ಪ್ರೀತಿಯ ಸಹೋದರ ರಾಜು ಸೂಲೇನಹಳ್ಳಿಯವರು
ಬರೆದಿರುವ ಎರಡನೇ ಕಾದಂಬರಿ "ಅವಳ ಪ್ರೇಮದ ಅಲೆಗಳು"ಎಂಬ ಶೀರ್ಷಿಕೆಯಲ್ಲಿ ತಿಳಿಸಿರುವ ಹಾಗೆ ಅನೇಕ ಯುವ ಪ್ರೀತಿಸುವ ಮನಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹೋದರ ಎಸ್ ರಾಜು ಸೂಲೇನಹಳ್ಳಿಯವರು ಬಿ.ಎ, ಬಿ. ಇಡಿ ವ್ಯಾಸಂಗ ಮಾಡಿದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾ, ಭವಿಷ್ಯದ ಕನಸಾಗಿರುವ ಇವರು ಬಾಲ್ಯದಲ್ಲಿ ಓದು,ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಉಳ್ಳವರಾಗಿದ್ದಾರೆ. ತಮ್ಮ ಸೃಜನಶೀಲತೆಯನ್ನು ಮೆರೆದು ಪ್ರಥಮವಾಗಿ *"ಒಲವೇ"* ಎಂಬ ಕವನ ಸಂಕಲನವನ್ನು ಸಾಹಿತ್ಯಲೋಕಕ್ಕೆ ತೆರೆತಂದರು, ನಂತರ ಎರಡನೆಯದಾಗಿ *"ಸ್ಪಂದನಾ"* ಎಂಬ ಕಾದಂಬರಿಯನ್ನು ಪ್ರಕಟಿಸಿದರು, ಪ್ರಸ್ತುತ *"ಅವಳ ಪ್ರೇಮದ ಅಲೆಗಳು"* ಎಂಬ ಎರಡನೇ ಕಾದಂಬರಿ ಇದಾಗಿದೆ.
ಮಲೆನಾಡಿನಲ್ಲಿನ ಒಂದು ಸುಂದರವಾದ ಪುಟ್ಟಹಳ್ಳಿ ಚೇಳೂರು, ಅಲ್ಲಿ ಮನಮಿಡಿಯುವ ಮೈಕೊರೆಯುವ ಚಳಿ, ಜೊತೆಗೆ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಆ ಹಳ್ಳಿ ಹೊಂದಿತ್ತು. ಹೀಗಿರುವಾಗ ಆ ಊರಲ್ಲೊಂದು ಅತಿ ರಮ್ಯವಾದ ಪ್ರೇಮಕಥೆಯೊಂದು ಪ್ರಾರಂಭವಾಗುತ್ತಿತ್ತು. ಮಲೆನಾಡಿನ ವೈಭೋಗವನ್ನು ಕಥೆಯಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.
ಈ ಕಥೆಯಲ್ಲಿ ಹುಡುಗನ ಹೆಸರು ಪ್ರಜ್ವಲ್, ಈತನು ಒಳ್ಳೆಯ ಮೈಕಟ್ಟಿನ ಗೋಧಿ ಬಣ್ಣದ, ಎತ್ತರದ ನಿಲುವಿನ, ಸ್ವಾಭಿಮಾನದ ಬಡತನದ ಹುಡುಗ. ತಂದೆ-ತಾಯಿ ತುಂಬಾ ಕಷ್ಟದಿಂದ ಬಂದಂತಹ ಕುಟುಂಬವಾಗಿರುವುದರಿಂದ ಮನೆಯಲ್ಲಿನ ತಂದೆ-ತಾಯಿ ಇಬ್ಬರೂ ಅಕ್ಕ-ತಂಗಿಯರ ಜೊತೆಗೆ ಮನೆಯ ಜವಾಬ್ದಾರಿಯನ್ನು ನಡೆಸುತ್ತಿದ್ದನು. ನಂತರ ಹುಡುಗಿಯ ಹೆಸರು ಅರ್ಪಿತಾ, ಹುಡುಗಿಯ ತಂದೆ ತುಂಬಾ ಶ್ರೀಮಂತ ಮನೆಯಲ್ಲಿ ಕೂತು ಆರಾಮಾಗಿ ತಿಂದರೂ ಸಾಲದ ಆಸ್ತಿಯನ್ನ ಮಾಡಿದ್ದರು. ಹೀಗಿರುವಾಗ ಅರ್ಪಿತಾ ಮನೆಯಲ್ಲಿ ಓದಿದರೂ ಓದದಿದ್ದರೂ ನಡೆಯುತ್ತಿತ್ತು, ಇದಿಷ್ಟು ಕಾದಂಬರಿಯಲ್ಲಿ ಬರುವ ಪಾತ್ರಗಳು ಕುಟುಂಬದ ಹಿನ್ನೆಲೆಯನ್ನ ಎಲ್ಲರಿಗೂ ತಿಳಿಯುವ ಹಾಗೆ ತಿಳಿಸಿಕೊಟ್ಟಿದ್ದಾರೆ.
ಪ್ರಜ್ವಲ್ ನ ತಂದೆ ತುಂಬಾ ಕುಡಿತದ ಚಟಕ್ಕೆ ಬಿದ್ದು ಮನೆಯಲ್ಲಿ ಕುಡಿದು ಬಂದು ಮಕ್ಕಳಿಗೆ ಹೆಂಡತಿಗೆ ಬಹಳ ಕಷ್ಟವನ್ನು ನೀಡುತ್ತಿದ್ದರು, ಹೀಗಿರುವಾಗ ಒಂದು ದಿನ ತುಂಬಾ ಕುಡಿದು ಹಸುಗಳ ಮಧ್ಯ ಬಿದ್ದು ಸತ್ತು ಹೋದರು, ಹೀಗಿರುವಾಗ ಮನೆಯ ಎಲ್ಲ ಜವಾಬ್ದಾರಿಯೂ ಪ್ರಜ್ವಲನ ಮೇಲೆ ಇತ್ತು.
ಅರ್ಪಿತಾ ಕೂಡ ಇವಳದು ಚಿಕ್ಕ ಚೊಕ್ಕ ಕುಟುಂಬ ಅಣ್ಣ- ರಾಜು, ತಂಗಿ-ಸಹನಾ ಅಣ್ಣ ಅರ್ಪಿತಾಳ ಮೇಲೆ ಅತಿ ಹೆಚ್ಚು ಮಮಕಾರ, ಜೊತೆಗೆ ಸ್ವಲ್ಪ ಅನುಮಾನದ ವ್ಯಕ್ತಿ, ತಂಗಿ ಸಹನಾ ಮುಂದೆ ಬರುವ ಅರ್ಪಿತಾಳ ಪ್ರೀತಿಯಲ್ಲಿ ಬಹಳ ಸಹಾಯಕಳಾಗಿ ಕಾರ್ಯನಿರ್ವಹಿಸಿದ್ದಾಳೆ.
ಈ ಕಾದಂಬರಿಯಲ್ಲಿ ಹರ್ಪಿತಾಳು ತುಂಬಾ ಸುಂದರವಾದ ಹುಡುಗಿ ಎಂತಹವರನ್ನು ಕೂಡ ಮರುಳು ಮಾಡುವಂತಹ ಸೌಂದರ್ಯವನ್ನು ಹೊಂದಿದವಳು. ಆದರೆ ಯಾರನ್ನು ಕಣ್ಣೆತ್ತಿ ನೋಡದ ಸಂಪನ್ನ ಸದ್ಗುಣದ ಹೆಣ್ಣು ಅರ್ಪಿತಾ ಆಗಿದ್ದಳು. ಹಾಗೂ ಮಲೆನಾಡಿನ ಸಿರಿಯಲ್ಲಿ ವಾಸಿಸುತ್ತಿದ್ದ ಅರ್ಪಿತಾಳ ಕುಟುಂಬ, ಪ್ರಕೃತಿಯ ಸೌಂದರ್ಯದ ಬಗ್ಗೆ ಎಲ್ಲರ ಮನಕುಲಕುವ ಹಾಗೆ ಎಸ್ ರಾಜು ಅವರು ತಿಳಿಸಿದ್ದಾರೆ.
ಅರ್ಪಿತಾ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಸೇರಿದ್ದಳು. ಹೀಗೆ ಒಂದು ದಿನ ಕಾಲೇಜಿನ ಅಂಗಳದಲ್ಲಿ ಹೋಗುತ್ತಿರುವಾಗ ರಚನಾ ಎಂಬ ಹುಡುಗಿಯೂ ಅರ್ಪಿತಾಳನ್ನು ನೋಡಿ ಮುಗುಳ್ನಗುತ್ತಾಳೆ, ಹೀಗೆ ಮಾತನಾಡಿಸುತ್ತಾ ಇವರಿಬ್ಬರ ನಡುವೆ ತುಂಬಾ ಸ್ನೇಹ ಉಂಟಾಗಿ ರಚನಾ ಮುಂದೆ ಬರುವ ಪ್ರಜ್ವಲ್ ಮತ್ತೆ ಅರ್ಪಿತಾಳ ಪ್ರೀತಿಯಲ್ಲಿ ತುಂಬಾ ಸಹಾಯಕರಾಗಿರುತ್ತಾಳೆ. ಹೀಗೆ ಆರು ತಿಂಗಳ ನಂತರ ಪ್ರಥಮ ಪಿಯುಸಿ ಪರೀಕ್ಷೆ ಬಂದಿದ್ದವು ಪರೀಕ್ಷೆಯ ಶುಲ್ಕವನ್ನು ಕಟ್ಟಲು ಅಂದು ಕೊನೆ ದಿನವಾಗಿತ್ತು, ಅರ್ಪಿತಾ ಮನೆಯಲ್ಲಿ ದುಡ್ಡನ್ನು ಪರ್ಸನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಹೋಗುತ್ತಾಳೆ ದಾರಿಯಲ್ಲಿ ಪರ್ಸನ್ನು ಬಿಳಿಸಿಕೊಂಡು ಮುಂದೆ ಹೋಗುತ್ತಾಳೆ ಪ್ರಜ್ವಲ್ ಎಂಬ ಹುಡುಗ ಅದನ್ನು ತೆಗೆದುಕೊಂಡು ಮಾನವೀಯತೆಯಿಂದ ವಾಪಸ್ ಕೊಡಲು ಹುಡುಗಿಯ ಹಿಂದೆಯೇ ಬಸ್ ಇಡಿದು ಹೋದನು. ಹಾಗೋ ಈಗೋ ಎನ್ನುವಷ್ಟರಲ್ಲಿ ಹುಡುಗಿಯ ಕೂಡ ಸಿಕ್ಕಳು, ಇದು ನಿಮ್ಮ ಪರ್ಸ ಅಲ್ಲವೇ ತೆಗೆದುಕೊಳ್ಳಿ ಎಂದು ಕೊಟ್ಟಾಗ ಹುಡುಗಿ ಕೋಪಗೊಂಡು ನನ್ನ ಪರ್ಸನ್ನು ಕಳ್ಳತನ ಮಾಡಿ ನನಗೆ ಕೊಡಲು ಬಂದಿರುವೆಯ ಎಂದು ಅಕ್ಕಪಕ್ಕದಲ್ಲಿರುವ ಜನರಿಂದ ಬಾಸುಂಡೆ ಬರುವ ಹಾಗೆ ಹೊಡಿಸಿದಳು. ಹುಡುಗ ಆಚಾರ ಮಾಡಲು ಬಂದರೆ ಅನಚಾರವಾಗಿ ಬಿಟ್ಟಿತ್ತು ಎಂದು ಸಪ್ಪೆ ಮರೆಯಲಿ ಮನೆಗೆ ಬಂದ.
ಒಬ್ಬ ಅಜ್ಜಿಯಿಂದ ಅರ್ಪಿತಾಳಿಗೆ ಪ್ರಜ್ವಲ್ ಪರ್ಸ್ ಕದ್ದಿಲ್ಲವೆಂದು ಗೊತ್ತಾಗುತ್ತದೆ. ಪರ್ಸಿನಿಂದ ಪ್ರಾರಂಭವಾದ ಅವರಿಬ್ಬರ ಪ್ರೀತಿಯನ್ನು ಪ್ರೀತಿಸುವ ಹೃದಯಗಳಿಗೆ ಚೆನ್ನಾಗಿ ತಿಳಿಸಿದ್ದಾರೆ. ಸ್ವಲ್ಪ ದಿನದ ನಂತರ ಅರ್ಪಿತಾಗೆ ಮನಸ್ಸಲ್ಲಿ ಏನೋ ಚಂಚಲತೆ, ಯಾರನ್ನೊ ಹಚ್ಚಿಕೊಂಡದಂತಹ ಭಾವನೆ ಅವಳ ಹೃದಯದ ಗೂಡಿನಲ್ಲಿ ಮನೆಮಾಡಿತ್ತು. ಹುಡುಗ ಬೇರೆ ಯಾರು ಅಲ್ಲ ಪ್ರಜ್ವಲ್. ಅರ್ಪಿತ ತನ್ನ ಪ್ರೀತಿಯನ್ನು ಪ್ರಜ್ವಲನಿಗೆ ತಿಳಿಸಲು ಹಿಂಜರಿತದಿಂದ ರಚನಾ ಇವರಿಬ್ಬರ ಪ್ರೀತಿಯನ್ನು ಒಂದು ಮಾಡಿದಳು.
ಹೀಗೆ ದಿನೇದಿನೇ ಪ್ರೀತಿ ಹೆಚ್ಚಾಗಿ ಇಬ್ಬರನ್ನು ಒಬ್ಬರು ಬಿಡದಂತೆ ಮನಸ್ಸಿನಲ್ಲಿ ಹಚ್ಚಿಕೊಂಡು ಬಿಡುತ್ತಾರೆ. ಪ್ರಜ್ವಲ್ ಓದಿನಲ್ಲಿ ತುಂಬಾ ಜಾಣ ಬಿ.ಎ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ರಾಂಕ್ ಪಡೆದು ಒಳ್ಳೆಯ ಗೌರವ ಪಡೆದುಕೊಂಡಿದ್ದ. ಮುಂದಿನ ಅಭ್ಯಾಸಕ್ಕೆಂದು ಚಿಕ್ಕಮಗಳೂರಿಗೆ ಹೋಗಿ ಅಲ್ಲಿ ಕೂಡ ಉತ್ತಮವಾದ ಹೆಸರು ಮಾಡಿದ್ದನು. ಆದರೆ ಇವರ ಪ್ರೀತಿ ಇಲ್ಲಿ ದೂರ ಹಾಗೆ ಬಿಟ್ಟಿತ್ತು. ಒಬ್ಬರನ್ನೊಬ್ಬರ ಮುಖ ಬೇಟೆ ಇಲ್ಲ, ಮಾತುಕತೆಯೇ ಮೊದಲೇ ಇಲ್ಲ, ಇದರಿಂದ ಪ್ರೀತಿ ಮತ್ತಷ್ಟು ಶಿಖರಕ್ಕೇರಿದಂತಾಗಿತ್ತು. ಪ್ರಜ್ವಲ್ ತನ್ನ ಪ್ರೀತಿಯ ಹುಡುಗಿಗಾಗಿ 3000 ರೂ ಹಣದಿಂದ ಸುಂದರ 'ಸರ'ವನ್ನ ತಂದಿದ್ದ, ಅರ್ಪಿತಾ ಳು ಕೂಡ ತನ್ನ ಪ್ರೀತಿಯ ಹುಡುಗನಿಗಾಗಿ 500 ರೂ ಟೀಶರ್ಟ್ ತಂದಿದ್ದಳು. ಇವರಿಬ್ಬರ ಮೊದಲನೇ ಹುಡುಗರಿಂದ ಮತ್ತಷ್ಟು ಇವರ ಪ್ರೀತಿ ಗಟ್ಟಿಯಾಗಲು ಪ್ರಾರಂಭಿಸಿದ್ದು.
ಹೀಗಿರುವಾಗ ಅರ್ಪಿತಾ ಹುಡುಗ ದೂರ ಇರುವುದು ಕಂಡು ಮನಸ್ಸಿಗೆ ತುಂಬಾ ಹಚ್ಚಿಕೊಂಡು ಊಟ ನೀರಿನ ಕಡೆಗೆ ಗಮನ ಕೊಡದೆ ಅನಾರೋಗ್ಯದಿಂದ ಮಲಗಿರುತ್ತಾಳೆ, ತನ್ನ ತಂದೆ ಇವಳ ವೇದನೆಯನ್ನು ನೋಡದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸಿದಾಗ ಏನು ತಿಳಿಯಲಾಗದು, ನಂತರ ಡಾಕ್ಟರ್ ಸಲಹೆಯಂತೆ (MRI,CT ಸ್ಕ್ಯಾನ್) ಮಾಡಿಸಿದ ನಂತರ ಅರ್ಪಿತಾಳಿಗೆ ಒಂದು ಅನಾಹುತ ಕಾದಿತ್ತು. ಅರ್ಪಿತಾಗೆ *'ಬ್ರೈನ್ ಟ್ಯೂಮರ್'* ಆಗಿರುತ್ತದೆ ಈ ವಿಷಯ ತಿಳಿದ ತಂದೆ ಬಹಳ ಖಿನ್ನತೆಗೆ ಒಳಗಾಗುತ್ತಾರೆ. ಮತ್ತೆ ಈ ವಿಷಯವನ್ನು ತಂದೆ ಯಾರಿಗೂ ಹೇಳಿರುವುದಿಲ್ಲ. ನಂತರ ಪ್ರಜ್ವಲ್ ತನ್ನ ಓದು ಮುಗಿಸಿಕೊಂಡು ಮನೆಗೆ ಬಂದಿರುತ್ತಾನೆ, ಒಂದು ದಿನ ಮನೆಗೆ ಒಂದು ಲೆಟರ್ ಬಂದಿರುತ್ತದೆ. ಅದು ಪ್ರಜ್ವಲನಿಗೆ ಸರ್ಕಾರಿ ಉದ್ಯೋಗದ ಲೆಟರ್ ಆಗಿತ್ತು. ಈ ವಿಷಯ ತಿಳಿದ ಪ್ರಜ್ವಲನ ತಾಯಿ ಅಕ್ಕ ತಂಗಿಯರು ಕೂಡ ಅವನನ್ನ ಅಭಿನಂದಿಸಿದರು.
ಇಷ್ಟು ವರ್ಷ ತಾಯಿಗೆ ಮತ್ತು ಮನೆಯವರಿಗೆಲ್ಲರಿಗೂ ಮುಚ್ಚಿಟ್ಟಾ ವಿಷಯವನ್ನು ಖುಷಿ ಸಂದರ್ಭದಲ್ಲಿ ಪ್ರಜ್ವಲ್ ನು ತಾಯಿಯ ಮುಂದೆ ಬಿಚ್ಚಿಡುತ್ತಾನೆ. ಏನೆಂದರೆ. ನಾನು ಅರ್ಪಿತಾ ಎನ್ನುವಂತಹ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಅವಳನ್ನೇ ಮದುವೆಯಾಗಬೇಕೆಂದುಕೊಂಡಿದ್ದೇನೆ ಎಂದಾಗ ತಾಯಿ ಮಹಾದೇವಮ್ಮ ಯೋಚಿಸಿ ಅರ್ಪಿತಾ ಅವರ ಮನೆಗೆ ಹೆಣ್ಣು ಕೇಳಲು ಹೋಗುತ್ತಾಳೆ. ಹೋದಾಗ ಅರ್ಪಿತಾ ತಂದೆ ಪ್ರತ್ಯೇಕವಾಗಿ ಪ್ರಜ್ವಲನ ಜೊತೆ ಮಾತನಾಡಬೇಕಾಗಿ ಒಂದು ಕೋಣೆಗೆ ಕರೆದುಕೊಂಡು ಹೋದರು, ತನ್ನ ಮಗಳಿಗೆ ಬ್ರೈನ್ ಟ್ಯೂಮರ್ ಇರುವುದು ಪ್ರಜ್ವಲ್ ನ ಮುಂದೆ ಬಿಚ್ಚಿದಾಗ ಪ್ರಜ್ವಲ ನ ರೋಧನೆಯನ್ನು ಮನ ಮಣೆಯುವ ಹಾಗೆ ತುಂಬಾ ಸೊಗಸಾಗಿ ತಿಳಿಸಿದ್ದಾರೆ.
ಬ್ರೈನ್ ಟ್ಯೂಮರ್ ಇರುವುದರಿಂದ ಅವಳನ್ನು ಮದುವೆಯಾಗುವುದು ಒಪ್ಪದ ಹುಡುಗಿಯ ತಂದೆ ಮುಂದೆ ಪ್ರಜ್ವಲ್ "ನಾನು ಬದುಕುವುದಾದರೆ ಅರ್ಪಿತ ಜೊತೆ, ಒಂದೇ ದಿನ ಬದುಕಲಿ ನಾನು ಅವಳ ಜೊತೆ"ಎಂಬ ಪ್ರೀತಿಯ ಒಳಗುಟ್ಟನ್ನು ತಂದೆಗೆ ತಿಳಿಸಿ ಶುಭಲಗ್ನ ಪಾಲ್ಗೊಂಡರು.
ನಂತರ ಇಬ್ಬರೂ ಮದುವೆಯು ಕೂಡ ಎಲ್ಲರ ಸಮ್ಮುಖದಲ್ಲಿ ನಡೆಯುತ್ತದೆ. ನನ್ನ ಪ್ರೀತಿಯ ಹುಡುಗಿ ಅರ್ಪಿತಗೆ ಚಿಕಿತ್ಸೆ ನೀಡುವುದರಲ್ಲಿ ನಿರತನಾದನು. ದೇಶವಿದೇಶಗಳಲ್ಲಿ ಅರ್ಪಿತಳನ್ನು ಬ್ರೈನ್ ಟ್ಯೂಮರ್ ನ ವಿಶೇಷ ತಜ್ಞರೊಂದಿಗೆ ತೋರಿಸಿ ಔಟ್ ಆಫ್ ಡೇಂಜರ್ ಆಗಿ ಅರ್ಪಿತಾಳನ್ನು ಕರೆತಂದನು. ಅರ್ಪಿತಾ ಪ್ರಜ್ವಲ್ ಈ ಸಂತೋಷದ ಸುದ್ದಿಯನ್ನು ಒಟ್ಟಿಗೆ ಕೇಳಿಸಿಕೊಂಡು ಸಂಭ್ರಮದಿಂದ ಇನ್ನಷ್ಟು ಗಟ್ಟಿಯಾಗಿ ತಬ್ಬಿಕೊಂಡುರು. ನಂತರ ದಿಗಂತದಲ್ಲಿ ಸೂರ್ಯ ಇವರ ನೋಡಿ ನಗುತ್ತಾ ಮುಳುಗಿದನು.
ಶ್ರೀಯುತ ಎಸ್ ರಾಜು ಸೂಲೇನಹಳ್ಳಿಯವರು ಈ ಸುಂದರ ಕಾದಂಬರಿಯನ್ನು ತುಂಬಾ ಸೊಗಸಾಗಿ ಪ್ರಾರಂಭಿಸಿ ಪ್ರೀತಿಸುವ ಹೃದಯವನ್ನು ಕೊನೆಗೆ ಒಂದುಗೂಡಿಸಿ, ಗೊತ್ತಿಲ್ಲದೆ ಪ್ರೀತಿಸಿದವರು ಕೊನೆಗೊಂದು ದಿನ ಸಾಧಿಸಿ ಒಂದಾಗಬಹುದು ಎಂಬ ಆಶಾಭಾವನೆಯನ್ನು ಮುಂದಿಟ್ಟುಕೊಂಡು ಪ್ರೀತಿಸುವ ಭವಿಷ್ಯದ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ.
ಮತ್ತೊಮ್ಮೆ ಪ್ರೀತಿಸುವ ಹೃದಯಗಳಿಗೆ ಮತ್ತೊಂದು ಕಿವಿಮಾತು ಪ್ರೀತಿಸುವವರು ಸಿಗಲಿ ಸಿಗದಿರಲಿ ಕೊನೆಯವರೆಗೂ ಸ್ವಚ್ಛ ಮನಸ್ಸಿನಿಂದ ಪ್ರೀತಿಸಿ, ಯಾಕೆಂದರೆ "ಹಚ್ಚಿಕೊಂಡವರೆ ಬಿಟ್ಟು ಹೋದ ಮೇಲೆ ಮತ್ತೆ ಯಾರನ್ನ ಮೆಚ್ಚು ಕೊಳ್ಳುವುದನ್ನು ಮರೆತುಬಿಡುತ್ತಾರೆ."
- ಉದಯ ಬಡಿಗೇರ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ