ಬುಧವಾರ, ಅಕ್ಟೋಬರ್ 20, 2021

ನೀ ಬಂದೆ ನನ್ನ ಬಾಳ ಪುಟದಲಿ (ಕವಿತೆ) - ಕೆ. ಬಿ.ಮಧು.

ಹರೆಯದ ವಯಸ್ಸಿನಲ್ಲಿ.
ನೀ ಕಂಡೆ ನನ್ನ ಕಣ್ಣುಗಳಲ್ಲಿ.
ಮದುವೆಯೆಂಬ ಮಂಟಪದಲ್ಲಿ.
ಮಾಂಗಲ್ಯ ಎಂಬ ಸೂತ್ರದಲ್ಲಿ.//

ಜೊತೆಯಾಗಿ ಕೈಹಿಡಿದು ಸಪ್ತಪತಿ ಎಲ್ಲಿ.
ಸಾಗಿದೆ ಪಯಣದ ಓಟದಲ್ಲಿ.
ಮುಪ್ಪಿನ ಕಡೆಯವರಿಗೂ ನಿನ್ನ ಜೊತೆಯಲಿ.
ನಡೆದೆ ನಿನ್ನ ದಾರಿಯಲ್ಲಿ.//

ಬಾಳೆಲ್ಲ ಸವಿಜೇನು ನಿನ್ನ ಜೊತೆಯಲ್ಲಿ.
ಪ್ರತಿಕ್ಷಣ ನನ್ನ ಮನದ ಅರಮನೆಯಲ್ಲಿ.
ಬಿಸಿಯುಸಿರಿನ ಹೃದಯ ಮಂದಿರದಲ್ಲಿ.
ನಾ ಬಂದೆ ನಿನ್ನ ಬಾಳ ಪುಟದಲಿ.//

ಕನಸುಗಳ ಹೊತ್ತು ನೀ ತಂದೆ.
ಬಾಳೆಲ್ಲಾ ಮಲ್ಲಿಗೆ ಹರುಷದಲ್ಲಿ.
ನಮ್ಮಿಬ್ಬರ ಪ್ರೇಮದ ಸುಳಿಯಲ್ಲಿ.
ನಂಬಿಕೆಗಳ ಸತ್ಯಾಸತ್ಯತೆಗಳ ಹಾದಿಯಲ್ಲಿ.//

ನೀ ನಡೆಯುವ ದಾರಿಯಲಿ.
ನನ್ನ ಹೆಜ್ಜೆಗಳ ಸಮ್ಮಿಲನದಲ್ಲಿ.
ಬದುಕಿಲ್ಲ ಹೊಸ ಚೈತನ್ಯದ ಚಿಲುಮೆಯಲ್ಲಿ.
ನೀ ಬಂದೆ ನನ್ನ ಬಾಳ ಪುಟದಲಿ.//
-  ಕೆ. ಬಿ.ಮಧು
 ಕೊತ್ತತ್ತಿ ಗ್ರಾಮ.
ಮಂಡ್ಯ ತಾಲೂಕು ,ಜಿಲ್ಲೆ.
 "ಭಾವುಕ ಮನ".

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...