ಬುಧವಾರ, ಅಕ್ಟೋಬರ್ 20, 2021

ವಾಲ್ಮೀಕಿ ವನಗಾವ್ಯ (ಕವಿತೆ) - ಹನುಮಂತ ದಾಸರ ಹೊಗರನಾಳ‌.

ಕಾನನದಲಿ ಕಾವ್ಯವೆಂಬ ವೃಕ್ಷದಡಿ ಲೇಖನಿಯಂ ಪಿಡಿದು
ಕಲ್ಪನೆಯ ಲೋಕದೊಳ್ ಮುಳುಗಿ.
ಕಣ್ಮುಂದಾವರಿಸುವ ತುಸು ಕನಸುಗಳ ಸವಿದು
ವನಸಿರಿಗಳ ಮಧ್ಯೆಮಂ ಪ್ರಾಣಿ-ಪಕ್ಷಿಗಳ ಬಳಗದೊಳ್ ಬೆಂದು.
ಧ್ಯಾನದೊಳ್ ಮುಳುಗಿರ್ದೊಡೆ ಆಗಾಧ ಶಕ್ತಿಯೊಂದ್ ತಲೆಗಪ್ಪಳಿಸಿ ಧ್ಯಾನಮುಕ್ತನಾಗಿ "ರಾಮಾಯಣಂ" ಎಂಬ ಹಿರಿದಾದ ಕಾವ್ಯವಂ ರಚಿಸಿ,
 ವಾಲ್ಮೀಕಿ ಎಂಬ ಹುತ್ತವಂ ನಿನ್ನ ಸುತ್ತುವರೆದು ಎತ್ತಲೂ ಸಾಗದಂತಿತ್ತಾ ನಿನ್ನ ಚಿತ್ತವಂ.
 ಇತ್ತ ಮಹತ್ತರ ಜ್ಞಾನದಿಂ ಪಡೆದಾ ಶಕ್ತಿಯೊಳ್  ಸಂತ,ಕವಿ ಶ್ರೀ ಮಹರ್ಷಿ "ವಾಲ್ಮೀಕಿ" ಎಂತಾಗಿ ಕಾವ್ಯ ಭಂಡಾರದಿಂ ಬೆಳಗು ಹರಿಸಿ ಧನ್ಯರಾದಿರಿ ಸ್ವಾಮಿಯೇ ನೀವ್ ತುಳಿದೀ ಭವ್ಯ ಜಗದೊಳ್..‌.!!
 
 -ಹನುಮಂತ ದಾಸರ ಹೊಗರನಾಳ‌.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...