ಶುಕ್ರವಾರ, ಅಕ್ಟೋಬರ್ 22, 2021

ಗಜಲ್ - ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ, 9731514051.

ಕಂಡಂತೆ ಕಾಣದೆಯೇ ಮರೆಯಾದೆ ಯಾಕೆ ಸಖಿ
ಮಾತನಾಡದೆ ಹಾಗೆಯೇ ಮೌನವಾದೆ ಯಾಕೆ ಸಖಿ

ಅಂಗಾಂಗ ಇಂದ್ರಿಯಗಳು ನಿನಗಾಗಿ ಧ್ಯಾನಿಸುತ್ತಿವೆ
ನಿರಾಕಾರದ ಓಂಕಾರದಲ್ಲಿ ನಿಶಬ್ಧವಾದೆ ಯಾಕೆ ಸಖಿ

ಕರಿ ಮುಗಿಲ ಮೋಡವಾಗಿದೆ ನನ್ನೆಲ್ಲಾ ಕನಸುಗಳು
ಕರಗಿಸುವ ನಿನ್ನ ಮನವು ಗಟ್ಟಿಯಾಗಿದೆ ಯಾಕೆ ಸಖಿ

ಭೂಮ್ಯಾಕಾಶಗಳ ಒಂದು ಮಾಡಿ ನಿಂತೆಯೆಲ್ಲಿ  ನೀನು
ಮಿನುಗುವ ನಕ್ಷತ್ರದಂತೆ ಸ್ಥಿರವಾದೆ ಯಾಕೆ ಸಖಿ

ನನ್ನೆಲ್ಲಾ ಒಳಗೂ-ಹೊರಗಿನ ಪ್ರತ್ಯಕ್ಷ ಸಾಕ್ಷಿ ನೀನು
ನನ್ನೊಳಗೆ ಇಂದು ಬರಿಯ ನೆನಪಾದೆ ಯಾಕೆ ಸಖಿ
  
-- ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ
                        9731514051.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...