ಚುಟುಕುಗಳು.
೧
ಒಂದು ಮೂರ್ತಿ ಸುಂದರವಾಗಿ ಕಾಣಬೇಕಾದರೆ ಅದಕ್ಕೆ ಅನೇಕ ಕಡೆ ಕೆತ್ತಿ ಬಡಿದಾಗಲೇ ಸುಂದರ ಮೂರ್ತಿಯಾಗಿ ಪರಿಣಮಿಸುವುದು. ಅದೇ ರೀತಿ ಮನುಷ್ಯ ಉನ್ನತ ಸ್ಥಾನವನ್ನು ಪಡೆಯಬೇಕಾದರೆ ತನಗೆ ಬಂದಿರುವ ಕಷ್ಟಗಳನ್ನು ಪಟ್ಟುಗಳನ್ನು ತಿಂದು ಲೆಕ್ಕಿಸದೆ ತನ್ನ ಗುರಿಯನ್ನು ತಲುಪುವ ಪ್ರಯತ್ನ ಮಾಡುವನು ಆಗ ಒಂದು ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ.
೨
ದುಡ್ಡಿನ ಅವಶ್ಯಕತೆ ಬಿದ್ದಾಗ ಬೆನ್ನು ಬಿಡದೆ ತಮಗೆ ದಕ್ಕಿಸಿಕೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ಕೊಟ್ಟವರಿಗೆ ಸರಿಯಾದ ಹೇಳಿಕೆ ಕೊಡುವದು ಸಹ ಅಷ್ಟೇ ಮುಖ್ಯ. ಇಲ್ಲದಿದ್ದರೆ ಮನುಷ್ಯ ಮನುಷ್ಯ ನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವರು.
೩
ಮನುಷ್ಯ ತನಗೆ ಹೊಟ್ಟೆ ಹಿಡುಸಿದಷ್ಟು ತಿನ್ನುವದು ಅವಶ್ಯ. ಅದೇ ರೀತಿ ತನಗೆ ಸಾಮರ್ಥ್ಯ ವಿದ್ದಷ್ಟು ದುಡಿಯುವದು ಅಷ್ಟೇ ಮುಖ್ಯ. ಅತಿಯಾದರೆ ಮಾನಸಿಕ ನೆಮ್ಮದಿ. ಆರೋಗ್ಯ್ ಹಾಳಾಗುವದು ಸಹಜ.
✍️ ಶ್ರೀಮತಿ ಸವಿತಾ ಆರ್ ಅಂಗಡಿ ಮುಧೋಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ