ಸಾಕಿನ್ನು ಕೋಣೆಯೊಳಗೆ
ಕೂತು ಕೂತು ಕೊಳೆತಿದ್ದು
ಇನ್ನೇನಿದ್ದರು,ಕದವನ್ನು ಕಿತ್ತೆಸೆದು
ಬಯಲಿನತ್ತ ಹೆಜ್ಜೆ ಇಡಬೇಕು..
ಬಯಲಲ್ಲಿ ಬಯಲಾಗಬೇಕು..
ಕಾಳು ಕೂಡಿ ಇಟ್ಟಷ್ಟು
ಹುಳು ಆಡಿಯಾತು
ಅದಕ್ಕೆ ಬಯಲಲ್ಲಿ ಬಿತ್ತಬೇಕು
ಬಿತ್ತಿ ಮತ್ತೆ ಬಯಲಿಗೆ ಹಂಚಬೇಕು..
ಸಾಕಿನ್ನು ಪಂಕದಗಾಳಿ ಕುಡಿದಿದ್ದು
ಇನ್ನೇನಿದ್ದರು ಮಂದಾನೀಲನಿಗೆ
ಮೈಯೊಡ್ಡ,,
ಬಿಸಿಲಿನಲ್ಲಿ ಬೆಂದು,,
ಮಳೆಯಲ್ಲಿ ನೆಂದು,,
ಬಯಲಲ್ಲಿ ಬೆತ್ತಲಾಗಬೇಕು..
ಕೋಣೆಯೊಳಗಿನ
ರಸವಾಗುವ ಬದಲು
ಬಯಲಲ್ಲಿ ಕಸವಾಗ ಬೇಕು..
ಕಸ ಕೊಳೆತು ಮತ್ತೇ ರಸವಾದಿತು
ಅದಕ್ಕೆ ಬಯಲಿನತ್ತ ಹೆಜ್ಜೆ ಇಡಬೇಕು
ಕೋಣೆಯಲ್ಲಿ ಮುಗಿಲುಗೊಳ್ಳುವ ಮೊದಲು ಬಯಲಿನಲ್ಲಿ ಬೆವರಿ ಬಯಲಾಗಬೇಕು..
ಅದಕ್ಕೆ ಬಯಲಿನತ್ತ ಹೆಜ್ಜೆ ಇಡಬೇಕು..!
- ಗೌತಮ್ ಗೌಡ, ಕೀರಣಗೆರೆ, ರಾಮನಗರ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ