರು.
9480760969.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ