ಶುಕ್ರವಾರ, ಅಕ್ಟೋಬರ್ 22, 2021

ಕಲ್ಪವೃಕ್ಷ (ಲೇಖನ) - ಮಂಜುನಾಥ ಹಿರೇಮಠ. ದಂಡಸೋಲಾಪುರ(ಚಾಮನಾಳ), ಯುವ ಸಾಹಿತಿಗಳು ಮತ್ತು ಶಿಕ್ಷಕರು.

ಕಲ್ಪವೃಕ್ಷ ಜೀವನದ ಮರ ಇದು ವಿಶ್ವ ವೃಕ್ಷ. ಸಮುದ್ರ ಮಂಥನದ ಆರಂಭಿಕ ಸಮಯದಲ್ಲಿ ಕಲ್ಪವೃಕ್ಷವು ಮೂಲಭೂತ ನೀರಿನಿಂದ ಹೊರಹೋಮ್ಮಿತ್ತು. ಸಾಗರ ಮಂಥನ ಪ್ರಕ್ರಿಯೆಯಲ್ಲಿ  ಎಲ್ಲಾ ಅಗತ್ಯಗಳನ್ನು ದಯಪಾಲಿಸುವ ದಿವ್ಯ ಹಸು. ದೇವಲೋಕದಲ್ಲಿ ಪಾರಿಜಾತ, ಹರಿಚಂದನ, ಕಲ್ಪವೃಕ್ಷ ಎಂಬ ವೃಕ್ಷಗಳಿವೆ ಅದರಲ್ಲಿ ಶ್ರೇಷ್ಠವಾದದ್ದೇ ಕಲ್ಪವೃಕ್ಷ. ಅಂತಹ ಕಲ್ಪವೃಕ್ಷ ಎಂಬ ಹೆಸರಿನ ವಿದ್ಯಾಸಂಸ್ಥೆಯನ್ನು
 ಎಸ್. ವಿ. ಬಿರಾದಾರ ರವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ಜೊತೆಗೆ ಧರ್ಮಸಂದೇಶಗಳನ್ನು ಮಕ್ಕಳಿಗೆ ಧಾರೆಯೆರೆಯುತ್ತಿರುವದು ಕಲ್ಪವೃಕ್ಷಕ್ಕೆ ಮತ್ತಷ್ಟು ಮೆರಗು ತಂದಂತಾಗಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಶಿಕ್ಷಣದ ಜೊತೆಗೆ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿರುವ ಇವರು ಧರ್ಮಕ್ಕೆ ಭೂಷಣ. ದೇವಲೋಕದ ಕಲ್ಪವೃಕ್ಷಕ್ಕೆ ಚಿನ್ನದ ಬೇರುಗಳು, ಬೆಳ್ಳಿ ಕೊಂಬೆಗಳು, ಹವಳದ ಎಲೆಗಳು, ಮುತ್ತಿನ ಹೂವು, ರತ್ನದ ಮೊಗ್ಗುಗಳು, ವಜ್ರದ ಹಣ್ಣುಗಳು ಹೇಗೆ ಇವೆಯೋ ಹಾಗೆ ಎಸ್. ವಿ. ಬಿರಾದಾರ ಕಟ್ಟಿರುವ ಕಲ್ಪವೃಕ್ಷಕ್ಕೆ ಶಿಕ್ಷಣದ ಬೇರುಗಳು, ಜ್ಞಾನದ ಕೊಂಬೆಗಳು, ಧರ್ಮ ಸಂದೇಶದ ಎಲೆಗಳು, ವಿಚಾರವೆಂಬ ಹೂವು, ಆಚಾರವೆಂಬ ಮೊಗ್ಗುಗಳು, ಸಾಧನೆಯ ಹಣ್ಣುಗಳಿವೆ. ಸಾಧನೆಗೆ ಸ್ಫೂರ್ತಿ ವಾಣಿಯು ಅಷ್ಟೆ ಅವಶ್ಯಕತೆ ಇದೆ. ಅಂತಹ ಸ್ಫೂರ್ತಿವಾಣಿ ಕಲ್ಪವೃಕ್ಷ ನೀಡಿದೆ.

 ಕಲ್ಪವೃಕ್ಷದ ಸ್ಫೂರ್ತಿ ವಾಣಿ :
ಸಾಧನೆ ಸುಗಮ -- ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು, ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಯಾವುದಾದರು ಕ್ಷೇತ್ರದಲ್ಲಿ ಸಾಧನೆಯತ್ತ ಮುಖಮಾಡಬೇಕು. ಇದು ಸ್ಪರ್ಧಾತ್ಮಕ ಯುಗ ಇಲ್ಲಿ ನಾವು ಬದುಕಬೇಕಾದರೆ ಸ್ಪರ್ಧೆಯಲ್ಲಿ ಭಾಗಿಯಾಗುವದು ಅಗತ್ಯ. ಸೋಲಿನ ಅನುಭವ ಪಡೆದವರು ಮಾತ್ರ ಗೆಲುವಿನ ಮಹತ್ವ ತಿಳಿಯಲು ಸಾಧ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಭಾವ ತಾಳಬೇಕು ಆದರೂ ಪ್ರಯತ್ನ ಬಿಡಬಾರದು. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ ಈ ಸತ್ಯ ಅರಿಯಬೇಕು. ಗೆಲುವು ಆನಂದ, ಸಂಭ್ರಮ ತರುವುದು.

ಸ್ಪರ್ಧೆ ಬದುಕಿನ ಭಾಗ -- ಸ್ಪರ್ಧೆ ಬದುಕಿನ ಭಾಗ, ಇದನ್ನು ಅರಿತು ಮುನ್ನಡೆಯಬೇಕು. ಸೋಲೇ ಗೆಲುವಿನ ಸೋಪಾನ ಎಂಬ ಮಾತು ವಾಸ್ತವ ಸತ್ಯ, ನಮ್ಮ ಸಾಧನೆ ಕಂಡು ಇತರರು ಸಂತಸ  ಪಡಬೇಕು. ಇನ್ನೊಂದು ಸತ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಸೋಲು- ಗೆಲುವು ಚಕ್ರಗಳಂತೆ ಸದಾ ತಿರುಗುತ್ತಿರುತ್ತವೆ. ನನ್ನ ಬದುಕಿನ ಉದ್ದಕ್ಕೂ ಗೆಲುವೇ ಕಂಡಿವೆ, ನಾನೆಂದು ಸೋತೆ ಇಲ್ಲ ಎನ್ನುವ ಯಾವ ಒಬ್ಬ ವ್ಯಕ್ತಿಯು ಈ ಜಗತ್ತಿನಲ್ಲಿ ಕಾಣುವದಿಲ್ಲ. ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಸಾಧನೆಯತ್ತ ಸಾಗಬೇಕು.
ಗುರಿಯ ಅಭಿರುಚಿ -- ಗುರಿಗಳನ್ನು ನಿರ್ಧರಿಸುವದು ಒಂದು ಕಲೆ ಎಂದೇ ಹೇಳಬಹುದು ಇದು ಒಮ್ಮೆ ಬರುವದಿಲ್ಲ ಆದರೆ ಸೂಕ್ತವಾದ ಗುರಿ ನಿರ್ಧರಿಸಬೇಕಾದರೆ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳು ಹಾಗೂ ಅವುಗಳನ್ನು ಪ್ರೆರೇಪಿಸುವ ಅಂಶಗಳು ಗೊತ್ತಿರಬೇಕು ವಾಸ್ತವಿಕವಾದ ಗುರಿಗಳಿರಲಿ.
ಹೀಗೆ ತನ್ನದೇ ಆದ ಮಹತ್ವ ಪಡೆದಿರುವ ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಮೇರು ಪರ್ವತದಂತೆ ಇದೆ ಅಲ್ಲದೆ ಸಂಸ್ಕೃತಿ, ಆಚಾರ ವಿಚಾರಗಳಿಗೂ ಸ್ಪಂದಿಸುತ್ತಿರುವ ಕಲ್ಪವೃಕ್ಷ ಧರ್ಮಕ್ಕೆ ಭೂಷಣ.

"ಧರ್ಮ ಮತ್ತು ಶಿಕ್ಷಣ"- ಸಮಾಜದ ಒಳಿತಿಗಾಗಿ ಧರ್ಮದ ಆಚರಣೆ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳೂ ಅಷ್ಟೆ ಅವಶ್ಯವಾಗಿವೆ. ಮಕ್ಕಳು ಸಂಸ್ಕಾರವಂತರಾಗಿ ಬೆಳೆದರೆ ಮಾತ್ರ ತಂದೆ ತಾಯಿಗೆ ಮಕ್ಕಳಾಗಿರುತ್ತಾರೆ ಮತ್ತು ಸಾಧನೆಯ ಮೆಟ್ಟಿಲು ಏರುತ್ತಾರೆ. ಎಸ್. ವಿ. ಬಿರಾದಾರ ರವರು ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಧಾರ್ಮಿಕ ಅರಿವು ಮೂಡಿಸುತ್ತಿದ್ದಾರೆ. ಇವರ ಧರ್ಮದ ಕಾಳಜಿಗೆ ನಮ್ಮ ಯುವ ಸಾಹಿತ್ಯ ಬಳಗವು ಅಭಾರಿಯಾಗಿದೆ. ಮಕ್ಕಳ ಚಿಂತನ - ಮಂತನ, ವಿಚಾರಗೋಷ್ಠಿ, ಮಕ್ಕಳಕಾವ್ಯ ಕಮ್ಮಟ, ಉಪನ್ಯಾಸ, ನೆರವೆರುತ್ತಿರುವದು ಕಲ್ಪವೃಕ್ಷದ ಹೆಮ್ಮೆಯ ಸಂಗತಿ.ವಿಜಯಪುರ ಜಿಲ್ಲೆಯ "ದೃವ ತಾರೆ "ಶ್ರೀ ಎಸ್. ವಿ. ಬಿರಾದಾರ ಇವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

"ಸಂಸ್ಥಾಪಕರ ಧಾರ್ಮಿಕ ವಿಚಾರ "
 ಮಗುವೆಂದರೆ ಹೇಗೆ? ಮಗುವಿನ ಗುಣಸ್ವಾಭಾವಗಳೇನು? ಇದಕ್ಕೆ ಯಾವ ರೀತಿಯ ಜವಾಬ್ದಾರಿಗಳೇ ಇರುವದಿಲ್ಲ. ಇದರ ಎಲ್ಲಾ ಭಾರವನ್ನು ತಾಯಿಯೇ ಹೊತ್ತಿರುವಳು, ಯಾವ ವಸ್ತುವನ್ನಾಗಲಿ ತಾಯಿ ಕೊಟ್ಟಾಗಲೇ ತೆಗೆದುಕೊಳ್ಳುವದು, ಕೊಟ್ಟಾಗ ಉಣ್ಣುವದು, ಕೊಟ್ಟಾಗ ಉಡುವದು. ಹೀಗೆ ಸದಾ ತಾಯಿ ಅಧಿನದಲ್ಲಿಯೇ ನಡೆಯುವದು. ಅದರಂತೆ ತಪಸ್ವಿಗಳು ಪರಮಾತ್ಮನೆಂಬ ತಾಯಿಯ ಇಚ್ಛೆಯಲ್ಲಿಯೇ ನಡೆದಿದ್ದಾರೆ. ಮಹಾತ್ಮನು ಸಂಪೂರ್ಣವಾಗಿ ದೇವರ ಅಧಿನನಾಗಿ, ಶಿಶುವಾಗಿ ಸಾಧನೆಯ ಶಿಖರವನ್ನೇರಿದ್ದಾನೆ. ತಾಯಿಯಾದ ಪರಮಾತ್ಮ ಆಸೆಗಳನ್ನು ನೆರೆವೆರಿಸುವನು. ಮಾನವರು ಯಾರು? ಮಹಾತ್ಮರು ಯಾರು? ಲೋಕದಾಸೆಗಳನ್ನು  ಹಿಡಿದವರೇ ಮಾನವರು, ಪರಲೋಕದಾಸೆಗಳನ್ನು ಹಿಡಿದವರೇ ಮಹಾತ್ಮರು ಎಂಬ ಧಾರ್ಮಿಕ ವಿಚಾರ ಹೊಂದಿರುವ ಎಸ್. ವಿ. ಬಿರಾದಾರ ರವರು ತಾಯಿಯಂತಿರುವ ಕಲ್ಪವೃಕ್ಷ  ಮಕ್ಕಳ ಜವಾಬ್ದಾರಿ ಹೊತ್ತು ಗುರಿ ಮುಟ್ಟಲು ಸಹಕಾರಿಯಾಗಿದೆ. ಇಲ್ಲಿ ಮಗುವಾಗಿ ಸಾಧನೆ ಶಿಖರವನ್ನೆರಲು ಕರೆ ನೀಡಿದ್ದಾರೆ.
- ಮಂಜುನಾಥ ಹಿರೇಮಠ. ದಂಡಸೋಲಾಪುರ(ಚಾಮನಾಳ), ಯುವ ಸಾಹಿತಿಗಳು ಮತ್ತು ಶಿಕ್ಷಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...