ಎಲ್ಲರಿಗೂ ಒಂದು ಆಸೆ ಇರತ್ತೆ, ನಾನು ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಆದರೆ ಆ ದೇವರು ಮಾತ್ರ ನಮ್ಮ ಆಸೆಗೆ ವಿರುದ್ಧವಾಗಿ ನಮ್ಮನ್ನು ಸೃಷ್ಟಿ ಮಾಡಿರುತ್ತಾನೆ. ಒಬ್ಬರಿಗೆ ಕಪ್ಪು ಬಣ್ಣ ಕೊಟ್ಟರೆ ಇನ್ನು ಕೆಲವರಿಗೆ ಶ್ವೇತ ವರ್ಣ ಅಂದರೆ ಬಿಳಿ ಬಣ್ಣ ಕೊಟ್ಟು ಅವರ ಅಂದಕ್ಕೆ ಕಳೆ ಬರೋ ಹಾಗೆ ಮಾಡುತ್ತಾನೆ. ಇನ್ನೂ ಕೆಲವರು ಅಂಗವಿಕಲರಾಗಿ ಹುಟ್ಟುತ್ತಾರೆ. ಇನ್ನೂ ಕೆಲವರು ಕಿವುಡುತನ, ಕುರುಡುತನದಿಂದ ಬಳಲುತ್ತಾರೆ. ಹ! ಪಾಪ ಅವರಿಗೂ ಒಂದು ಆಸೆ ಇದೆ ಅನ್ನುವುದೇ ಮರೆತಂತೆ.
ಬಣ್ಣ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ನೂರಾರು ಜನರಲ್ಲಿ ತಾವು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಅವರ ಮನದಾಳದಲ್ಲಿ, ಯಾಕೆ ಸಾಧ್ಯ ಇಲ್ಲ ಅಂದುಕೊಂಡು ನಾವೇ ಒಂದು ಹೆಜ್ಜೆ ಮುಂದೆ ಇಡಬೇಕು. ನಾವೆಲ್ಲರೂ ಭಾರತೀಯರು ನಾವು ಹೇಗೆ ಇದ್ದರು ಚೆನ್ನಾಗಿ ಕಾಣಿಸುತ್ತದೆ ನಮ್ಮ ಸಂಸ್ಕೃತಿಯನ್ನು ನಮ್ಮ ಮುಡಿಗೆ ಏರಿಸಿಕೊಂಡಾಗ ಎಂದು ಮುಂದೆ ಸಾಗೋಣ ಬನ್ನಿ....
ನಾವು ತೋಡುವ ಉಡುಪಿನಿಂದಲೇ ಪ್ರಾರಂಭಿಸೋಣ ನಾವು ಹಾಕಿದ ಬಟ್ಟೆಯಿಂದ ಜನ ನಮ್ಮನ್ನು ಆಡಿಕೊಳ್ಳುವುದರ ಬದಲು ನಮ್ಮ ಅಂದ ನೋಡಿ ಬಾಯಿ ತುಂಬಿ ಹರಿಸಬೇಕು. ನಾ ಹಣೆಗೆ ಇಟ್ಟ ಕುಂಕುಮ ನನ್ನ ಕಣ್ಣ ಅಂಚಲ್ಲಿ ಸೇರೆಯಾಗುವಂತೆ ಇರಬೇಕು. ನಮ್ಮ ಕಮಲದಂತ ಕಣ್ಣ್ ರೆಪ್ಪೆಗಳು ನಾಚುವಂತೆ ಕಪ್ಪು ಕಾರಡಿಗೆ ಹಚ್ಚಬೇಕು. ನಮ್ಮ ತುಟಿಗಳು ತಡವರಿಸುವಂತೆ ಬಣ್ಣದ ರಂಗು ಇಡಬೇಕು. ನಮ್ಮ ಕಿವಿಗಳಿಗೆ ಕೊಳಲಿನ ನಾದ ಕೇಳುವಂತೆ ಜುಮಕಿ ಹಾಕಿಕೊಂಡಾಗ, ಬಕುತಲೆ ತೆಗೆದ ಆ ಮದ್ಯೆ ತಲೆ ಬಿಂದಿಗೆ ಇಟ್ಟಾಗ ನಮ್ಮ ಮುಖ ಅರಳಿದ ತಾವರೆಯಂತೆ ಶೋಭಿಸುವುದು. ಇನ್ನೂ ನಮ್ಮ ಕೊರಳಿಗೆ ಪಳಪಳ ಹೊಳೆಯುವ ಹವಳದ ಸರ ಹಾಕಿಕೊಂಡು, ಆ ನೀಳ ಕೈಗಳಿಗೆ ನಾದ ಸ್ವರದಂತೆ ಕೇಳಿಸುವ ಬಳೆಗಾರ ತೋಡಿಸಿದ ಬಳೆ ಹಾಕಿದರೆ ಸಾಕು, ಅಂದಕ್ಕೆ ಅಂದ ಅನ್ನುವ ಪದ ನಿಮ್ಮ ಬಾಯಿಂದ ಮೊಳಗುವುದು ಬೇರೆ ಯಾರ ಹೊಗಳಿಕೆಯು ಬೇಡ. ಇನ್ನೂ ಕೊನೆಯದಾಗಿ ನಮ್ಮ ಕಾಲುಗಳಿಗೆ ಬೆಳ್ಳಿ ಕಾಲ್ಗೆಜ್ಜೆ ಹಾಕಿ ನಡೆದಾಡುವ ಗಳಿಗೆ ನಮ್ಮ ಪಾಲಿಗೆ ಅದೇ ಏಳಿಗೆ ಆಗಿರುತ್ತದೆ. ಅದಕ್ಕೆ ನಾವು ಹೇಗೆ ಇರಲಿ ನಾವು ನಾವಾಗಿರಬೇಕು. "ನಮ್ಮ ಶೃಂಗಾರ ನೋಡಿ ನಮ್ಮ ಸೌಂದರ್ಯ ಕೂಡಾ ನಾಚುವಂತೆ ನಾವೇ ಮಾಡಬೇಕು . ಅದಕ್ಕೆ ನಾವು ನಗುವನ್ನು ಆಭರಣಗಳನ್ನಾಗಿ ಮಾಡಿಕೊಂಡು, ನಮ್ಮ ಸಂಸ್ಕೃತಿಯನ್ನು ರೂಢಿಯಲ್ಲಿ ಇಡುತ್ತ ,ಸಂಪ್ರದಾಯ ಪಾಲಿಸುತ್ತಾ, ಆಚಾರ ವಿಚಾರಗಳ ಕಡೆ ಗಮನ ಕೊಡುತ್ತ, ನಮ್ಮ ಅಂದವನ್ನು ಹೆಚ್ಚಿಸುವ ಪ್ರಯತ್ನ ಮಾಡೊಣ...........
- ಸೌಮ್ಯ ಗಣಪತಿ ನಾಯ್ಕ
ಕಾನಸೂರು (ಉತ್ತರ ಕನ್ನಡ).
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ