ನೋಡಿ ನಗುವ, ಕೇಳಿ ಹಿಡಿಯುವ ಮಿಡಿತಗಳಿಗೆ ಏನೆಂದು ಉಸಿರಲಿ.
ಹಾರುವ ಭಾರದಲಿ ತೇಲುವ ನಿರ್ವಾತದಲಿ ತಟ್ಟಿ ಇಣುಕುವ
ತೋರಿಕೆಗಳಿಗೆ ಚಿತ್ತವೊಂದೆಂದು ಹೇಳಲೇ ಹಲವಲ್ಲವೇ ಮನಸ್ಸಿಗೆ ರೋಗಗಳು.
ಕಾಲಿನ ಕಮಾನುಗಳು
ಕೆಸರಗದ್ದೆಯ ಓಟಗಳು
ನಿಂತು ನೀರಾಗಿಸುವ ನಿರ್ಜನ
ಕೂಗಾಟಗಳಿಗೆಲ್ಲ ನಿಂತು ಋಜು ಹಾಕಬಹುದೇ.
ಯಾತ್ರೆಗೀತ್ರೆಗಳ ಮಿಸುಕಾಟಗಳಲಿ ತೂಗಿ ತೊಪ್ಪೆಯಾಗುವ ಲಾಗಮಿಲ್ಲದ ಸಾಚಾಗಳ ಹೇರಿಕೆಗಳಲ್ಲಿ ಉಸಿರು ಬಿಗಿದಪ್ಪಿಕೊಳ್ಳಲಾದೀತೆ.
ಗಡ್ಡಬಿಟ್ಟವರ ಸಂತೆಯಲಿ ಕಾವಿಧಾರಿಗಳ
ಶವಯಾತ್ರೆಗಳು
ನಲುಗುವ
ನರಕದ ಬಾಗಿಲಿಗೆ
ತಲುಪಿದರೂ ಕೀಗಳು ಬೇಕಲ್ಲವೇ.
ಜಮೀನು ಜಾಮೀನುಗಳ
ಉಚ್ಚಿಗೆದ್ದು ರೊಚ್ಚುಕಾರುವವರ
ಹುಚ್ಚಿಗೆ ಸರಳ ಪಂಜುಗಳು
ಕೈಗೆ ನಿಲುಕಾಲದೀತೆ.
ತೋರಿ ನಗಿಸುವವನ ಸಂತೆಗೊಂದು ಅರ್ಥ ಬೇಡವೆ.
ಯಾರಿಗಿಲ್ಲಿ ನ್ಯಾಯ ಯಾರಿಗಿಲ್ಲಿ ಅನ್ಯಾಯಗಳ ಬಹುಮಾನವಿದೆಯೆಂದು
ಒಟ್ಟಿನಲ್ಲಿ ದಾಖಲಾಗುವವರ ಹೆಚ್ಚಿದ್ದಾರೆ ಆಗದಿದ್ದವರಿಗೂ ಸರತಿ ಬಂದು ನಿಯುಕ್ತಿ ಮಾಡುತ್ತೆ.
ಕಾಲಿಲ್ಲದ ಶವಗಳೊಮ್ಮೆ
ಖಾಲಿತನದಿಂದ ಮಣ್ಣಾಗಲಾರವು
ಚೀತೆಯೇರುವ ಹೊತ್ತಿಗೆ ತಲೆಯೊಳಗಿನ ಖಾಲಿತನ ನಾಲ್ಕಾರು ಬಂಧುಗಳಿಗೆ ಕಾಣಿಸುತ್ತವೆ ಆಗದಾರೂ
ಪಥದ ಬಾವುಟಗಳು ಭೂಗೋಳದ ತುಂಬಾ ಹಾರಾಡಬೇಕಿದೆ.
- ಶ್ರೀಧರ ಆರ್.ವಿ., ರಾಯಚೆರ್ಲು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ