ರಾಧೇಕೃಷ್ಣೆಯು
ದೇವಕಿ ಕಂದ ವಸುದೇವ ನಂದನ
ಮುರುಲಿ ನಾದಕೆ ಪ್ರೇಮಬಂಧನ,,
ಮುಕುಟದಲಿ ಅಂದದ ಗರಿಯು
ಕಂಠದಿ ಮುತ್ತಿನ ಚೆಂದದ ಮಣಿಯು,,//೧//
ಭವ್ಯ ಬುವಿಗೆ ಸಗ್ಧ ಜ್ಞಾನಮಯಿ
ಭೂ ಲೋಕದ ಶಾಂತ ಪ್ರೇಮಮಯಿ,,
ಹಳದಿ ಪೀತಾಂಬರ ತೊಟ್ಟ
ಯದುವಂಶ ತಿಲಕ ರಮ್ಯಮಯಿ,,//೨//
ರಾಧೆಯ ಕರಪಿಡಿದು ತೋರಿದೆ
ಹೃದಯದ ತುಂಬ ಅರ್ತಿಯ,,
ಹುಣ್ಣಿಮೆಯ ಚೆಂದದ ಕಾಂತಿಯ
ಏಕಾಂತದಲಿ ಮರೆತೆಯ ಮಯೂರಿಯ,,//೩//
ಸೊಬಗ ಬನದಲಿ ವೇಣು ನಾದದಲಿ
ನಳಿಸುತಿದೆ ಸಸ್ಯಶ್ಯಾಮಲೆಯು,,
ಯಮುನಾ ತೀರದಿ ಜೋಡಿ ಸುಮವು
ಜಗಕೆ ತೋರಿದೆ ನಾದವ ರಾಧೆಕೃಷ್ಣೆಯು,,//೪//
- ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಡ್ವೈಸರ್ ಅಂಚೆ ಜೀವ ವಿಮೆ ಮಂಡ್ಯ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ