ಸೋಮವಾರ, ಸೆಪ್ಟೆಂಬರ್ 13, 2021

ವಿದಾಯ ಹೇಳಿ ಹೊರಟಾನೋ ವಿಘ್ನೇಶ (ಕವಿತೆ) - ಹನುಮಂತ ದಾಸರ ಹೊಗರನಾಳ.

ವಿದಾಯ ಹೇಳಿ ಹೊರಟಾನೋ ವಿಘ್ನೇಶ

ನಡಿತೈತೋ ದೇಶದೊಳಗ ಎಲ್ಲೆಲ್ಲೋ ಗಣಪತಿ ಹಬ್ಬ
ಮಿಡಿತೈತೋ ನರ-ನಾಡಿಯೋಳಗ ಡಿಜೆ ಹಾಡಿನ ಕ್ಲಬ್ಬ....!!

ಗಣಪತಿ ಇರುವನೋ ಕೆಲವು ದಿನಗಳವರೆಗೆ
ದಿನಕ್ಕೊಂದು ಸವಿಯುವನು ಸಿಹಿಯಾದ ರುಚಿ ಅಡುಗೆ.....!!

ಕಾಳು-ಕಡುಬು ತಿನ್ನದ ವಿನಾಯಕ
ನಗಿಸಿ-ನಲಿಸಲು ಬರುವನೋ ಜನಗಳ ಪ್ರೇಮಕ್ಕ....!!

ಸುಮ್ಮನೆ ಕುಳಿತಾನೋ ಗಣಪ ಆಸನದಮ್ಯಾಲ
ಹರಸಿ ಬರುತಾವೋ ನಿನಗ ಹಣ್ಣು-ಹಂಪಲಗಳ ಚೀಲ...!!

ಸಂತೋಷ ತುಂಬಿತ್ತು ಮನದಲಿ ನೀನಿದ್ದ ದಿನಗಳು
ಧೂಳಿಪಟವಾಗಿತ್ತು ಮನಕೆ ನೀ ಹೊರಟ ಕ್ಷಣಗಳು....!!

ಕೆಲವೇ ದಿನಗಳವರೆಗೆ ಇರುವನು ವಿನಾಯಕ
ಸಂತೋಷದಿ ಸೇರುವರು ಅವನಲ್ಲಿಗೆ ಕುಣಿಯಾಕ...!!

ಬರುವಾಗ ಬರುತಾನೋ ಗಣೇಶ ಶಾಂತಿ ರೀತಿಯೊಳಗ
ಗಣಪತಿ ಹೆಸರೊಳಗ ಇರುತೇವ ಬಹು ಕ್ರಾಂತಿಭಾವದೊಳಗ....!!

ವಿಘ್ನಗಳ ಕಾಯುವ ವಿಘ್ನ ವಿನಾಶಕ
ಜನಗಳ ಬದುಕಿಗೆ ಇವನೊಬ್ಬನೇ ಸೇವಕ....!!


-  ಹನುಮಂತ ದಾಸರ ಹೊಗರನಾಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...