1. ಪಲಾಯನ
ನನ್ನ ಕನಸಿನ
ಲೋಕಕ್ಕೆ ಬಂದಿದ್ದ
ಲೋಕ ಸುಂದರಿ
ಐಶ್ವಯ೯
ಮಗ್ಗುಲಲ್ಲಿ ಮಲಗಿದ್ದ
ನನ್ನಾಕೆ ಕಂಡು
ಓಡಿ ಹೋಗಿದ್ದು
ಆಶ್ಚಯ೯
2. ಲಕ್ಷಣಂ
ಒಡವೆ ತೊಟ್ಟ
ಹೆಂಗಸರು ಹೇಳುತ್ತಾರೆ
ಇದು ಸೌಂದಯ೯ ಲಕ್ಷಣಂ
ಮೀಸೆ ಬಿಟ್ಟ
ಪುರುಷರು ಹೇಳುತ್ತಾರೆ
ಇದು ಜೇಬಿಗೆ ಬೀಳುವ
ಕತ್ತರಿ ಲಕ್ಷಣಂ
3. ಶರಣು
ಯಾವ ಸ್ತ್ರೀ ದೇವಿಗೂ
ಶರಣಾಗುವುದಿಲ್ಲ
ಎನ್ನುತ್ತಿದ್ದ ಗುರು
ನಿದ್ರಾದೇವಿಗೆ
ಶರಣಾಗಿದ್ದರು
4. ಕಾವ್ಯ ನಾಮ
ಕಾಲೇಜಿನಲ್ಲಿ ಕಾವ್ಯಳಿಗೆ
ಪ್ರೇಮಪತ್ರ ಬರೆಯುತ್ತಿದ್ದ ಕಾಳಿದಾಸ
ಈಗ ಅವಳನ್ನೇ
ಮದುವೆಯಾಗಿ
ಬರೆಯುತ್ತಿದ್ದಾನೆ
ದುರಂತ ಕಥನಾ ಕಾವ್ಯ
ನವ್ಯ ಕಾವ್ಯನಾಮದಿ
- ಗೊರೂರು ಅನಂತರಾಜು
ಹಾಸನ, 9449462879.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ