ನವನೀತ ಚೋರ
ಅಂದು ಕೃಷ್ಣ ಮುದ್ದು ಮುರುಳಿ
ಚೆಲುವ ನವನೀತ ಚೋರನು
ಮುರಲಿ ಸ್ವರದಲಿ ಭವ್ಯ ಬನದಲಿ
ಬೆಣ್ಣೆ ತಿಂದು ನಲಿದ ನಂದನು
ಬಟ್ಟ ಮುತ್ತಿನ ಕಂಗಳ ಮುದ್ದು
ಸುರಿವ ಮುಖದ ಸುಂದರನು
ನನ್ನ ಮುದ್ದು ಚೆಲುವ ಕೃಷ್ಣನು
ಮೋಹದಿ ಬಂದನು ವಾಸುದೇವನು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬೆಳ್ಳಿ ಗೆಜ್ಜೆ ಕಾಲಿಗೆ ತೊಟ್ಟು
ಮೋಹದಿ ಬಂದ ನಂದನನು
ಕೊಳಲನೂದುತ ಚೆಲುವ ನಿಂದನು
ಶಿರದ ಮೇಲೆ ಮುಕುಟವನಿಟ್ಟು
ನವಿಲಂತೆ ನಲಿಯುವ ಮೋಹನನೇ
ಯಮುನಾ ತೀರದಿ ನಲಿದವನೇ
ನನ್ನ ಚೆಲುವ ಮುದ್ದು ಕೃಷ್ಣನೇ
ಎಲ್ಲರ ಮನದಿ ನಲಿಯುವವನೇ
ರಂಗಿನ ಲೋಕದ ಚಿತ್ತಾರನೇ
ಬೃಂದಾವನದೀ ಮಧುರವಾಗಿ ಕೊಳಲನೂದುತಾ
ಗೋಪಿಕೆಯರನೆಲ್ಲಾ ಮೋಹನನಾಗಿ ಸೆಳೆದವನೇ
✍️ಆಶಾ.ಎಲ್.ಎಸ್. ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ