ಗುರು ಇಲ್ಲದ ಗುರಿಯ
ಮುಟ್ಟಲಾಗದಯ್ಯ
ಅರಿವಿಲ್ಲದೆ ಜಯವ
ಕಾಣಲಾಗದಯ್ಯ....
ತಾಯಿಯು ಮೊದಲ ಗುರುವು
ಭಾಷೆಯ ಕಲಿಸುವಳು
ಮಾತೃಭಾಷೆಯ ಕಲಿಸುವಳು
ತುತ್ತನಿತ್ತು ಪ್ರೀತಿ ಉಣಿಸಿ
ಆನಂದವ ಪಡುವವಳು
ಮಕ್ಕಳ ಸಲಹುತ ನಲಿಯುವಳು...
ತಂದೆಯು ಎರಡನೆ ಗುರುವು
ನಡತೆಯ ಕಲಿಸುವನು
ಒಳ್ಳೆಯ ನಡತೆಯ ಕಲಿಸುವನು
ಎಷ್ಟೇ ಕಷ್ಟ ಇದ್ದರು ಬಾಳನು ಕಟ್ಟುವನು ನಮ್ಮ ಪೋಷಣೆ ಮಾಡುವನು...
ಶಿಕ್ಷಕ ಮೂರನೆ ಗುರುವು
ವಿದ್ಯೆಯ ಕಲಿಸುವನು
ಜೊತೆಗೆ ಬುದ್ಧಿಯ ತುಂಬುವನು
ಗಳಿಸುವ ಮಾರ್ಗ ತೋರುತ
ನೆಲೆ ನಿಲ್ಲಲು ಶ್ರಮಿಸುವನು
ಬಾಳಿಗೆ ಹೊಳಪನು ನೀಡುವನು...
ಸಾಧಕರೆಲ್ಲ ನಾಲ್ಕನೇ ಗುರುವು
ಸ್ಪೂರ್ತಿಯ ತುಂಬುವರು
ಅವರು ಮಾದರಿಯಾಗುವರು
ಅವರಂತೆ ನಾವಾಗಲು
ಏಣಿಯಾಗುವರು...ನಮಗೆ ಛಲವನು ತುಂಬುವರು...
ಸಮಯವೆ ದೊಡ್ಡ ಗುರುವು
ಪಾಠವ ಕಲಿಸುವುದು
ಬಗೆಬಗೆ ಪಾಠವ ಹೇಳುವುದು
ಜಾರಿದ ಸಮಯ ಮತ್ತೆ ಬಾರದು ಜಾಗೃತರಾಗಿರಿ ಸಮಯ ಪಾಲನೆ ಮಾಡಿರಿ
- ಎಚ್ ವಿ ಮೂರ್ತಿ,
ರಂಗಭೂಮಿ ನಟ, ನಿರ್ದೇಶಕ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ